ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದ್ರೆ ಕೇಸ್ ಗ್ಯಾರಂಟಿ!
ಶಿರಸಿಯಲ್ಲಿ ಒಂದೇ ದಿನ ಪೊಲೀಸರು 61 ಕೇಸ್ ದಾಖಲಿಸಿಕೊಂಡಿದ್ದಾರೆ.
ಇನ್ನು ಮುಂದೆ ರಸ್ತೆ ಮೇಲೆ ಉಗುಳಿದರೆ ಬೀಳಲಿದೆ ಪೋಲಿಸ್ ಕೇಸ್!
ಇದರ ರೂವಾರಿ ವೈದ್ಯ ಡಾ. ರವಿಕಿರಣ್ ಪಟವರ್ಧನ್.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಇಂತಹದ್ದೊಂದು ಸ್ವಚ್ಛತಾ ಕ್ರಾಂತಿ ಈಗ ಗರಿಗೆದರಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರ ಮೇಲೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ಷೇಪಗಳು ವ್ಯಕ್ತವಾಗಿದ್ದವು.
ಅದರಲ್ಲೂ ಎಲೆ ಅಡಿಕೆ, ಗುಟ್ಕಾ, ಬೇಕೆಂದರಲ್ಲಿ ಉಗುಳುವವರಿಗೆ ಯಾವ ಶಿಕ್ಷೆ ಕಾದಿದೆ ನೋಡಿ.
ಉಗಿಯುವವರು ಕಂಡುಬಂದಲ್ಲಿ ಪೋಲೀಸ್ ಕೇಸ್ ಹಾಕಬೇಕು ಎಂಬುದನ್ನು ನಮೂದಿಸಿದರು.
ಎಲೆ ಕವಳ ತಿಂದು ಉಗುಳುವವರ ಮೇಲೆ ಕರ್ನಾಟಕ ಪೊಲೀಸ್ ಅಧಿನಿಯಮ ಕಲಂ 92(x) ಅಡಿಯಲ್ಲಿ ಕೇಸ್ ದಾಖಲಿಲ್ಲಿಸಲಾಗಿದೆ
ಒಂದೇ ದಿನದಲ್ಲಿ ಒಟ್ಟು 61 ಪ್ರಕರಣಗಳನ್ನು ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಲಾಗಿದೆ.