ಹಿಂದೂ ಧರ್ಮದಲ್ಲಿ ಅನೇಕ ನಿಯಮಗಳಿದೆ. ಅದರಲ್ಲಿ ಒಂದು ಶುಭಕಾರ್ಯದಲ್ಲಿ ಕೆಂಪು ಬಣ್ಣವನ್ನ ಧರಿಸಬೇಕು ಎಂಬುದು
ಇದರ ಹಿಂದೆ ಅನೇಕ ಕಾರಣಗಳಿದೆ. ಹಾಗಾದ್ರೆ ಹಿಂದೂ ಧರ್ಮದಲ್ಲಿ ಕೆಂಪು ಬಣ್ಣಕ್ಕೆ ಏಕೆ ಇಷ್ಟೊಂದು ಮಹತ್ವವಿದೆ ಎಂಬುದು ಇಲ್ಲಿದೆ
ಪ್ರೀತಿಯ ಬಣ್ಣ ಕೆಂಪು ಎನ್ನುವ ಮಾತಿದೆ. ಇದನ್ನು ಪ್ರೀತಿಗೆ ಹೋಲಿಸಲಾಗುತ್ತದೆ. ಆದರೆ ನಿಮಗೆ ಗೊತ್ತಾ ಈ ಕೆಂಪು ಬಣ್ಣ ನಮ್ಮ ಹಣೆಬರಹವನ್ನ ನಿರ್ಧಾರ ಮಾಡುತ್ತದೆ
ಹೌದು,. ಹಿಂದೂ ಧರ್ಮದಲ್ಲಿ ಕೆಂಪು ಬಣ್ಣವು ಹೆಚ್ಚು ಮಹತ್ವವನ್ನ ಹೊಂದಿದೆ
2024ರಲ್ಲಿ ಈ ರಾಶಿಯವರ ಮೇಲೆ ರಾಹು ಕೋಪ, 18 ತಿಂಗಳು ನರಕ ದರ್ಶನ
ಕೆಂಪು ಬಣ್ಣವನ್ನ ಹಿಂದೂ ಧರ್ಮದ ಪ್ರತಿಯೊಂದು ಆಚರಣೆ ಅಥವಾ ಹಬ್ಬಗಳಲ್ಲಿ ಬಳಕೆ ಮಾಡಲಾಗುತ್ತದೆ. ವಿಶೇಷವಾಗಿ ಹಿಂದೂ ವಿವಾಹಗಳಲ್ಲಿ
ವಧುವಿನ ಉಡುಪಿನಿಂದ ಹಿಡಿದು ಸಿಂಧೂರದವರೆಗೆ ಎಲ್ಲದರಲ್ಲೂ ಕೆಂಪು ಬಳಕೆ ಮಾಡಲಾಗುತ್ತದೆ
ನಂಬಿಕೆಗಳ ಪ್ರಕಾರ ಈ ಕೆಂಪು ಬಣ್ಣವು ಬೆಚ್ಚಗಿನ ಭಾವನೆಯನ್ನ ನೀಡುತ್ತದೆ ಇದು ವ್ಯಕ್ತಿಯಲ್ಲಿ ವಿಭಿನ್ನ ರೀತಿಯ ಶಕ್ತಿಯನ್ನು ಉತ್ಪಾದಿಸುತ್ತದೆ ಎನ್ನಲಾಗುತ್ತದೆ
ಇದು ನಿಮ್ಮಲ್ಲಿರುವ ಭಾವನೆಗಳನ್ನು ಹೊರತರಲು ಸಹಾಯ ಮಾಡುತ್ತದೆ
ಕೆಂಪು ಬಣ್ಣವು ನಿಮ್ಮ ಮಹತ್ವಾಕಾಂಕ್ಷೆಗಳನ್ನು ಹೊರತರುತ್ತದೆ. ಸಿಂಧೂರ ಅಥವಾ ಕುಂಕುಮ ಪಾರ್ವತಿಯ ಸಂಕೇತವಾಗಿದೆ
ಹಾಗಾಗಿ ಮಹಿಳೆಯರು ಇದನ್ನ ಧರಿಸಿದರೆ ಗಂಡನ ಆಯಸ್ಸು ಹೆಚ್ಚಾಗುತ್ತದೆ ಎನ್ನಲಾಗುತ್ತದೆ
ಕೆಂಪು ಬಣ್ಣವನ್ನು ಗೌರವದ ಸಂಕೇತ ಎಂದೂ ಸಹ ಪರಿಗಣಿಸಲಾಗಿದೆ. ಇದರಿಂದ ನಮ್ಮ ಜೀವನದಲ್ಲಿ ಅನೇಕ ಬದಲಾವಣೆ ಸಹ ಆಗುತ್ತದೆ. ಅಲ್ಲದೇ, ಈ ಕೆಂಪು ಬಣ್ಣ ಅದೃಷ್ಟದ ಸಂಕೇತ ಎನ್ನಲಾಗುತ್ತದೆ
ಕೆಂಪು ಬಣ್ಣವು ಕಾಮಾಸಕ್ತಿಯನ್ನು ಪ್ರಚೋದಿಸುವ ಧನಾತ್ಮಕ ಶಕ್ತಿಯನ್ನು ಹೊಂದಿದೆ ಎನ್ನಲಾಗುತ್ತದೆ. ಇದು ನಮ್ಮ ಇಂದ್ರಿಯತೆಯಗಳನ್ನ ಪ್ರಚೋದಿಸುತ್ತದೆ
ಕಾಂತಾರ ಹಿಟ್ ಆಯ್ತು ಎಂದು ಪರಭಾಷೆಗೆ ಹೋಗಲ್ಲ, ಕನ್ನಡ ಬಿಡಲ್ಲ ಎಂದ ರಿಷಬ್!