ಮೊದಲು ಒಂದು ಕುಕ್ಕರ್ ಗೆ ಸ್ವಲ್ಪ ನೀರನ್ನ ಹಾಕಿಕೊಂಡು ಅದಕ್ಕೆ ಬೇಳೆಕಾಳು , ಹುರುಳಿ ಕಾಳುಗಳನ್ನು ಹಾಕಿ ಕುಕ್ಕರ್ ನಲ್ಲಿ ಎರಡು ವಿಸಿಲ್ ಕೂಗಿಸಿಕೊಳ್ಳಬೇಕು
ನಂತರ ಅದಕ್ಕೆ ಚೆನ್ನಾಗಿ ಕತ್ತರಿಸಿದ ನುಗ್ಗೆ ಸೊಪ್ಪನ್ನು ಹಾಕಿ ಚೆನ್ನಾಗಿ ಬೆಯಸಿಕೊಳ್ಳಬೇಕು. ಸೊಪ್ಪು ಬೆಂದ ನಂತರ ಅದನ್ನು ಒಂದು ಪಾತ್ರೆಗೆ ಆ ಬೇಯಿಸಿದ ನೀರನ್ನ ಶೇಖರಣೆ ಮಾಡಬೇಕು
ನಂತರ ಸ್ವಲ್ಪ ಬಿಸಿ ಕಡಿಮೆಯಾದ ಮೇಲೆ ಅದನ್ನು ಈರುಳ್ಳಿ, ಬೆಳ್ಳುಳ್ಳಿ, ಸಾಸಿವೆ, ಮೆಣಸಿನಕಾಯಿ ಹಾಕಿಕೊಂಡು ಒಗ್ಗರಣೆ ಮಾಡಿ ಈ ಒಗ್ಗರಣೆಗೆ ನಾವು ಬೇಯಸಿಟ್ಟ ಸೊಪ್ಪನ್ನು ಒಗ್ಗರಣೆಯ ಜೊತೆಗೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು
ಮಿಕ್ಸ್ ಆದ ನಂತರದಲ್ಲಿ ಅದಕ್ಕೆ ತೆಂಗಿನಕಾಯಿ ತುರಿಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ಬಿಸಿಬಿಸಿ ನುಗ್ಗೆಕಾಯಿ ಸೊಪ್ಪಿನ ಪಲ್ಯ ರೆಡಿಯಾಗುತ್ತಾದೆ
ಇನ್ನೇನು ಸೊಪ್ಪು ಮತ್ತು ಕಾಳನ್ನು ಬೇಯಿಸಿದ ನೀರಿಗೆ ಜೀರಿಗೆ, ಮೆಣಸು ,ಕೊತ್ತಂಬರಿ ಸೊಪ್ಪು, ಹುಚ್ಚೆಳ್ಳು ಗಳನ್ನ ಮಿಕ್ಸಿಯಲ್ಲಿ ಹಾಕಿ ಅದನ್ನ ರುಬ್ಬಿಕೊಳ್ಳಬೇಕು
ರುಬ್ಬಿಕೊಂಡಂತಹ ಚಟ್ನಿಯನ್ನು ಬೇಯಿಸಿದ ನೀರಿಗೆ ಹಾಕಿದರೆ ರುಚಿಯಾದ ಉಪ್ಸಾರು ರೆಡಿ ಆಗುತ್ತೆ ನೋಡಿ. ಇನ್ನು ಇದರ ಜೊತೆಗೆ ಒಂದೊಳ್ಳೆ ಕ್ಯಾಂಬಿನೇಷನ್ ಎಂದರೆ ಅದು ರಾಗಿಮುದ್ದೆ
ಒಂದು ಪಾತ್ರೆಗೆ ಸ್ವಲ್ಪ ನೀರನ್ನು ಹಾಕಿಕೊಂಡು ಅದಕ್ಕೆ ಸ್ವಲ್ಪ ಉಪ್ಪು ಸ್ವಲ್ಪ ಎಣ್ಣೆಯನ್ನು ಹಾಕಿ ನೀರು ಕಾಯುವವರೆಗೆ ಬಿಡಬೇಕು
ಈಗ ಅದನ್ನ ಉಪ್ಸಾರು, ಕಾರ ಚಟ್ನಿ ಜೊತೆಗೆ ನುಗ್ಗೆ ಸೊಪ್ಪಿನ ಪಲ್ಯವನ್ನು ಹಾಕಿ ತಿಂದರೆ ಯಾವ ನಾನ್ ವೆಜ್ ಗೂ ಈ ಒಂದು ಊಟ ಸಮವಿಲ್ಲವೆನಿಸುತ್ತದೆ