ರಘು ಜೀವನದ ಅಸಲಿ ಕಥೆಯನ್ನು ನೀವು ತಿಳಿದುಕೊಳ್ಳಬೇಕು.
ಯಾಕಂದ್ರೆ ಛಲ ಇದ್ದವನು ಹೇಗೆ ಸಾಧನೆ ಮಾಡುತ್ತಾನೆ ಎಂಬುವುದಕ್ಕೆ ಈ ರಾಘವೇಂದ್ರ ದ್ವಿಗಿ ಕಥೆಯೇ ಸಾಕ್ಷಿಯಾಗುತ್ತೆ.
ಆದ್ರೆ ಛಲ ಹಾಗೆ ಇರುತ್ತದೆ. ಈ ಕಾರಣದಿಂದ ಹುಬ್ಬಳ್ಳಿಯಲ್ಲಿ ಕ್ರಿಕೆಟಿಗರಿಗೆ ಕೈಯಿಂದ ಚೆಂಡೆಸೆಯುತ್ತಾ ಅವರ ಅಭ್ಯಾಸಕ್ಕೆ ಸಹಾಯ ಮಾಡುತ್ತಾರೆ.
ಅಲ್ಲಿ ಸಿಕ್ಕ ಗೆಳೆಯನೊಬ್ಬ ಬೆಂಗಳೂರಿಗೆ ದಾರಿ ತೋರಿಸುತ್ತಾರೆ, ಹೀಗೆ ಬೆಂಗಳೂರಿಗೆ ಬಂದವರು Karnataka Institute of Cricket. ಅಲ್ಲಿಗೆ ಅಭ್ಯಾಸಕ್ಕೆಂದು ಬರುತ್ತಿದ್ದ ಕರ್ನಾಟಕದ ಕ್ರಿಕೆಟಿಗರಿಗೆ ಬೌಲಿಂಗ್ ಮಷಿನ್ನಲ್ಲಿ ಅಭ್ಯಾಸ ಮಾಡಿಸುವುದು ರಾಘವೇಂದ್ರ ಅವರ ಕೆಲಸವಾಗುತ್ತದೆ.
ಇದರ ಮಧ್ಯೆ ಮಾಜಿ ವಿಕೆಟ್ ಕೀಪರ್, ಹಾಲಿ ಅಂಡರ್-19 ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ತಿಲಕ್ ನಾಯ್ಡು ಅವರ ಕಣ್ಣಿಗೆ ಬಿದ್ದ ರಾಘವೇಂದ್ರನ ಕೆಲಸವನ್ನು ತಿಲಕ್ ನಾಯ್ಡು, ನೋಡುತ್ತಾರೆ ರಾಜ್ಯದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರಿಗೆ ಪರಿಚಯ ಮಾಡುತ್ತಾರೆ.
ಈ ರೀತಿ 3-4 ವರ್ಷ ಒಂದು ರೂಪಾಯಿ ದುಡ್ಡು ತೆಗೆದುಕೊಳ್ಳದೆ ಕೆಲಸ ಮಾಡುತ್ತಾರೆ.
ರಾಘವೇಂದ್ರನ ಪ್ರತಿಭೆಯನ್ನು ಸಚಿನ್ ತೆಂಡೂಲ್ಕರ್ ಬೇಗನೆ ಗುರುತಿಸಿ ಬಿಡುತ್ತಾರೆ. ಹಾಗಾಗಿ 2011ರಲ್ಲಿ ಭಾರತ ತಂಡಕ್ಕೆ ಟ್ರೈನಿಂಗ್ ಅಸಿಸ್ಟೆಂಟ್ ಆಗಿ ಸೇರಿಕೊಳ್ಳುತ್ತಾರೆ.
ಕಳೆದ 13 ವರ್ಷಗಳಿಂದ ಭಾರತ ತಂಡದ ಜೊತೆ ಇರುವ ರಾಘು ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸುತ್ತಾ ಬಂದಿದ್ದಾರೆ.
ರಾಘವೇಂದ್ರನ ನಿರಂತರ ಶ್ರಮಕ್ಕೆ ಸಿಕ್ಕ ಉತ್ತರವೇ ಟಿ20 ವಿಶ್ವಕಪ್.