ಸೌತ್ ಮತ್ತು ನಾರ್ತ್ ಚಿತ್ರರಂಗದಲ್ಲಿ ಸ್ಟಾರ್ ಹೀರೋಗಳಿಗೆ ಜೋಡಿಯಾಗಿ ಮಿಂಚಿರುವ ನಟಿ ರಾಕುಲ್ ಪ್ರೀತ್ ಸಿಂಗ್,

 ನಿಜ ಜೀವನದಲ್ಲಿ ತನ್ನ ಬಹುಕಾಲದ ಗೆಳೆಯನನ್ನು ಮದುವೆಯಾಗಿ ಬ್ಯಾಚುಲರ್ ಲೈಫ್ ಗೆ ಗುಡ್ ಬೈ ಹೇಳಿದ್ದಾರೆ

ಬುಧವಾರ ಗೋವಾದಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ಹಲವು ಗಣ್ಯರು ಪಾಲ್ಗೊಂಡಿದ್ದರು

ಬಾಲಿವುಡ್ ನಿರ್ಮಾಪಕ ಜಾಕಿ ಭಗ್ನಾನಿ ಅವರನ್ನು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ರಾಕುಲ್ ಪ್ರೀತ್ ಸಿಂಗ್ ಮೂರು ವರ್ಷಗಳ ನಂತರ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ

ಓ ಮಲ್ಲಿಗೆ ಚಾರುಲತಾ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ?

ಈ ಮದುವೆ ಸಮಾರಂಭದಲ್ಲಿ ರಾಕುಲ್ ಪ್ರೀತ್ ಸಿಂಗ್ ತುಂಬಾ ಖುಷಿಯಾಗಿ ಕಾಣಿಸಿಕೊಂಡಿದ್ದಾರೆ

ಫೆಬ್ರವರಿ 21 ರಂದು ಮಧ್ಯಾಹ್ನ 3:30 ಕ್ಕೆ ಗೋವಾದಲ್ಲಿ ರಾಕುಲ್ ಪ್ರೀತ್ ಸಿಂಗ್ ಅವರ ಮದುವೆ ನಡೆದಿದೆ

ಗೋವಾದ ಐಟಿಸಿ ಗ್ರ್ಯಾಂಡ್ ಸೌತ್ ಆನಂದ್ ಕರಾಜ್ ರೆಸಾರ್ಟ್‌ನಲ್ಲಿ ಪಂಜಾಬಿ ಸಂಪ್ರದಾಯದಲ್ಲಿ ವಿವಾಹವಾದರು

ಈ ಅದ್ಧೂರಿ ಸೆಲೆಬ್ರಿಟಿ ವಿವಾಹ ಸಮಾರಂಭದಲ್ಲಿ ಎರಡೂ ಕುಟುಂಬಗಳ ಸದಸ್ಯರು ಹಾಗೂ ಆಪ್ತರು ಮತ್ತು ಕೆಲವು ರಾಜಕೀಯ ವ್ಯಕ್ತಿಗಳು ಭಾಗವಹಿಸಿದ್ದರು. ನವ ದಂಪತಿಗಳನ್ನು ಆಶೀರ್ವದಿಸಿದರು

Kannada Movie: ಟಾಲಿವುಡ್‌ಗೆ ಹೊರಟ ಮಿಲನ ನಾಗರಾಜ್

ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಮದುವೆಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ

ಬಾಲಿವುಡ್ ಸೆಲೆಬ್ರಿಟಿಗಳಾದ ಶಿಲ್ಪಾ ಶೆಟ್ಟಿ, ಅವರ ಪತಿ ರಾಜ್ ಕುಂದ್ರಾ, ಟೈಗರ್ ಶ್ರಾಫ್, ಅಕ್ಷಯ್ ಕುಮಾರ್, ಶಾಹಿದ್ ಕಪೂರ್, ವರುಣ್ ಧವನ್, ಭೂಮಿ ಫಡ್ನೇಕರ್,

ಇಶಾ ಡಿಯೋಲ್ ಮತ್ತು ಸೋನಮ್ ಕಪೂರ್ ಸಮಾರಂಭದಲ್ಲಿ ಭಾಗವಹಿಸಿದ್ದರು