ಚಳಿಗಾಲು ಮುಗಿಯುತ್ತಾ ಬಂದಿದ್ದು, ಬೇಸಿಗೆ ಆರಂಭವಾಗುತ್ತಿದೆ. ಈ ಸಮಯದಲ್ಲಿ ದೇಹವನ್ನು ತಂಪಾಗಿಟ್ಟುಕೊಳ್ಳಬೇಕು

ಅದರಲ್ಲೂ ಬೇಸಿಗೆ ಕಾಲದಲ್ಲಿ ಅನಾನಸ್ ಹಣ್ಣು ತಿನ್ನುವು ಆರೋಗ್ಯಕ್ಕೆ ಬಹಳ ಒಳ್ಳೆಯದು

ಇದರು ನೋಡಲು ಹೊರಗಿನಿಂದ ಒರಟಾಗಿ ಮತ್ತು ಮುಳ್ಳಿನಿಂದ ಕೂಡಿರುತ್ತದೆ

ಹಾಗಾಗಿ ಈ ಹಣ್ಣನ್ನು ಜನ ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಅದರಲ್ಲಿಯೂ ಅನಾನಸ್ (ಪೈನ್ ಆಪಲ್) ಜ್ಯೂಸ್ ಎಂದರೆ ಬಹುತೇಕ ಮಂದಿಗೆ ಫೇವರೆಟ್

ಇದನ್ನು ಓದಿ, ಇನ್ಮುಂದೆ ಬಿಸ್ಕೆಟ್‌ ತಿನ್ನೋ ಮುನ್ನ ಸಾವಿರ ಸಲ ಯೋಚಿಸ್ತೀರಾ!

ಇದರಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6, ಫೋಲೇಟ್, ಮ್ಯಾಂಗನೀಸ್, ತಾಮ್ರ ಮತ್ತು ನಾರಿನಾಂಶ ಈ ಹಣ್ಣಿನಲ್ಲಿ ಹೇರಳವಾಗಿ ಕಂಡುಬರುತ್ತವೆ

 ಅಲ್ಲದೇ ಅನಾನಸ್ ತಿನ್ನುವುದರಿಂದ ಸಿಗುವ ಮತ್ತಷ್ಟು ಆರೋಗ್ಯ ಪ್ರಯೋಜನಗಳು ಎಂಬ ಬಗ್ಗೆ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ

ಜೀರ್ಣಕ್ರಿಯೆ ಸಮಸ್ಯೆ:  ಅನಾನಸ್ನಲ್ಲಿರುವ ಕಿಣ್ವಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ

ಇದು ಅಜೀರ್ಣವನ್ನು ಕಡಿಮೆ ಮಾಡಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯಕವಾಗಿದೆ. ಇದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತದೆ

ಕಣ್ಣಿನ ಸಮಸ್ಯೆ: ಅನಾನಸ್ ಜ್ಯೂಸ್ ಕಣ್ಣುಗಳಿಗೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಎ ಮತ್ತು ಆ್ಯಂಟಿಆಕ್ಸಿಡೆಂಟ್ ಗಳಿದ್ದು ಕಣ್ಣಿನ ಸಮಸ್ಯೆಗಳನ್ನು ದೂರ ಮಾಡುತ್ತದೆ

ಪ್ರತಿರಕ್ಷಣಾ ವ್ಯವಸ್ಥೆ: ಅನಾನಸ್ ಉತ್ತಮ ಪ್ರಮಾಣದ ವಿಟಮಿನ್ ಸಿ ಅನ್ನು ಹೊಂದಿರುತ್ತದೆ. ಈ ಪೋಷಕಾಂಶವು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ

ಹೃದಯದ ಆರೋಗ್ಯ: ಅನಾನಸ್ನಲ್ಲಿರುವ ಫೈಬರ್ ಮತ್ತು ವಿಟಮಿನ್ ಸಿ ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ

ಮೂಳೆಗಳ ಸಮಸ್ಯೆ: ಅನಾನಸ್ ಜ್ಯೂಸ್ ಸೇವನೆಯು ಹಲ್ಲು ಮತ್ತು ಮೂಳೆಗಳನ್ನು ಗಟ್ಟಿಗೊಳಿಸುತ್ತದೆ

Green Masala Spicy Dosa: ಬೆಳಗ್ಗೆಯ ಚಳಿಗೆ ಮಾಡಿ ಖಾರವಾದ ಒಗ್ಗರಣೆ ಮಸಾಲೆ ದೋಸೆ