ಕಿಚ್ಚ ಸುದೀಪ್ ಐಷಾರಾಮಿ ಜೀವನ, ಆಸ್ತಿ ಎಷ್ಟು ಗೊತ್ತಾ?

ಬೆಂಗಳೂರಲ್ಲಿ ಐಷಾರಾಮಿ ಹೌಸ್, ಮುಂಬೈನಲ್ಲೂ ಇದೆ ಕೋಟಿ ಕೋಟಿ ಆಸ್ತಿ!

ಅಭಿನಯ ಚಕ್ರವರ್ತಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಬಹುಬೇಡಿಕೆ ನಟ ಕಿಚ್ಚ ಸುದೀಪ್.

ಕನ್ನಡದ ಶ್ರೀಮಂತ ನಟರಲ್ಲಿ ಕಿಚ್ಚ ಸುದೀಪ್ ಕೂಡ ಒಬ್ಬರಾಗಿದ್ದಾರೆ.

ಕಿಚ್ಚ ಸ್ಯಾಂಡಲ್ವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಕೂಡ ಆಗಿದ್ದಾರೆ.

‘ಸ್ಪರ್ಶ’ ಸಿನಿಮಾ ಮೂಲಕ ಇಂಡಸ್ಟ್ರಿಗೆ ಕಾಲಿಟ್ಟ ಕಿಚ್ಚ ಸುದೀಪ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಶ್ರೀಮಂತ ನಟರಲ್ಲಿ ಒಬ್ಬರಾದ ಸುದೀಪ್ ಐಷಾರಾಮಿ ಜೀವನವನ್ನೇ ನಡೆಸುತ್ತಿದ್ದಾರೆ.

ಸುದೀಪ್ ಬ್ರ್ಯಾಂಡ್ ಪ್ರಚಾರಕ್ಕಾಗಿ ಬರೋಬ್ಬರಿ 5 ಕೋಟಿ ರೂ ಪಡೆಯುತ್ತಾರೆ ಎಂದು ವರದಿ ಆಗಿದೆ.

ಐಷಾರಾಮಿ ಜೀವನ ನಡೆಸುತ್ತಿರುವ ನಟ ಸುದೀಪ್ ಅವರು ಬೆಂಗಳೂರಿನಲ್ಲಿ ಸ್ವಂತ ಬಂಗಲೆ ಹೊಂದಿದ್ದಾರೆ.

ಈ ಮನೆ  20 ಕೋಟಿ ಬೆಲೆ ಬಾಳುತ್ತದೆ ಎಂದು ಅಂದಾಜಿಸಲಾಗಿದೆ.

ಮುಂಬೈನಲ್ಲಿ ನಟ ಸುದೀಪ್ ಅವರು ತಮ್ಮದೇ ಫಾರ್ಮ್ ಹೌಸ್ ಹೊಂದಿದ್ದಾರೆ ಎನ್ನಲಾಗ್ತಿದೆ.

ನಟ ಕಿಚ್ಚ ಸುದೀಪ್ ಅವರ ಒಟ್ಟು ಆಸ್ತಿ ಸರಿಸುಮಾರು 125 ಕೋಟಿ ರೂಪಾಯಿ ಇದೆಯಂತೆ.