ಉತ್ತರ ಕನ್ನಡ: ರಾಖಿ ಹಬ್ಬ ಬಂತು! ನಿಮ್ಮ ಅಣ್ಣ-ತಮ್ಮಂದಿರಿಗೆ ರಾಖಿ ಕಳಿಸೋ ಎಲ್ಲಾ ತಯಾರಿನೂ ಮಾಡ್ಕೊಳ್ತಾ ಇದೀರಾ ಅಲ್ವಾ?
ಹಾಗಾದರೆ ನಮ್ಮ ಶಿರಸಿಯ ಸೌಪರ್ಣಿಕಾ ಅವರ ರಾಖಿಗಳನ್ನ ನೀವೊಮ್ಮೆ ನೋಡಲೇಬೇಕು! ಇವು ಹ್ಯಾಂಡ್ ಮೇಡ್ ರಾಖಿಗಳಿವು.
ರಾಮಲಲ್ಲಾ, ಕೃಷ್ಣ, ದೇವಿಯರ ರಾಖಿಗಳೂ ಕೂಡ ಸೌಪರ್ಣಿಕಾ ಅವರು ತಯಾರು ಮಾಡುತ್ತಿದ್ದಾರೆ. ಅಲ್ಲದೇ ಮಿನಿಯನ್ಸ್, ಭೀಮ್, ಡೋರೇಮಾನ್ ಸೇರಿದಂತೆ ಬೇರೆ ಬೇರೆಯ ಕಾರ್ಟೂನ್ ಗಳ ರಾಖಿಯೂ ಕೂಡ ಸ್ವಂತ ತಯಾರಿಸುತ್ತಿದ್ದಾರೆ.
ಈಗ ರಾಮಲಲ್ಲಾ ರಾಖಿಯು ಟ್ರೆಂಡ್ ಆಗುತ್ತಿದೆ. ಅಮೇರಿಕಾ, ಜಪಾನ್, ಆಸ್ಟ್ರೇಲಿಯಾ, ಇಂಗ್ಲೆಂಡ್, ದುಬೈ, ಜರ್ಮನಿಯ ಕಸ್ಟಮರ್ಸ್ ಇವರ ರಾಖಿಗಳನ್ನು ಇಷ್ಟಪಟ್ಟು ತೆಗೆದುಕೊಳ್ಳುತ್ತಾರೆ.
ತಮ್ಮದೇ “ಕ್ರಾಫ್ಟ್ ಖಝಾನ” ಎಂಬ ಆನ್‌ಲೈನ್ ವೆಬ್‌ಸೈಟ್ ಅನ್ನು ಹೊಂದಿರುವ ಇವರು ಹೋಮ್‌ಮೇಡ್ ಆಭರಣಗಳನ್ನು ತಯಾರಿಸಿ ಮಾರುತ್ತಿದ್ದಾರೆ.
ಕಳೆದ 7 ವರ್ಷಗಳಿಂದ ಹೋಮ್ ಮೇಡ್ ರಾಖಿಗಳನ್ನು ಮಣಿಗಳು, ಜರ್ಮನ್ ಸಿಲ್ವರ್ ಇತ್ಯಾದಿಗಳನ್ನು ಉಪಯೋಗಿಸಿ ಬೇರೆ ಬೇರೇ ಥೀಮ್ ನಲ್ಲಿ ಮಾಡುತ್ತಲೇ ಬಂದಿರುವ ಇವರು ತಮ್ಮ ರಾಖಿಯ ಪ್ಯಾಕಿಂಗ್ ಗೆ ಹೆಸರುವಾಸಿ. ಹೀಗಾಗಿ ಅಷ್ಟೇ ಪ್ರಮಾಣದ ಮಾರುಕಟ್ಟೆಯಿದೆ.
ಮುಂಬೈನ ಪ್ರಾಣ ಸ್ಟುಡಿಯೋದಲ್ಲಿ 3ಡಿ ಮತ್ತು ಸಿಜೆ ಆರ್ಟಿಸ್ಟ್ ಆಗಿ ಕೆಲಸ ಮಾಡಿರುವ ಸೌಪರ್ಣಿಕಾ ಇವರಿಗೆ ಈಗ 44 ವರ್ಷ ವಯಸ್ಸು. ತಮ್ಮ ರಾಖಿಗಳನ್ನು ಹವ್ಯಾಸಕ್ಕಾಗಿ ಮಾಡುತ್ತಿರುವ ಇವರು ಶ್ರೀ ರಾಮಲಲ್ಲಾ ರಾಖಿ, ಕೃಷ್ಣ ರಾಖಿ, ಮಹಾದೇವ ರಾಖಿ, ಗಣೇಶ ರಾಖಿ, ಎಲೆಗೆಂಟ್ ರಾಖಿ, ಮಕ್ಕಳ ರಾಖಿ, ವುಡೆನ್ ರಾಖಿ, ಅಣ್ಣ-ಅತ್ತಿಗೆ ರಾಖಿ ಎಂಬ ವಿಧಗಳ ರಾಖಿ ಡಿಸೈನುಗಳಿವೆ. ಪ್ರತಿ ವಿಭಾಗದಲ್ಲೂ 8-10 ಡಿಸೈನ್ ಗಳಿದ್ದಾವೆ.
ತಮ್ಮ ಹವ್ಯಾಸಕ್ಕಾಗಿ ಮಾಡುತ್ತಿರುವ ಇಷ್ಟು ಚಂದದ ರಾಖಿಗಳು 100 ರಿಂದ ಶುರುವಾಗಿ 200 ಒಳಗೆ ಇರುವುದು ಗ್ರಾಹಕ ಸ್ನೇಹಿಯಾಗಿದೆ. ನಿಮಗೂ ಇಂತಹ ರಾಖಿ ಬೇಕಿದ್ದರೆ Craft Khazana ದಲ್ಲಿ ಕೊಂಡುಕೊಳ್ಳಬಹುದು. ನಮ್ಮ ಶಿರಸಿಯ ಹುಡುಗಿಯ ರಾಖಿಗಳು ಅಂತರಾಷ್ಟ್ರೀಯ ಮಾರುಕಟ್ಟೆ ಹೊಂದಿದ್ದು ಹೆಮ್ಮೆಯಲ್ಲವೇ?!
ಮಲಗಿದಾಗ ಕುತ್ತಿಗೆ ಹಿಸುಕಿದಂತಾಗುತ್ತಾ? ಇದೇನು ದೆವ್ವದ ಕಾಟಾನಾ?