ಈ ಅವಕಾಶವನ್ನು ಅದ್ಭುತವಾಗಿ ಬಳಿಸಿಕೊಂಡ ರಚಿನ್ ಚೊಚ್ಚಲ ವಿಶ್ವಕಪ್ ಪಂದ್ಯದಲ್ಲಿಯೇ ಶತಕ ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು
ಅಲ್ಲದೇ ಚೊಚ್ಚಲ ಪಂದ್ಯದಲ್ಲಿಯೇ ಶತಕ ಸಿಡಿಸಿದ ಕಿವೀಸ್‌ನ 5ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.ಇದರ ನಡುವೆ ರಚಿನ್ ಮೂಲತಃ ಭಾರತೀಯ ಮೂಲದವರಾಗಿದ್ದಾರೆ
ಅದರಲ್ಲಿಯೂ ಅವರು ಬೆಂಗಳೂರಿನ ಮೂಲದವರಾಗಿರುವುದು ಕನ್ನಡಿಗರಿಗೆ ಮತ್ತೊಂದು ಹೆಮ್ಮೆಯ ವಿಷಯವಾಗಿದೆ.ರಚಿನ್ ತಂದೆ ಇಂಜಿನಿಯರ್ ಆಗಿ 90ರ ದಶಕದಲ್ಲಿ ನ್ಯೂಜಿಲ್ಯಾಂಡ್‌ಗೆ ತೆರಳಿದ್ದರು
ರಚಿನ್ ರವೀಂದ್ರ ಭಾರತೀಯ ಮೂಲದ ಆಟಗಾರರಾಗಿದ್ದು, ಅವರ ತಂದೆ ರವಿ ಕೃಷ್ಣಮೂರ್ತಿ ಸಾಫ್ಟ್‌ವೇರ್ ಇಂಜಿನಿಯರ್. ರಚಿನ್ 18 ನವೆಂಬರ್ 1999 ರಂದು ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್ ನಗರದಲ್ಲಿ ಜನಿಸಿದರು
ಇವರಿಬ್ಬರು ಒಂದಾಗಿದ್ದು ಆ ವ್ಯಕ್ತಿಗೆ ಚೂರು ಇಷ್ಟವಿಲ್ವಂತೆ! ಅದ್ಯಾರು ಅಂತ ಗೊತ್ತಾದ್ರೆ, ನಿಮ್ಗೂ ಕೋಪ ಬರುತ್ತೆ!
ಹೀಗಾಗಿ ವಿಶ್ವಕಪ್ ಮೊದಲ ಪಂದ್ಯದ ಬಳಿಕ ಅವರ ಬಗ್ಗೆ ಎಲ್ಲಡೆ ಸಾಕಷ್ಟು ಚರ್ಚೆಗಳು ಆರಂಭವಾದವು. ಇದರ ನಡುವೆ ಸ್ಟಾರ್ ಸ್ಪೋರ್ಟ್ಸ್ ನಡೆಸಿದ ಸಂವಾದದ ವೇಳೆ ರಚಿನ್ ಕನ್ನಡ ಬಾಷೆ ಅರ್ಥವಾಗುತ್ತದೆ ಆದರೆ ಮಾತನಾಡಲು ಬರುವುದಿಲ್ಲ ಎಂದು ಹೇಳಿದ್ದು ಕನ್ನಡಿಗರಿಗೆ ಸಂತಸತಂದಿದೆ
ಆದರೂ ಸಹ ರಚಿನ್ ಕನ್ನಡದಲ್ಲಿಯೂ ಮಾತನಾಡಿದ್ದಾರೆ. ಅವರು ‘ನನ್ನ ಹೆಸರು ರಚಿನ್‘ ಎಂದು ಕನ್ನಡದಲ್ಲಿ ಹೇಳಿರುವ ವಿಡಿಯೋಗಳು ಇದೀಗ ಎಲ್ಲಡೆ ಸಾಕಷ್ಟು ವೈರಲ್ ಆಗುತ್ತಿದೆ. ಇದನ್ನು ಸ್ಟಾರ್ ಸ್ಪೋರ್ಟ್ಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ
ರಚಿನ್ ತಂದೆ ರವಿ ಕೃಷ್ಣಮೂರ್ತಿ ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ದೊಡ್ಡ ಅಭಿಮಾನಿ
ರಚಿನ್ ಜನಿಸಿದಾಗ, ಅವರ ತಂದೆ ರಾಹುಲ್ ಅವರ ಆರ್ ಮತ್ತು ಸಚಿನ್ ಚಿನ್ ಅನ್ನು ಸಂಯೋಜಿಸಿ ಮಗನಿಗೆ ಹೆಸರಿಸಿದ್ದರಂತೆ. ಈ ರೀತಿಯಾಗಿ ಅವನ ಹೆಸರು ರಚಿನ್ ಆಯಿತು
ಸೆಂಚುರಿ ಬಾರಿಸಿದ್ರು ಟ್ರೋಲ್ ಆಗ್ತಿದ್ದಾರೆ ರೋಹಿತ್ ಶರ್ಮಾ! ಇವ್ರಿಗೂ, ವಡಾಪಾವ್‌ಗೂ ಏನು ಸಂಬಂಧ?