ನಟಿ ಪೂಜಾ ಹೆಗ್ಡೆ ಮಾಲ್ಡೀವ್ಸ್​ನಿಂದ ಸೈಕ್ಲಿಂಗ್ ಫೋಟೋ ಶೇರ್ ಮಾಡಿದ್ದಾರೆ. ಇದನ್ನು ನೋಡಿ ನಟಿಯ ಕಾಲೆಳೆದಿದ್ದಾರೆ ನೆಟ್ಟಿಗರು

ಬಾಲಿವುಡ್ ಚೆಲುವೆ ಪುಜಾ ಹೆಗ್ಡೆ ಅವರು ಮಾಲ್ಡೀವ್ಸ್​ನಲ್ಲಿ ಬರ್ತ್​ಡೇ ಆಚರಿಸಿದ್ದಾರೆ. ಬರ್ತ್​ಡೇ ದಿನ ನಟಿ ಮಾಲ್ಡೀವ್ಸ್​ನಲ್ಲಿ ಹಾಯಾಗಿ ಒಂಟಿಯಾಗಿ ಎಂಜಾಯ್ ಮಾಡುವ ಫೋಟೋ ಶೇರ್ ಮಾಡಿದ್ದರು

ಈಗ ನಟಿ ಸೈಕ್ಲಿಂಗ್ ಮಾಡುವ ಫೋಟೋ ಶೇರ್ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಅಯ್ಯೋ ಮೇಡಂ ಸೈಕ್ಲಿಂಗ್ ಮಾಡೋಕೆ ಅಷ್ಟು ದೂರ ಹೋದಿರಾ?

ಮುಂಬೈನಲ್ಲಿ ಎಷ್ಟು ಜಾಗಗಳಿದ್ದವು ಎಂದು ಕಾಲೆಳದಿದ್ದಾರೆ

ಡಿವೋರ್ಸ್ ಬಳಿಕ ಆಧ್ಯಾತ್ಮದತ್ತ ನಿಹಾರಿಕಾ ಚಿತ್ತ! ಮೆಗಾಸ್ಟಾರ್ ಮಗಳ ಮುಂದಿನ ನಿಲುವೇನು?

ಆದರೆ ಮಾಲ್ಡೀವ್ಸ್ ಕಡಲತೀರದಲ್ಲಿ ಸೈಕ್ಲಿಂಗ್ ಮಾಡುವುದು ಕಾಮನ್. ಬಹಳಷ್ಟು ನಟಿಯರು ಈ ಹಿಂದೆ ಟ್ರಿಪ್ ಹೋಗಿದ್ದಾಗಲೂ ಈ ರೀತಿ ಫೊಟೋ ಶೇರ್ ಮಾಡಿಕೊಂಡಿದ್ದರು

ಹಾಗಾಗಿ ಪೂಜಾಗೂ ಇದು ಹೊಸದೇನಲ್ಲ

ನಟಿ ಇತ್ತೀಚೆಗೆ 33 ವರ್ಷಕ್ಕೆ ಕಾಲಿಟ್ಟಿದ್ದು ಮದುವೆ ಯಾವಾಗ ಎಂದು ರೇಗಿಸುತ್ತಿದ್ದಾರೆ ಅವರ ಅಭಿಮಾನಿಗಳು

ಕರಾವಳಿ ಚೆಲುವೆ ಪೂಜಾ ಹೆಗ್ಡೆ ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಹೆಚ್ಚು ಆ್ಯಕ್ಟಿವ್ ಆಗಿದ್ದಾರೆ

ಆಕರ್ಷಕ ಲೆಹೆಂಗಾದಲ್ಲಿ ತಮನ್ನಾ! ಬಿಂದಿ ಇಟ್ಟಿದ್ರೆ ಚೆನ್ನಾಗಿತ್ತು ಎಂದ ಫ್ಯಾನ್ಸ್

ಬೀಸ್ಟ್ ಸಿನಿಮಾ ಮೂಲಕ ವಿಜಯ್ ಜೊತೆಗೆ ತಮಿಳಿನಲ್ಲಿಯೂ ಮಿಂಚಿದ್ದಾರೆ. ಆದರೆ ಈ ಸಿನಿಮಾದ ಹಾಡು ಹಿಟ್​ ಆದರೂ ಸಿನಿಮಾ ಅಷ್ಟಾಗಿ ಹಿಟ್ ಆಗಲಿಲ್ಲ. ಮೂವಿ ರಿಲೀಸ್ ಆದಾಗ ಮಿಕ್ಸ್​ ರಿಯಾಕ್ಷನ್ ಬಂದಿತ್ತು

ನಟಿ ಪೂಜಾ ಅವರು ಕಿಸಿ ಕಾ ಭಾಯ್, ಕಿಸಿ ಕಿ ಜಾನ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸಿದ್ದರು

ಆದರೆ ಈ ಮೂವಿ ಹಿಟ್ ಆಗಲಿಲ್ಲ. ಬಹಳಷ್ಟು ಹೊಸ ಮುಖಗಳಿದ್ದರೂ ಈ ಮೂವಿ ಫ್ಲಾಪ್ ಆಯಿತು

ನಟಿಗೆ ಸದ್ಯ ಯಾವ ಸಿನಿಮಾ ಕೂಡಾ ಸಕ್ಸಸ್ ಕೊಡುತ್ತಿಲ್ಲ. ಹಾಗಾಗಿ ಪೂಜಾ ಹೆಗ್ಡೆಗೆ ತೆಲುಗಿನಲ್ಲಿ ಡಿಮ್ಯಾಂಡ್ ಕಮ್ಮಿಯಾಗಿದೆ. ನಟಿ ಮತ್ತೆ ಬಾಲಿವುಡ್​ನಲ್ಲಿ ಆ್ಯಕ್ಟಿವ್ ಆಗಿದ್ದಾರೆ

ನಟ ಸೂರ್ಯನ ಈ ಒಂದು ಗುಣಕ್ಕೆ ಕ್ಲೀನ್ ಬೋಲ್ಡ್ ಆದ್ರಂತೆ ಜ್ಯೋತಿಕಾ!