ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದ ಭೂಕುಸಿತ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ

ನಾಪತ್ತೆಯಾದವರಿಗಾಗಿ ಹುಡುಕಾಟ ಇನ್ನೂ ಜಾರಿಯಲ್ಲಿದೆ. ಶಿರೂರಿನದ್ದು ಒಂದು ಕಥೆಯಾದರೆ, ಇತ್ತ ಗಂಗಾವಳಿ ನದಿ ಪಕ್ಕದ ಉಳುವರೆಯ ಗ್ರಾಮಸ್ಥರ ಕಥೆಯಂತೂ..ಛೇ! ಅತ್ಯಂತ ತಳಮಟ್ಟದಿಂದ, ಅಂದರೆ ಒಂದು ರೂಪಾಯಿಯಿಂದ ಜೀವನ ಕಟ್ಟಿಕೊಳ್ಳಬೇಕಾದ ಅವಸ್ಥೆ

ಆದರೆ ನಿಮಗೆ ಗೊತ್ತೇ? ಉತ್ತರ ಕನ್ನಡದಲ್ಲಿ ಭೂಕುಸಿತವಾದದ್ದು ಇದೇ ಮೊದಲಲ್ಲ

ಈ ಹಿಂದೆಯೂ ಉತ್ತರ ಕನ್ನಡದಲ್ಲಿ ಎಂಥ ಕಲ್ಲು ಹೃದಯದವೂ ಕರಗುವಷ್ಟು ದಾರುಣ ಭೂಕುಸಿತ ಸಂಭವಿಸಿತ್ತು. ಆ ಕಹಿ ನೆನಪು ಇನ್ನೂ ಉತ್ತರ ಕನ್ನಡಿಗರ ನೆನಪಿನಿಂದ ಮಾಸಿಲ್ಲ

ಅದು ಇಸವಿ 2021. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಳಚೆ ಕಾಳಿ ನದಿ ದಂಡೆಯ ಮೇಲಿನ ದಟ್ಟ ಅಡವಿಯ ನಡುವೆ ಇರುವ ಗ್ರಾಮ

ಜುಲೈ 22ರವರೆಗೆ ಆ ಊರಿನ ಜನರು ನೆಮ್ಮದಿಯಿಂದ ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ಕೃಷಿ ಕೆಲಸಗಳಲ್ಲಿ ತೊಡಗಿಕೊಂಡಿದ್ದರು

ಆದರೆ ಆ ರಾತ್ರಿ ಸುರಿದ ಮಳೆ ಕಳಚೆ ಸೇರಿದಂತೆ ಉತ್ತರ ಕನ್ನಡದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿತ್ತು

2021 ಜುಲೈ 22 ರಂದು ಈ ಭಾಗದಲ್ಲಿ ಸುರಿದ ಅಬ್ಬರದ ಮಳೆಗೆ ಗುಡ್ಡ ಬೆಟ್ಟಗಳು ಕುಸಿದು 50ಕ್ಕೂ ಹೆಚ್ಚು ಮನೆಗಳು ಭೂಗರ್ಭ ಸೇರಿದ್ದವು. ಈ ಹಿಂದೆ ಊರೇ ಬೇರೆ, ಈಗ ಇರುವ ಚಿತ್ರಣವೇ ಬೇರೆ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು

ಎಲ್ಲೆಡೆ 4ಜಿ ಮೊಬೈಲ್ ಟವರ್ ಬರುತ್ತಿದೆ. ಆದರೆ ಕಳಚೆಯಲ್ಲಿ ಈಗಲೂ ಇರೋದು 2ಜಿ ಟವರ್ ಮಾತ್ರ. ಅದು ಸಹ ಕರೆಂಟ್ ಇದ್ದಾಗ ಮಾತ್ರ ಕೆಲಸ ಮಾಡುತ್ತದೆ

ಮಳೆಗಾಲದಲ್ಲಿ ವಾರಗಟ್ಟಲೆ ಕರೆಂಟ್ ಪತ್ತೆಯೇ ಇರುವುದಿಲ್ಲ. ಬಸ್ ಊರಿಂದ 8 ಕಿಮೀ ದೂರವಿರುವ ಹೆಬ್ಬಾರಕುಂಬ್ರಿಯ ಘಟ್ಟದ ಮೇಲೆ ನಿಲ್ಲುತ್ತದೆ. ಮುಂದೆ ಬರೋದಿಲ್ಲ. 40 ವರ್ಷಗಳ ಹಿಂದೆಯೂ ಇಲ್ಲೇ ಬಸ್ ನಿಲ್ಲುತ್ತಿತು 

ಇದ್ದ ಹೈಸ್ಕೂಲ್ ಬಂದ್ ಆಗಿದೆ. ಪ್ರಾಥಮಿಕ ಶಾಲೆ ಗೌರವ ಶಿಕ್ಷಕರ ಆಧಾರದ ಮೇಲೆ ನಡೆಯುತ್ತಿದೆ. ಕಳಚೆಯಲ್ಲೇ ಇದ್ದರೆ ಹೆಣ್ಣು ಹೆತ್ತವರ ತಿರುಗಿ ನೋಡಲ್ಲ ಎಂಬ ಭಾವ ಯುವಕರದ್ದು

ಮಳೆಗಾಲ ನೆನಸಿಕೊಂಡರೆ ಕೃಷಿಯಲ್ಲಾಗಲಿ ಅಥವಾ ಇನ್ಯಾವುದರಲ್ಲೂ ಹಣ-ಭವಿಷ್ಯ ಎರಡನ್ನೂ ಹೂಡಿಕೆ ಮಾಡಲು ಧೈರ್ಯ ಸಾಲದು

ಭೂಕುಸಿತದ ನಂತರ ಇಂತಹ ಒಂದೊಂದೇ ಅಂಶಗಳು ಸೇರಿ ಕಳಚೆಯ ಕೊಂಡಿಗಳನ್ನು ಕಳಚುತ್ತಿರುವ ಪರಿಸ್ಥಿತಿಯಂತೂ ಇರೋದು ಹೌ

ಅಂದು ಮಾಡೆಲ್, ಇಂದು ಅಶಕ್ತ ನಾಯಿ-ಬೆಕ್ಕುಗಳ ಪಾಲಿನ ಜೀವದೇವತೆ!