ಕಾಫಿನಾಡು ಚಿಕ್ಕಮಗಳೂರು ನೋಡಲು ಎಷ್ಟು ಪ್ರಕೃತಿಮಯವಾಗಿ ಸುಂದರವಾಗಿದಿಯೋ ಅಷ್ಟೇ ತನ್ನ ವಿಶಿಷ್ಟ ಸಂಪ್ರದಾಯಗಳಿಂದ ಸುಂದರವಾಗಿದೆ ಇಲ್ಲಿರುವ ದೇವಸ್ಥಾನಗಳ ಲಕ್ಷೀ ಜನಾರ್ಧನ ಸ್ವಾಮಿಯ ದೇವಸ್ಥಾನದ ಜಾತ್ರೆಗೆ ವಿಶಿಷ್ಟ ಸಂಪ್ರದಾಯವಿದೆ ಹಾಗದ್ರೆ ಆ ದೇವಸ್ಥಾನ ಎಲ್ಲಿದೆ ಅಂತೀರಾ ಆ ಜಾತ್ರೆಯ ವಿಶೇಷ ಏನು ಅಂತೀರಾ ಈ ಸ್ಟೋರಿ ನೋಡಿ.
ಹೌದು ಮಲೆನಾಡಿನ ದೇವಸ್ಥಾನಗಳೇ ಹಾಗೆ ಇತಿಹಾಸ ಹಾಗೂ ಪೌರಾಣಿಕ ಹಿನ್ನಲೆಯನ್ನ ಹೊಂದಿರುವ ದೇವಸ್ಥಾನಗಳಾಗಿರುತ್ತೆ, ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಬಸರಿಕಟ್ಟೆಯ ಈ ದೇವಸ್ಥಾನ ಕೂಡ ಪೌರಾಣಿಕ ಹಿನ್ನಲೆಯನ್ನ ಹೊಂದಿದೆ.
ಕೊಪ್ಪ ತಾಲೂಕಿನಲ್ಲಿನ ಅತ್ಯಂತ ಪುರಾಣ ಹಳೆಯ ದೇವಸ್ಥಾನ ಅಂದ್ರೆ ತಪ್ಪಾಗಲ್ಲ.. ಸುತ್ತಲೂ ಬೆಟ್ಟಗುಡ್ಡಗಳ ಕೋಟೆ ನಡುವೆ ಬಸರಿಕಟ್ಟೆ ಎಂಬ ಊರು ಅಲ್ಲಿ ಜನಾರ್ಧನ ಸ್ವಾಮಿ ಲಕ್ಷ್ಮಿ ಸಮೇತರಾಗಿ ನೆಲೆನಿಲ್ಲುವ ಮೂಲಕ ಭಕ್ತರ ಕೋರಿಕೆಗಳನ್ನ ಈಡೇರಿಸುತ್ತಾನೆ ಎಂಬುದು ಇಲ್ಲಿನ ಜನರ ನಂಬಿಕೆ.
ಜಾತ್ರೆ ಅಂದ್ರೆ ತೇರು ಎಳೆಯುವುದು ಎಲ್ಲಾ ಕಡೆ ನೋಡಿರ್ತೀವಿ ಅದಕ್ಕೆ ಹೂ ಹಣ್ಣು ಬಟ್ಟೆ ಗಳಿಂದ ಸಿಂಗಾರ ಮಾಡೋದ್ನ ನೋಡಿದೀವಿ ಆದ್ರೆ ಈ ಮಲೆನಾಡಲ್ಲಿ ಸ್ವಲ್ಪ ವಿಭಿನ್ನ ಇಲ್ಲಿನ ತೇರುಗಳಿಗೆ ಹೂ ಹಣ್ಣು ಜೊತೆ ತಾವು ಬೆಳೆದ ಬೆಳೆಗಳನ್ನು ಕಟ್ಟುತ್ತಾರೆ
ಜೊತಗೆ ಕಾಫೀ ಮೆಣಸು, ಬಾಳೆಹಣ್ಣು ಹೀಗೆ ತಾವು ಬೆಳೆದ ಎಷ್ಟೋ ಬೆಳೆಗಳನ್ನು ರಥಕ್ಕೆ ಕಟ್ಟುತ್ತಾರೆ ಜೊತಗೆ ಅದನ್ನ ರಥಕ್ಕೆ ಎಸೆಯುವ ಸಂಪ್ರದಾಯ ಕೂಡ ಇದೆ.
ಯಾಕಂದ್ರೆ ನಾವು ಆ ರೀತಿಯಾಗಿ ಬೆಳೆಗಳನ್ನು ಎಸೆಯುವುದರಿಂದ ಮುಂದಿನ ಬಾರಿ ಫಸಲು ಜಾಸ್ತಿ ಆಗುತ್ತೆ ಅನ್ನೋದು ಮಲೆನಾಡಿಗರ ನಂಬಿಕೆಯಾಗಿದೆ.
ಇನ್ನೂ ಈ ಲಕ್ಷೀ ಜನಾರ್ಧನ ಸ್ವಾಮಿಯ ರಥೋತ್ಸವವು ಅದ್ದೂರಿಯಾಗಿ ನಡೆದಿದ್ದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಸರಿಕಟ್ಟೆಯ ಶ್ರೀ ಲಕ್ಷ್ಮಿ ಜನಾರ್ದನ ಸ್ವಾಮಿ ರಥವನ್ನ ಎಳೆಯಲಾಯಿತು,
ಲಕ್ಷ್ಮಿ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿಧ ಪೂಜಾ ಕೈಂಕಾರ್ಯಗಳು ನೆಡೆದು ರಾತ್ರಿಯ ಹೊತ್ತಿಗೆ ರಥವನ್ನ ಎಳೆಯಲಾಯಿತು.
ಒಟ್ಟಿನಲ್ಲಿ ಮಲೆನಾಡಿನ ಜಾತ್ರೆಗಳಲ್ಲಿ ರಥೋತ್ಸವಗಳಲ್ಲಿ ಈ ರೀತಿಯಾದ ವಿಶೇಷಗಳನ್ನ ಮಾತ್ರ ನೋಡಲು ಸಾಧ್ಯ..
Google's New Office: ಬೆಂಗಳೂರಿನಲ್ಲಿ ವಿಶ್ವದ ಅತಿದೊಡ್ಡ ಇನೋವೇಟಿವ್ ಕ್ಯಾಂಪಸ್; ಗೂಗಲ್‌ನ ‘ಅನಂತ’ ಕ್ಯಾಂಪಸ್ ಬೊಂಬಾಟ್