ದೇಶದಲ್ಲಷ್ಟೇ ಅಲ್ಲದೇ, ವಿದೇಶಗಳಲ್ಲೂ ರಾಮ ಜಪ ಶುರುವಾಗಿದೆ. ಎಲ್ಲಿ ನೋಡಿದರೂ ರಾಮನ ಫೋಟೋ 

ಎಲ್ಲಿ ಕೇಳಿದರೂ ರಾಮನ ಜಪವೇ ಕೇಳಿಸುತ್ತಿದೆ. ಈ ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾದು ಕುಳಿತಿದೆ

ಅಯೋಧ್ಯೆಯಲ್ಲಂತೂ ರಾಮನ ಭಕ್ತರ ಸಾಗರವೇ ಹರಿದು ಬಂದಿದೆ. ಇನ್ನೇನು ಕೆಲವೇ ಗಂಟೆಗಳು ಬಾಕಿ ಇರೋದ್ರಿಂದ ರಾಮಮಂದಿರದ ಸುತ್ತ-ಮುತ್ತ ಈಗಾಗಲೇ ಬಿಗಿ ಬಂದೋಬಸ್ತ್‌ ಮಾಡಲಾಗಿದೆ

ನಿನ್ನೆ ನ್ಯೂಜಿಲ್ಯಾಂಡ್‌ ಮಿನಿಸ್ಟರ್‌‌ ಜೈ ಶ್ರೀ ರಾಮ್‌ ಹೇಳಿದ್ದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು

ಶ್ರೀರಾಮ ಒಂದು ಧರ್ಮಕ್ಕೆ ಸೀಮಿತವಾದವನಲ್ಲ, ಎಲ್ಲಾ ಭಾರತೀಯರನ್ನು ಒಂದುಗೂಡಿಸುವ ಶಕ್ತಿಯಾಗಿದ್ದಾನೆ; ಮೋದಿ

ಇದೀಗ ಅಮೆರಿಕಾದ ಟೈಮ್‌ ಸ್ಕ್ವೇರ್‌ನಲ್ಲಿ ಹಬ್ಬಂದತೆ ಜನರು ರಾಮನ ಪ್ರಾಣ ಪ್ರತಿಷ್ಠೆಯನ್ನು ಸಂಭ್ರಮಿಸುತ್ತಿರೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ

ನ್ಯೂಯಾರ್ಕ್‌ನ ಟೈಮ್‌ ಸ್ಕ್ವೇರ್‌ನಲ್ಲಿ ಜನರು ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ಕೈಯಲ್ಲಿ ಕೇಸರಿ ಭಾವುಟ ಹಿಡಿದು, ಡೋಲು ಬಾರಿಸುತ್ತಾ ಜೈ ಶ್ರೀರಾಮ ಘೋಷಣೆ ಕೂಗುತ್ತಿದ್ದಾರೆ

ಈ ವಿಡಿಯೋ ನೋಡಿದರೆ ಖಂಡಿತ ಇದು ವಿದೇಶ ಅನ್ನಿಸುವುದಿಲ್ಲ. ಆ ರೀತಿ ಅಲ್ಲಿನ ಜನ ವಿಜೃಂಭಣೆಯಿಂದ ಸಂಭ್ರಮಿಸುತ್ತಿದ್ದಾರೆ

ಇನ್ನೂ ನ್ಯೂಯಾರ್ಕ್‌ನ ಟೈಮ್ಸ್‌ ಸ್ಕ್ವೇರ್‌ ಸಂಪೂರ್ಣ ರಾಮಮಯವಾಗಿದೆ ಅಂದ್ರೆ ತಪ್ಪಾಗಲ್ಲ. ಕೇವಲ ಹಿಂದೂಗಳಷ್ಟೇ ಅಲ್ಲ

ವಿದೇಶಿಗರು ಕೂಡ ಭಾರತೀಯರ ಜೊತೆ ಸೇರಿ ರಾಮನನ್ನು ಬರಮಾಡಿಕೊಳ್ಳುತ್ತಿದ್ದಾರೆ

ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಭಾರೀ ವೈರಲ್​ ಆಗಿದೆ