ಕನ್ನಡದ ಸ್ಟಾರ್ ಡೈರೆಕ್ಟರ್ ತರುಣ್‌ ಸುಧೀರ್‌ ಹಾಗೂ ನಟಿ ಸೋನಲ್ ಅದ್ಧೂರಿ ಮದುವೆ

ತಾಳಿ ಕಟ್ಟಿದ ಬಳಿಕ ಸೋನಲ್ ಹಣೆಗೆ ತರುಣ್ ಪ್ರೀತಿಯ ಮುತ್ತಿಟ್ಟಿದ್ದಾರೆ.

ಇಲ್ಲಿದೆ ಸ್ಯಾಂಡಲ್ ವುಡ್ ಬ್ಯೂಟಿಫುಲ್ ಜೋಡಿಯ ಚೆಂದದ ಫೋಟೋಸ್

ತರುಣ್ ಸುಧೀರ್ ಮತ್ತು ನಟಿ ಸೋನಲ್ ಕೆಲ ವರ್ಷಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು.

ಬಳಿಕ ಎರಡೂ ಕುಟುಂಬ ಗಳನ್ನು ಒಪ್ಪಿಸಿ ಮದುವೆಯ ಮೂಲಕ ಒಂದಾಗಿದ್ದಾರೆ.

ಬೆಂಗಳೂರಿನ ಪೂರ್ಣಿಮಾ ಪಾಲೇಸ್‌ನಲ್ಲಿಯೇ ಈ ಜೋಡಿ ಮದುವೆ ನೆರವೇರಿದೆ.

ತರುಣ್-ಸೋನಲ್ ತುಲಾ ಲಗ್ನ ಮುಹೂರ್ತದಲ್ಲಿಯೇ ಮಾಂಗಲ್ಯದ ಧಾರಣೆ ನಡೆದಿದೆ.

ತರುಣ್-ಸೋನಲ್ ಮದುವೆಗೆ ಸಿನಿಮಾರಂಗ ಹಾಗೂ ರಾಜಕಾರಣಿಗಳು ಸಾಕ್ಷಿ ಆಗಿದ್ದಾರೆ.

ಹಿಂದೂ ಸಂಪ್ರದಾಯದಂತೆ ಈ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

ಹಿಂದೂ ಸಂಪ್ರದಾಯದಂತೆ ನಡೆದ ಈ ಮದುವೆಗೆ ಗಣ್ಯಾತಿ ಗಣ್ಯರು ಹಾಗೂ ಸಿನಿಮಾ ಗಣ್ಯರು ಆಗಮಿಸಿದ್ದರು.

ತರುಣ್ ಹಾಗೂ ಸೋನಲ್ ಪ್ರೀತಿ ಗಿಡಕ್ಕೆ ನೀರು ಹಾಕಿ ಬೆಳೆಸಿದ್ದು ನಟ ದರ್ಶನ್ ಎನ್ನಬಹುದು.