ಲಕ್ಷಾಂತರ ಜನರ ಸಮ್ಮುಖದಲ್ಲಿ ಗವಿಮಠದ ಮಹಾರಥೋತ್ಸವ

ಮಹಾರಥೋತ್ಸವಕ್ಕೆ ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ಚಾಲನೆ ನೀಡಿದರು.

ಈ ವೇಳೆ ರಥಕ್ಕೆ ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದ ಲಕ್ಷಾಂತರ ಭಕ್ತರು.

ಗವಿಮಠದ ಮಹಾರಥೋತ್ಸವದ ಈ ದೃಶ್ಯವನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು.

ಪಲ್ಲಕ್ಕಿಯಲ್ಲಿ ಗವಿಸಿದ್ದೇಶ್ವರ ಮೂರ್ತಿ ತಂದು ರಥದಲ್ಲಿ ಪ್ರತಿಷ್ಠಾಪಿಸಲಾಯ್ತು.

ಗವಿಮಠ ರಥೋತ್ಸವವು ಕರ್ನಾಟಕ ಸುಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿದೆ.

ಈ ಬಾರಿ ಕೊಪ್ಪಳ ಗವಿಮಠದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಆಗಮಿಸಿ, ದೇವರ ಪ್ರಸಾದ ಸ್ವೀಕರಿಸಿದರು.

ದಕ್ಷಿಣ ಭಾರತದ ಮಹಾಕುಂಭಮೇಳ ಅಂತಾನೇ ಹೆಸರಾದ ಜಾತ್ರೆವ ವೈಭೋಗ ನೋಡಿ.

ಗವಿಮಠ ಜಾತ್ರೆಗೆ ಆಗಮಿಸಿದ್ದ ಭಕ್ತರಿಗಾಗಿ ವಿವಿಧ ರೀತಿಯ ಊಟ ತಯಾರಿಸಲಾಗ್ತಿತ್ತು.

ಮಿರ್ಚಿ, ಮಾದಲಿ, ಶೇಂಗಾ ಹೋಳಿಗೆ, ರೊಟ್ಟಿ ಸೇರಿ ಹಲವು ಶೈಲಿಯ ಆಹಾರ ಸಿದ್ಧಪಡಿಸಲಾಗಿತ್ತು.