ವಿಶೇಷ ವೇಷದಲ್ಲಿ  ಪ್ರೀ ವೆಡ್ಡಿಂಗ್ ಫೋಟೋಶೂಟ್!

ನವ ಜೋಡಿಯ ವಿಭಿನ್ನ ಪ್ರೀ ವೆಡ್ಡಿಂಗ್ ಫೋಟೋ ಶೂಟ್  ವೈರಲ್ ಆಗಿದೆ

ಇತ್ತೀಚಿನ ದಿನಗಳಲ್ಲಿ ಮದುವೆ ಅಂದ್ರೆ ಪ್ರೀವೆಡ್ಡಿಂಗ್ ಶೂಟ್ ಇರಲೇಬೇಕು ಎನ್ನುವ ಟ್ರೆಂಡ್ ಜೋರಾಗಿದೆ.

ಇಲ್ಲೊಂದು ಜೋಡಿ, ತಮ್ಮ ಪ್ರೀವೆಡ್ಡಿಂಗ್ ಫೋಟೋಶೂಟ್ ಅನ್ನು ವಿನೂತನ ರೀತಿಯಲ್ಲಿ ಮಾಡಿಸಿದ್ದಾರೆ.

ವಿಭೀನ್ನವಾಗಿ ದೇಶಿಯ ಸಂಸ್ಕೃತಿಯಲ್ಲಿ ಮಾಡಿಸಿರುವ ಈ ಫೋಟೋಶೂಟ್ ಭಾರೀ ವೈರಲ್ ಆಗುತ್ತಿದೆ.

ಈ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿರುವುದು ಉತ್ತರಕನ್ನಡ ಹಾಗೂ ಶಿವಮೊಗ್ಗ ಮೂಲದ ಜೋಡಿ.

ಅದು ಯಕ್ಷಗಾನ ಹಾಗೂ ಭರತನಾಟ್ಯವನ್ನು ಬಿಂಬಿಸುವ ನೃತ್ಯರೂಪಕದಲ್ಲಿ.

ಕರ್ನಾಟಕದ ಪ್ರಸಿದ್ಧ ಕಲೆಯಾದ ಯಕ್ಷಗಾನ ಮತ್ತು ಭರತನಾಟ್ಯ ರೀತಿಯಲ್ಲಿ ಪ್ರೀವೆಡ್ಡಿಂಗ್ ಫೋಟೋಶೂಟ್ ಚಿತ್ರಿಸಿದ್ದಾರೆ.

ಇವರ ಈ ವಿಭೀನ್ನ ಪ್ರೀವೆಡ್ಡಿಂಗ್ ಫೋಟೋಶೂಟ್ಗೆ ಜಾಲತಾಣಿಗರು ಮೆಚ್ಚುಗೆಯ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ.

ಇದು ಇವರ ವಿವಾಹಪೂರ್ವ ಚಿಂತನೆಯೊಂದಕ್ಕೆ ಹಿಡಿದ ಕೈಗನ್ನಡಿಯಾಗಿದೆ.