ಕನ್ನಡತಿ ಧಾರಾವಾಹಿ ನಟಿ ಸಾರಾ ಅಣ್ಣಯ್ಯ ಅವರು ಗಣೇಶ ಚತುರ್ಥಿ ದಿನ ವಿಶೇಷವಾದ ಫೋಟೋಶೂಟ್ ಶೇರ್ ಮಾಡಿದ್ದಾರೆ. ಇಲ್ಲಿವೆ ಫೋಟೋಸ್

ಕನ್ನಡ ಧಾರಾವಾಹಿ ಕನ್ನಡತಿ ಮೂಲಕ ಖ್ಯಾತಿ ಪಡೆದ ನಟಿ ಸಾರಾ ಅಣ್ಣಯ್ಯ ಅವರು ಗೌರಿ ಗಣೇಶನೊಂದಿಗೆ ಪೋಸ್ ಕೊಟ್ಟಿದ್ದಾರೆ. ವರೂಧಿನಿ ಪಾತ್ರದಲ್ಲಿ ಮಿಂಚಿದ ಕೊಡಗಿನ ಬೆಡಗಿ ಹಬ್ಬದ ಸಂದರ್ಭ ಈ ಷ್ಪೆಷಲ್ ಫೋಟೋಶೂಟ್ ಶೇರ್ ಮಾಡಿದ್ದು ಅವರ ಅಭಿಮಾನಿಗಳಿಗೆ ಇಷ್ಟವಾಗಿದೆ

ಸಾರಾ ಅಣ್ಣಯ್ಯ ಅವರು ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ. ನಟಿ ಆಗಾ ಫೋಟೋ, ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ

ಈಗ ಗೌರೀ ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ಸಾರಾ ಅಣ್ಣಯ್ಯ ಸಾಂಪ್ರದಾಯಿಕವಾಗಿ ರೆಡಿಯಾಗಿ ಹಬ್ಬದ ವೈಬ್ಸ್ ಎಂಜಾಯ್ ಮಾಡಿದ್ದಾರೆ. ಸುಂದರವಾದ ಝರಿ ಸೀರೆ ಉಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ

ಸಾರಾ ಎಕ್ಸ್​ಪ್ರೆಷನ್ ಕ್ವೀನ್ ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ. ನಟಿ ತುಂಬಾ ಕ್ಯೂಟ್ ಆಗಿದ್ದಾರೆ. ಪ್ರತಿ ಫೋಟೋಶೂಟ್ ನಲ್ಲಿಯೂ ಏನಾದರೂ ಫನ್ನಿ ಎಕ್ಸ್ ಪ್ರೆಷನ್ ಕೊಟ್ಟು ಅದನ್ನು ಎಂಜಾಯ್ ಮಾಡುತ್ತಾರೆ

ನಟಿ ಗಣೇಶನನ್ನು ಕೈಯಲ್ಲಿ ಹಿಡಿದು ಸ್ಮೈಲ್ ಕೊಟ್ಟಿದ್ದಾರೆ. ಗಣೇಶ ಹಬ್ಬದ ಕುರಿತು ಬಹುತೇಕ ಎಲ್ಲರಿಗೂ ವಿಶೇಷವಾದ ನಂಟಿರುತ್ತದೆ. ಸಾರ್ವಜನಿಕವಾಗಿಯೂ, ಮನೆಗಳಲ್ಲಿಯೂ ಜನರು ಸಂಭ್ರಮದಿಂದ ಗಣೇಶ ಚತುರ್ಥಿಯನ್ನು ಆಚರಿಸುತ್ತಾರೆ

ನಟಿ ಸುಂದರವಾದ ಹಳದಿ ಬಣ್ಣದ, ನೇರಳೆ ಬಾರ್ಡರ್ ಇದ್ದಂತಹ ಸೀರೆ ಉಟ್ಟಿದ್ದಾರೆ. ಈ ಸೀರೆ ಉಟ್ಟು ಫುಲ್ ವೈಬ್ಸ್ ನಲ್ಲಿ ಕಾಣಿಸಿಕೊಂಡಿದ್ದುಅವರ ಬ್ಲೌಸ್ ಕೂಡಾ ತುಂಬಾ ಸುಮದರವಾಗಿತ್ತು

ಸರ್ವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು ಎಂದು ನಟಿ ಪೋಸ್ಟ್ ಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. ಇದನ್ನು ನೋಡಿದ ಅವರ ಅಭಿಮಾನಿಗಳು ಕಮೆಂಟ್ ಮಾಡಿ ಪ್ರತಿಯಾಗಿ ಶುಭಾಶಯಗಳನ್ನು ತಿಳಿಸಿದ್ದಾರೆ

ಹತ್ತು ನಿಮಿಷದಲ್ಲಿಯೇ ನಟಿಯ ಫೋಟೋಗೆ ನೂರಾರು ಲೈಕ್ಸ್ ಬಂದಿದೆ. ಫ್ಯಾನ್ಸ್ ನಟಿಯ ಫೋಟೋಸ್ ಶೇರ್ ಮಾಡುತ್ತಿದ್ದಾರೆ

ಗ್ರ್ಯಾಂಡ್ ಆಗಿದ್ದ ಟೆಂಪಲ್ ಜ್ಯುವೆಲ್ಲರಿ ಧರಿಸಿದ್ದರು ಸಾರಾ ಅಣ್ಣಯ್ಯ. ಗ್ರ್ಯಾಂಡ್ ನೆಕ್ಲೆಸ್ ಹಾಗೂ ಅಂದವಾದ ಇಯರಿಂಗ್ಸ್ ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿತ್ತು