ಭಣಗುಡುತ್ತಿದ್ದ ಹಳ್ಳ, ಕೊಳ್ಳ, ಕೆರೆಗಳು ಭರ್ತಿಯಾಗತೊಡಗಿವೆ

ಜಲಪಾತಗಳು ಧುಮ್ಮಿಕ್ಕಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ

ಅಂತಹ ಜಲಪಾತಗಳಲ್ಲಿ ಬಯಲು ಸೀಮೆಯ ವರವಿಕೊಳ್ಳ ಜಲಪಾತವೂ ಒಂದು

ಹೌದು, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಸಮೀಪದ ವರವಿಕೊಳ್ಳ ಜಲಪಾತ ಈಗ ಮೈದುಂಬಿ ಧುಮ್ಮಿಕ್ಕುವ ಮೂಲಕ ಆಕರ್ಷಿಸುತ್ತಿದೆ

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ವರವಿಕೊಳ್ಳ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು, ನಯನ ಮನೋಹರ ದೃಶ್ಯ ಕಣ್ತುಂಬಿಕೊಳ್ಳಲು ಸಾಗರೋಪಾದಿಯಲ್ಲಿ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ

ಯುವಕ, ಯುವತಿಯರು, ಮಕ್ಕಳು, ಹಿರಿಯರು ಕುಟುಂಬ ಸಮೇತ ಆಗಮಿಸಿ, ಸುಮಾರು 50 ಅಡಿ ಎತ್ತರದಿಂದ ಬೀಳುವ ಜಲಪಾತದಲ್ಲಿ ಮೈಯೊಡ್ಡಿ ಮಿಂದೇಳುತ್ತಾರೆ

ಬಳಿಕ ಜಲಪಾತದ ಪಕ್ಕದಲ್ಲೇ ಕಲ್ಲಿನ ಗುಹೆಯಲ್ಲಿರುವ ವರವಿಸಿದ್ದೇಶ್ವರ ದೇವರಿಗೆ ಪೂಜೆ ಸಲ್ಲಿಸಿ, ಭೋಜನ ಸವಿಯುತ್ತಾರೆ. ಒಂದು ದಿನದ ಟ್ರಿಪ್‌ಗೆ ಹೇಳಿ ಮಾಡಿಸಿದ ಜಾಗ ಇದಾಗಿದೆ

ಬೈಲಹೊಂಗಲದಿಂದ 35 ಕಿಲೋ ಮೀಟರ್ ದೂರದ ಮುನವಳ್ಳಿಯಿಂದ ನರಗುಂದ ಹೋಗುವ ರಸ್ತೆಯಲ್ಲಿ 6 ಕಿ.ಮೀ

ಅಂತರದಲ್ಲಿ ಎಕ್ಕೇರಿ ಎಂಬ ಗ್ರಾಮವಿದೆ. ರಸ್ತೆ ಬದಿಯಲ್ಲಿ ವರವಿಕೊಳ್ಳಕ್ಕೆ ಮಾರ್ಗ ಎಂಬ ಫಲಕವಿದೆ

ಅಲ್ಲಿಂದ ಒಂದು ಕಿ.ಮೀ ದೂರ ಕಚ್ಚಾ ರಸ್ತೆಯಲ್ಲಿ ನಡೆದರೆ ವರವಿಕೊಳ್ಳ ತಲುಪಬಹುದು

ಮುನವಳ್ಳಿ ನರಗುಂದ ಮಾರ್ಗದಲ್ಲಿ ಸಾಕಷ್ಟು ವಾಹನಗಳ ಸೌಕರ್ಯವಿದೆ. ವಾಹನಗಳಲ್ಲಿ ಬರುವವರು ವರವಿಕೊಳ್ಳ ಕ್ರಾಸ್‌ನಲ್ಲಿ ಇಳಿಯಬಹುದಾಗಿದೆ

Positive Story: 500 ವರ್ಷಗಳ ಹಳೆಯ ಬಾವಿಯ ಹೂಳೆತ್ತಿದ್ದ ಯುವಕರು; ಇದು ಅಂತಿಂತ ಬಾವಿಯಲ್ಲ!