ವಿಕ್ಟರಿ ಪರೇಡ್ ಹೇಗಿದೆ ನೋಡಿ!
ಟೀಂ ಇಂಡಿಯಾ ಅಭಿಮಾನಿಗಳು ವಿಕ್ಟರಿ ಪರೇಡ್ ನಡೆಸಲಿದ್ದಾರೆ.
ಈಗಾಗಲೇ ವಾಂಖೆಡೆ ಮೈದಾನ ಅಭಿಮಾನಿಗಳಿಂದ ತುಂಬಿ ತುಳುಕುತ್ತಿದೆ.
ಭಾರತ ಹಿಂದೆಂದೂ ನೋಡಿರದಂತಹ ಸಂಭ್ರಮಾಚರಣೆಯನ್ನು ಮಾಡ್ತಿದೆ.
ಬರೋಬ್ಬರಿ 17 ವರ್ಷಗಳ ಬಳಿಕ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿದೆ.
ಇದರ ಸಂಭ್ರಮಾಚರಣೆ ಇನ್ನೂ ಮುಂದುವರಿಯುತ್ತಿದೆ. ಇಂದು ಮುಂಜಾನೆಯಷ್ಟೇ ಟೀಂ ಇಂಡಿಯಾ ಆಟಗಾರರು ಭಾರತಕ್ಕೆ ವಾಪಾಸ್ಸಾಗಿದ್ದಾರೆ.
ಇನ್ನೂ ಭಾರತಕ್ಕೆ ಬರ್ತಿದ್ದಂತೆ ಟೀಂ ಇಂಡಿಯಾ ಆಟಗಾರರನ್ನು ಭವ್ಯ ಸ್ವಾಗತ ಮಾಡಿಕೊಳ್ಳಲಾಗಿದೆ.
ಸಂಜೆ 5 ಗಂಟೆಯಿಂದ ಟೀಂ ಇಂಡಿಯಾ ತನ್ನ ವಿಕ್ಟರಿ ಪರೇಡ್‌ನ ನಡೆಸಿದೆ. ವಾಂಖೆಡೆ ಮೈದಾನಕ್ಕೆ ಟ್ರೋಫಿ ಜೊತೆ ಭಾರತದ ಆಟಗಾರರು ಕೂಡ ಬರುತ್ತಿದ್ದಾರೆ.
ಇನ್ನೂ ಇಂದು ವಾಂಖೆಡೆ ಮೈದಾನಕ್ಕೆ ಫ್ರೀ ಎಂಟ್ರಿ ನೀಡಲಾಗಿದೆ. ಈಗಾಗಲೇ ಟೀಂ ಇಂಡಿಯಾ ಅಭಿಮಾನಿಗಳು ಸಾಗರದ ರೀತಿಯಲ್ಲಿ ಬಂದು ಸೇರಿದ್ದಾರೆ.
ಮಳೆ ಬರುತ್ತಿದ್ರೂ ಅದಕ್ಕೂ ಡೋಂಟ್ ಕೇರ್ ಅಂತಿದ್ದಾರೆ ಫ್ಯಾನ್ಸ್.
ವಾಂಖೆಡೆ ಸುತ್ತಮುತ್ತಾ ಕೇವಲ ಜೈ ಹೋ ಇಂಡಿಯಾ ಎಂಬ ಜೈಕಾರ ಕೇಳಿಬರುತ್ತಿದೆ. ಕೆಲವೇ ಕ್ಷಣಗಳಲ್ಲಿ ಟೀಂ ಇಂಡಿಯಾ ಕ್ರಿಕೆಟರ್ಸ್ ಮೈದಾನಕ್ಕೆ ಬರಲಿದ್ದಾರೆ. ಹೀಗಾಗಿ ಅಭಿಮಾನಿಗಳು ಕ್ಕಿಕ್ಕಿರಿದು ಸೇರಿದ್ದಾರೆ.
Hardik Pandya: ಅವಮಾನಿಸಿದ್ದಲ್ಲೇ, ಅವಮಾನಿಸಿದ್ದವರಿಂದಲೇ ಹಾರ್ದಿಕ್‌ಗೆ ಜೈಕಾರ! ವಿಡಿಯೋ ನೋಡಿ ಖುಷಿಯಾಗುತ್ತೆ!