ದಾಂಪತ್ಯದ ಸಿಹಿಯನ್ನು ನಮ್ಮ ಕರಾವಳಿಯ ಜನ ಉಪ್ಪಿನ ಆಗರದಲ್ಲಿ ಸವಿಯುತ್ತಾರೆ
ಸಿಹಿಗೂ, ಉಪ್ಪಿಗೂ ಬಹಳ ವ್ಯತ್ಯಾಸ. ಆದರೆ ಇಲ್ಲಿ ಉಪ್ಪೇ ದಾಂಪತ್ಯದ ಅನ್ಯೋನ್ಯತೆಗೆ ಪ್ರೇರಕ ಶಕ್ತಿ
ಉತ್ತರ ಕನ್ನಡ ಜಿಲ್ಲೆಯ ಸಾಣಿಕಟ್ಟಾದ ಉಪ್ಪಿನ ಆಗರಗಳ ಹಿಂದೆ ಹೀಗೆ ಜೋಡಿಗಳ ಕಥೆ ಇದೆ
ಇಂದಿಗೂ ಮೂವತ್ತಕ್ಕೂ ಹೆಚ್ಚು ಜೋಡಿ ಆಗರದಲ್ಲಿ ದುಡಿಯುತ್ತಿವೆ
ಸಾಣಿಕಟ್ಟಾದ ಉಪ್ಪು ತಯಾರಿಕಾ ಘಟಕದಲ್ಲಿ ಅನಾದಿ ಕಾಲದಿಂದ ಇರುವ ಎರಡು ನಂಬಿಕೆಗಳು
ಯಾವುವೆಂದರೆ ಆಗೇರ ಸಮುದಾಯದ ಜನರೇ ಉಪ್ಪು ತೆಗೆಯಬೇಕೆಂಬ ಕಟ್ಟಳೆ
ಹಾಗೂ ಅವರ ಗಂಡ-ಹೆಂಡತಿ ಜೋಡಿಯಾಗಿ ಉಪ್ಪು ತೆಗೆದರೆ ಉಪ್ಪು ಚೆನ್ನಾಗಿ ಸಿಗುತ್ತದೆ ಎಂಬ ಪ್ರತೀತಿ
ಹೀಗಾಗಿ ಅನಾದಿ ಕಾಲದಿಂದ ಇಲ್ಲಿ ಗಂಡ-ಹೆಂಡತಿ ಜೋಡಿಗಳು ಉಪ್ಪು ತೆಗೆಯುತ್ತಿದ್ದಾರೆ
ಬಂಕಿಕೊಡ್ಲ, ಬಾವಿಕೊಡ್ಲದ ಸುತ್ತಮುತ್ತಲಿನ ಆಗೇರ ಸಮಾಜದ ಜೋಡಿಗಳು ಬೆಳಿಗ್ಗೆ 6 ಗಂಟೆಗೆಲ್ಲಾ ಉಪ್ಪು ತೆಗೆಯಲು ಶುರು ಮಾಡುತ್ತಾರೆ ಅದರಲ್ಲೂ ಒಂದು ಪದ್ಧತಿ ಇದೆ
ದೊಡ್ಡ ಹಲಗೆಯನ್ನು ಗಂಡ ಆಡಿಸಿ ನೀರಿನಿಂದ ಉಪ್ಪನ್ನು ಕಟ್ಟೆಯ ತುದಿಗೆ ತರಬೇಕು,
ಸಣ್ಣ ಹಲಗೆ ಅಥವಾ ಸಲಕೆಯಿಂದ ಹೆಣ್ಣು ಅದನ್ನು ಎತ್ತಿ ಹಾಕಬೇಕೆಂಬುದು ಇಂದಿಗೂ ಅದು ಚಾಚೂ ತಪ್ಪದೇ ನಡೆಯುತ್ತಾ ಬಂದಿದೆ
ಬೆಳಿಗ್ಗೆ 8.30 ಗೆ ಪೂರ್ಣ ಪ್ರಮಾಣದಲ್ಲಿ ಉಪ್ಪು ತೆಗೆದು ಆಗುತ್ತದೆ
One Day Trip Plan: ಬೆಂಗಳೂರಿನಿಂದ ಇಷ್ಟೇ ದೂರದಲ್ಲಿದೆ ಸಂತಾನ ಕರುಣಿಸುವ ಅಂಬೆಗಾಲು ಕೃಷ್ಣನ ಈ ದೇಗುಲ!