ಮುಳ್ಳಯ್ಯನಗಿರಿ ಕಂಡು ತುಂಬಾ ಇಷ್ಟಪಡುವವರಿಗೆ ಅಲ್ಲೇ ಕೆಳಗಡೆ ಇರುವ ಸೀತಾಳಯ್ಯನಗಿರಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ

ಮುಳ್ಳಯ್ಯನಗರಿ ಅಂದ್ರೆ ಎಲ್ರಿಗೂ ಗೊತ್ತು

ಎಲ್ಲರ ಅಚ್ಚುಮೆಚ್ಚಿನ ಸ್ಪಾಟ್ ಕೂಡಾ ಹೌದು

ಅದೇ ಮುಳ್ಳಯ್ಯನಗಿರಿಯ ಕೆಳಗಡೆ ಇರೋ ಈ ಶಿಖರದ ಬಗ್ಗೆ ಯಾರಿಗಾದ್ರೂ ಗೊತ್ತೇ?

ಸುತ್ತಲೂ ಬೆಟ್ಟ ಗುಡ್ಡಗಳಿಂದ ಆವೃತವಾಗಿರೋ ಇದುವೇ ಚಿಕ್ಕಮಗಳೂರಿನ ಸೀತಾಳಯ್ಯನ ಗಿರಿ

ಹೌದು, ಮುಳ್ಳಯ್ಯನಗರಿ ಎಲ್ರಿಗೂ ಗೊತ್ತು ಅದುವೇ ಪಶ್ಚಿಮ ಘಟ್ಟ ಸಾಲಿನಲ್ಲಿ ಬರುವ ಚಂದ್ರ ದ್ರೋಣ ಪರ್ವತದ ಸಾಲಿನಲ್ಲಿ ಸಿಗುವ ಈ ಗಿರಿ ಶ್ರೇಣಿಯೂ ಪ್ರವಾಸಿಗರ ನೆಚ್ಚಿನ ಹಾಟ್ ಸ್ಪಾಟ್ ಆಗಿದೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ಸದಾ ಮಂಜಿನಿಂದ ಕೂಡಿರುವ ಈ ಜಾಗ ಪ್ರಮುಖ ಯಾತ್ರ ಸ್ಥಳವೂ ಹೌದು

ಪುರಾಣಗಳ ಪ್ರಕಾರ ಸೀತೆ ಅಂದ್ರೆ ಕನ್ನಡದಲ್ಲಿ ತೇವ ಅಂತ ಅರ್ಥ ಅಂದ್ರೆ ಸದಾ ತೇವದಿಂದ ಕೂಡಿರುವ ಶಿವಲಿಂಗ ಅಂತ ಹೇಳಲಾಗುತ್ತದೆ

ಇಲ್ಲಿರುವ ಸೀತಾಳ ಮಲ್ಲಿಕಾರ್ಜುನ ದೇವರು ಸುತ್ತ ಮುತ್ತಲಿನ ಅದೆಷ್ಟೋ ಜನರಿಗೆ ಮನೆ ದೇವರು ಕೂಡ ಹೌದು

ಚಿಕ್ಕಮಗಳೂರು ಜಿಲ್ಲಾ ಕೇಂದ್ರ ದಿಂದ 19 ಕೀ ಮಿ ದೂರವಿರುವ ಈ ಪ್ರದೇಶ ಸುತ್ತಲು ಬೆಟ್ಟ ಗುಡ್ಡಗಳಿಂದ ಆವರಿಸಿದೆ

ಬೆಕ್ಕಿನಿಂದ ಉಳಿದ ಜೀವ! ಗದಗದಲ್ಲಿ ಅಪರೂಪದ ಘಟನೆ

ಚಿಕ್ಕಮಗಳೂರು ನಗರದಿಂದ ಬಾಡಿಗೆ ವಾಹನಗಳ ಮೂಲಕ ನೀವು ಇಲ್ಲಿಗೆ ಹೋಗಬಹುದು. ಇಲ್ಲಾ ನಿಮ್ಮ ಸ್ವಂತ ವಾಹನಗಳ ಮೂಲಕ ಇಲ್ಲಿಗೆ ತೆರಳ ಬಹುದು

ಬೈಕ್ ಮತ್ತು ಕಾರು ಟಿಟಿ ವಾಹನ ಮತ್ತು ಮಿನಿ ಬಸ್ಸುಗಳಿಗೆ ಮಾತ್ರ ಇಲ್ಲಿಗೆ ಬರಲು ಅವಕಾಶ

ಈ ಪ್ರದೇಶವು ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವದರಿಂದ ಇಲ್ಲಿ ಸಂಜೆಯ ಮೇಲೆ ನಿರ್ಬಂಧವಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6ಗಂಟೆ ವರೆಗೆ ಮಾತ್ರ ಅವಕಾಶವಿರುತ್ತದೆ. ಒಟ್ಟಿನಲ್ಲಿ ಸೀತಾಳಯ್ಯನ ಗಿರಿಯು ಮುಳ್ಳಯ್ಯನಗಿರಿಯಂತೆಯೇ ಅತ್ಯಂತ ಆಕರ್ಷಕ ಹಾಗೂ ಅತ್ಯುತ್ತಮ ಪ್ರೇಕ್ಷಣೀಯ ಸ್ಥಳವೂ ಆಗಿದೆ

ಬಾಳೆಹಣ್ಣಿಗಾಗಿ ಅಂಗಡಿಗೆ ನುಗ್ಗಿದ ಕಾಡಾನೆ!