ಮೂಗುತಿ ಧರಿಸಿದರೆ ಸಿಗುತ್ತೆ ನೂರಾರು ಪ್ರಯೋಜನ!
ಈ ಮೂಗುತಿ ಧರಿಸುವುದರ ಹಿಂದೆ ಅನೇಕ ಜ್ಯೋತಿಷ್ಯ ಕಾರಣಗಳು ಸಹ ಇದೆ.
ಮೂಗುತಿಯನ್ನ ಸಾಮಾನ್ಯವಾಗಿ ಚಿನ್ನ ಮತ್ತು ಬೆಳ್ಳಿಯಂತಹ ಅಮೂಲ್ಯ ಲೋಹಗಳಿಂದ ತಯಾರಿಸಲಾಗುತ್ತದೆ.
ಹೆಣ್ಣು ಮಕ್ಕಳು ಹರೆಯದ ವಯಸ್ಸಿಗೆ ಬಂದ ತಕ್ಷಣ ಮನೆಯಲ್ಲಿ ಮೂಗುತಿಯನ್ನ ಹಾಕಿಸುತ್ತಾರೆ.
ಹೆಣ್ಣುಮಕ್ಕಳು ಮೂಗುತಿ ಧರಿಸಿದರೆ ಅದು ಅವರ ಕುಟುಂಬಕ್ಕೆ ಧನಾತ್ಮಕ ಶಕ್ತಿಯನ್ನು ನೀಡುತ್ತದೆ
ನೀವು ಚಿನ್ನದ ಮೂಗುತಿಯನ್ನ ಧರಿಸುವುದರಿಂದ ಎಲ್ಲಾ ಕಷ್ಟಗಳು ಹಾಗೂ ಕೊರತೆಗಳು ನಿವಾರಣೆ ಆಗುತ್ತದೆ.
ಇನ್ನು ಜಾತಕದಲ್ಲಿ ಗುರುವಿನ ಸ್ಥಾನ ಬಲವಾಗಿಲ್ಲದಿದ್ದರೆ ಅದರಿಂದನಾವು ಅನೇಕ ಕಷ್ಟಗಳನ್ನ ಅನುಭವಿಸಬೇಕಾಗುತ್ತದೆ.
ನಿಮಗೆ ಗುರು ದೋಷದಿಂದ ಮುಕ್ತಿ ಬೇಕು ಎಂದರೆ ಚಿನ್ನದ ಮೂಗುತಿ ಧರಿಸಬೇಕು.
ಮೂಗುತಿಯನ್ನು ಧರಿಸುವುದರಿಂದ ಗ್ರಹಗಳ ದೋಷ ನಿವಾರಣೆಯಾಗುತ್ತದೆ.
ನಿಮ್ಮ ಜಾತಕದಲ್ಲಿ ಯಾವುದೇ ದೋಷ ಇದ್ದರೂ ಸಹ ಈ ಮೂಗುತಿ ಧರಿಸುವುದರಿಂದ ಎಲ್ಲಾ ಸಮಸ್ಯೆಗಳು ನಿವಾರಣೆ ಆಗುತ್ತದೆ.