ಬೇಸಿಗೆ ಸಮಯದಲ್ಲಿ ವಿದ್ಯುತ್ ಉಳಿತಾಯ ಯಾವ ರೀತಿ ಮಾಡಬಹುದು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ
ಬೇಸಿಗೆಯಲ್ಲಿ ವಿದ್ಯುತ್ ಬಿಲ್ ಕಡಿಮೆ ಮಾಡುವುದು ಹೇಗೆ ಅನ್ನೋದು ಎಲ್ಲರ ಪ್ರಶ್ನೆ
ರಾಜ್ಯದಲ್ಲಿ ಈ ಬಾರಿ ತೀವ್ರ ಉಷ್ಣಾಂಶ ಇರೋದರಿಂದ ಎಲ್ಲರೂ ಫ್ಯಾನ್ , ಎಸಿ, ಫ್ರಿಡ್ಜ್ ಬಳಕೆಯನ್ನು ಜಾಸ್ತಿ ಮಾಡಿಯೇ ಇರುತ್ತಾರೆ
ಹಾಗಿದ್ರೆ ಈ ಸಮಯದಲ್ಲಿ ವಿದ್ಯುತ್ ಬಿಲ್ ಕಡಿಮೆ ಬರುವಂತೆ ಮಾಡಲು ಯಾವ ರೀತಿಯಾಗಿ ಬಳಕೆ ಮಾಡಬಹುದು
ರಚನಾ ಎನ್ಆರ್ಕೆ ಸಂಸ್ಥೆಯ ಮುಖ್ಯಸ್ಥ, ಇಂಧನ ತಜ್ಞ ಅನಿಲ್ ಕುಮಾರ್ ನಾಡಿಗೇರ್ ಅವರು ‘ಲೋಕಲ್ 18’ ಜೊತೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ
ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಬಿಎಲ್ಡಿಸಿ ಫ್ಯಾನ್ಗಳು ಬಳಸುವುದರಿಂದ 50-70% ರಷ್ಟು ವಿದ್ಯುತ್ ಉಳಿತಾಯ ಮಾಡಬಹುದಾಗಿದೆ
ಈ ಫ್ಯಾನ್ಗಳ ಬೆಲೆ ಜಾಸ್ತಿ ಇದ್ರು, ಇದರಿಂದ ಲಾಭವೂ ಅಷ್ಟೇ ಆಗಿದೆ
ಸಾಮಾನ್ಯ ಫ್ಯಾನ್ಗಳು 80 ರಿಂದ 100 ವ್ಯಾಟ್ ವಿದ್ಯುತ್ ಬಳಸಿಕೊಂಡರೆ, ಬಿಎಲ್ಡಿಸಿ ಫ್ಯಾನ್ 30 ರಿಂದ 40 ವ್ಯಾಟ್ ವಿದ್ಯುತ್ ಮಾತ್ರ ತೆಗೆದುಕೊಳ್ಳುತ್ತದೆ
ಇನ್ನು ಮನೆಗಳಲ್ಲಿ ಏರ್ ಕಂಡೀಷನರ್ ಇದ್ರೆ ಅದನ್ನ ಸರಿಯಾಗಿ ಟೆಂಪರೇಚರ್ ಸೆಟ್ ಮಾಡಿಕೊಳ್ಳಬೇಕು
ಒಂದೇ ಬಾರಿಗೆ ಹೆಚ್ಚು ತಾಪಮಾನ ಇದೆ ಅಂತ ಕಡಿಮೆ ಟೆಂಪರೇಚರ್ ಸೆಟ್ ಮಾಡಬಾರದು. ಇದರಿಂದ ಒಂದೇ ಬಾರಿ ವಿದ್ಯುತ್ ಹೆಚ್ಚು ಉಪಯೋಗವಾಗುತ್ತದೆ
ಜೊತೆಗೆ ಫ್ರಿಡ್ಜ್ಗಳಲ್ಲಿ ಬಿಸಿ ಆಹಾರವಿಡುವುದಾಗಲೀ, ಮನೆಯೊಳಗೆ ನೇರವಾಗಿ ಸೂರ್ಯನ ಕಿರಣ ಬೀಳುವುದಾಗಲೀ ಇವುಗಳು ಕೂಡಾ ವಿದ್ಯುತ್ ಹೆಚ್ಚು ಬಳಸುವಂತೆ ಮಾಡುತ್ತದೆ
ನೀರು ಉಳಿತಾಯ ಮಾಡುವುದು ಕೂಡಾ ಪರೋಕ್ಷವಾಗಿ ವಿದ್ಯುತ್ ಉಳಿತಾಯ ಮಾಡಿದಂತೆಯೇ
Belagavi News: ಮಿಶ್ರ ಬೆಳೆ ಬೆಳೆದು ಹೆಚ್ಚಿನ ಲಾಭ ಪಡೆದ ಬೆಳಗಾವಿ ರೈತ!