ಇಂದಿರಾ ಕ್ಯಾಂಟೀನ್‌ಗಿಂತ ಮೊದಲಿಂದಲೇ ಹುಬ್ಬಳ್ಳಿಯಲ್ಲಿ ಸಿಗ್ತಿದೆ 1 ರೂಪಾಯಿಗೆ ಭರ್ಜರಿ ಊಟ!
ವಾಣಿಜ್ಯ ನಗರಿ ಹುಬ್ಬಳ್ಳಿಗೆ ನಿತ್ಯ ಲಕ್ಷಾಂತರ ಜನ ಬಂದು ಹೋಗ್ತಾರೆ.
ಹುಬ್ಬಳ್ಳಿಯಲ್ಲಿ ಒಂದು ರೂಪಾಯಿ ಇದ್ರೆ ಸಾಕು, ನಿಮಗೆ ಹೊಟ್ಟೆ ತುಂಬಾ ಊಟ ಸಿಗುತ್ತೆ
ಕಾರ್ಮಿಕರು, ಇಂಥವರನ್ನು ಲಕ್ಷ್ಯದಲ್ಲಿಟ್ಟುಕೊಂಡೇ ರೋಟಿ ಘರ್ ಆರಂಭಗೊಂಡಿದೆ.
ರೋಟಿ ಘರ್‌ನ್ನು ಮಹಾವೀರ ಯೂತ್ ಫೆಡರೇಶನ್ ಆರಂಭಿಸಿದೆ.
ಪ್ರತಿ ದಿನ ಮಧ್ಯಾಹ್ನ 12.15 ರಿಂದ 2.15 ರವರೆಗೆ ಊಟ ಸಿಗಲಿದೆ.
ನಿತ್ಯ ಕನಿಷ್ಟ 200 ಜನ ಇಲ್ಲಿ ಊಟ ಮಾಡ್ತಾರೆ. ಕೇವಲ ಒಂದು ರೂಪಾಯಿ ಅಂತ ಒಂದೇ ಮೆನು ಅಂದ್ಕೋಬೇಡಿ.
ಒಂದು ದಿನ ಅನ್ನ ಸಾಂಬರ್, ಮತ್ತೂಂದು ದಿನ ಪಲಾವ್-ಮೊಸರು, ಮಗದೊಂದು ದಿನ ಅನ್ನ-ಮಜ್ಜಿಗೆ ಸಾರು.
ರವಿವಾರದ ಊಟದಲ್ಲಿ ಚಿತ್ರಾನ್ನದ ಜೊತೆ ಸಿಹಿ ಕೊಡಲಾಗುತ್ತೆ. ವಾರದಲ್ಲಿ ಎರಡು ದಿನ ಚಪಾತಿ ಭಾಜಿ ಪಲ್ಲೆ ನೀಡಲಾಗುತ್ತೆ.
ರುಚಿ– ಶುಚಿಯ ಜೊತೆ, ಶುದ್ಧ ಕುಡಿಯುವ ನೀರೂ ಪೂರೈಕೆ ಮಾಡಲಾಗುತ್ತದೆ.