ಇದು ಚೇಳುಗಳ ಜಾತ್ರೆ!

ನಾಗರ ಪಂಚಮಿಯ ದಿವಸ ಯಾದಗಿರಿ ಜಿಲ್ಲೆಯ ಗ್ರಾಮವೊಂದರಲ್ಲಿ ಚೇಳುಗಳ ಜಾತ್ರಾ ಸಂಭ್ರಮ ನಡೆಯಿತು

ಈ ಗ್ರಾಮದಲ್ಲಿ ನಾಗರ ಪಂಚಮಿ ದಿನ, ಚೇಳುಗಳನ್ನು ಪೂಜಿಸಿ ಅವುಗಳ ಜೊತೆ ಆಟವಾಡಿದ್ದಾರೆ

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರು ಗ್ರಾಮದಲ್ಲಿ ಚೇಳುಗಳ ಜಾತ್ರೆ ನಡೆದಿದೆ

ಗ್ರಾಮದ ಬೆಟ್ಟದ ಮಧ್ಯೆ ಕೊಂಡಮ್ಮ ದೇವಿಯ ದೇವಾಲಯವಿದೆ, ನಾಗರ ಪಂಚಮಿ ದಿನ ನಡೆಯುವ ಈ ದೇವಿಯ ಚಾತ್ರೆಗೆ ಇಲ್ಲಿ ಸಾವಿರಾರು ಚೇಳುಗಳು ಬಂದು ಸೇರುತ್ತವೆ

ಭಕ್ತರು ಬೆಟ್ಟದ ಮೇಲೆ ಆಗಮಿಸಿ ದೇವಿಯ ದರ್ಶನ ಪಡೆದು ನಂತರ ಸುತ್ತಲಿನ ಗುಡ್ಡದಲ್ಲಿ ಹೇರಳವಾಗಿ ಸಿಗುವ ಚೇಳುಗಳನ್ನು ಹಿಡಿದು ಸಂಭ್ರಮಪಟ್ಟಿದ್ದಾರೆ

ಮಕ್ಕಳು, ಮಹಿಳೆಯರು, ಯುವಕರು ಕಲ್ಲುಗಳಲ್ಲಿ ಅಡಗಿರುವ ಹಾಗೂ ಓಡಾಡಿಕೊಂಡಿರುವ ಚೇಳುಗಳನ್ನು ಯಾವುದೇ ಆತಂಕವಿಲ್ಲದೇ ಭಕ್ತಿ ಪರಾಕಾಷ್ಠೆಯಿಂದ ಹಿಡಿದುಕೊಳ್ಳುತ್ತಾರೆ

ನಾಗರ ಪಂಚಮಿ ದಿನದಂದೇ ಚೇಳುಗಳು ಕಾಣಸಿಗುತ್ತವಂತೆ! ಪಂಚಮಿ ದಿನ ಯಾರಿಗೂ ಕಚ್ಚುವುದಿಲ್ಲವಂತೆ

ಚೇಳುಗಳು ಒಂದು ವೇಳೆ ಕಚ್ಚಿದ್ರೆ ದೇವಿಯ ಭಂಡಾರ ಹಚ್ಚುತ್ತಾರೆ

ಇದರಿಂದ ಯಾರಿಗೂ ಏನೂ ಆಗುವುದಿಲ್ಲವೆಂದು ಭಕ್ತರ ನಂಬಿಕೆಯಾಗಿದೆ