ನಂಬಿಕೆಗಳ ಪ್ರಕಾರ ಪೂಜೆ ಮಾಡಲು ಸಹ ಕೆಲ ನಿಯಮಗಳಿದ್ದು, ಸಮಯ ಸಹ ಮುಖ್ಯವಾಗುತ್ತದೆ.

ಹಿಂದೂ ಧರ್ಮಗ್ರಂಥಗಳಲ್ಲಿ ಪೂಜೆಗೆ ಕೆಲವು ವಿಶೇಷ ನಿಯಮಗಳನ್ನು ಮಾಡಲಾಗಿದೆ.

ಪೂಜೆಯ ವಿಚಾರದಲ್ಲಿ ನಾವು ಅನೇಕ ನಿಯಮಗಳನ್ನ ಅನುಸರಿಸಬೇಕಾಗುತ್ತದೆ.

ನಾವು ಪೂಜೆಯ ವಿಚಾರದಲ್ಲಿ ಮಾಡುವ ತಪ್ಪುಗಳು ನಮಗೆ ಸಮಸ್ಯೆಗಳನ್ನ ಸೃಷ್ಟಿ ಮಾಡುತ್ತದೆ.

ಪೂಜೆಯ ನಿಯಮಗಳಲ್ಲಿ ಒಂದು ಮಧ್ಯಾಹ್ನ ಪೂಜೆ ಮಾಡಬಾರದು ಎನ್ನುವ ನಂಬಿಕೆ ಇದೆ.

ಮಧ್ಯಾಹ್ನದ ಸಮಯದಲ್ಲಿ ಮಾಡುವ ಪೂಜೆಯನ್ನ ದೇವತೆಗಳು ಸ್ವೀಕಾರ ಮಾಡುವುದಿಲ್ಲ ಎನ್ನಲಾಗುತ್ತದೆ.

ಮಧ್ಯಾಹ್ನ 12 ರಿಂದ 3 ಗಂಟೆಯ ಸಮಯ ದೇವತೆಗಳಿಗೆ ವಿಶ್ರಾಂತಿಯ ಸಮಯವೆಂದು ಪರಿಗಣಿಸಲಾಗಿದೆ.

ಈ ಸಮಯವನ್ನು ಅಭಿಜಿತ್ ಮುಹೂರ್ತ ಎಂದು ಕರೆಯಲಾಗುತ್ತದೆ.

ಮಧ್ಯಾಹ್ನ 12 ಗಂಟೆಯ ನಂತರ ದೇವರಿಗೆ ಯಾವುದೇ ಕಾರಣಕ್ಕೂ ನೀರು ಅರ್ಪಿಸಬಾರದು.

ಮುಖ್ಯವಾಗಿ ಮಧ್ಯಾಹ್ನ 12 ಗಂಟೆಯ ನಂತರ ಯಾವುದೇ ಕಾರಣಕ್ಕೂ ಶಿವ ಪೂಜೆ ಮಾಡಬಾರದು.