ಗ್ರೀನ್ ಎಂಬ್ರಾಯ್ಡರಿ ಸೀರೆ ಉಟ್ಟಿದ್ದ ನಟಿ ಮುದ್ದಾಗಿ ಕಾಣಿಸಿದ್ರು
ರಶ್ಮಿಕಾ ಲುಕ್ ನೋಡಿ ಯುವಕರ ಎದೆಬಡಿತ ಜೋರಾಯ್ತು
ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಇವೆಂಟ್ ಒಂದರಲ್ಲಿ ಭಾಗಿಯಾಗಲು ಕೇರಳಕ್ಕೆ ಬಂದಿದ್ದರು.
ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದಿಂದ ಸಿನಿ ಜರ್ನಿ ಆರಂಭಿಸಿದ ಈ ಚೆಲುವೆ ಈಗ ಟಾಪ್ ನಟಿ.
ನಟಿ ಆಕರ್ಷಕವಾದ ಹಸಿರು ಸೀರೆ ಉಟ್ಟು ಅದಕ್ಕೆ ಮ್ಯಾಚಿಂಗ್ ಸ್ಲೀವ್ಲೆಸ್ ಬ್ಲೌಸ್ ಧರಿಸಿಕೊಂಡಿದ್ದರು.
ರಶ್ಮಿಕಾ ಆಕರ್ಷಕವಾದ ಲುಕ್ ಅವರನ್ನು ಅಪ್ಸರೆಯಂತೆ ಕಾಣುವಂತೆ ಮಾಡಿದೆ.
ನಟಿ ಬೆನ್ನು ತೋರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು ಅವರ ಈ ಲುಕ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.
ರಶ್ಮಿಕಾ ಕಂಪ್ಲೀಟ್ ಲುಕ್ ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಿದೆ ಎನ್ನಬಹುದು.
ಹಾರ್ಟ್ ಗ್ರೀನ್ ಹ್ಯಾಂಡ್ ಪರ್ಸ್ ಹಿಡಿದುಕೊಂಡಿದ್ದು ಇದನ್ನು ಸೀರೆಗೆ ಬೇಕಾದಂತೆ ಕಸ್ಟಮೈಸ್ ಮಾಡಲಾಗಿದೆ.
ರಶ್ಮಿಕಾ ಮಂದಣ್ಣ ಅವರು ಅನಿಮಲ್ ಸಿನಿಮಾದಲ್ಲಿ ಭರ್ಜರಿಯಾಗಿ ಮಿಂಚಿದ್ದರು.
ನಟಿ ರಶ್ಮಿಕಾ ಪುಷ್ಪ 2 ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ.