ಸೋಶಿಯಲ್ ಮೀಡಿಯಾ ಇನ್‌ಫ್ಲ್ಯೂಯನ್ಸರ್ ಇನ್ಶಾ ಘಾಯ್ ಅವರ ಪತಿ ಅಂಕಿತ್ ಕಲ್ರಾ ನಿಧನರಾಗಿದ್ದಾರೆ.

ಕೇವಲ 29ನೇ ವಯಸ್ಸಿಗೇ ಅಂಕಿತ್ ಕಲ್ರಾ ಇಹಲೋಕ ತ್ಯಜಿಸಿದ್ದಾರೆ.

ಇನ್ಶಾ ಘಾಯ್ ಹಾಗೂ ಅವರ ಪತಿ ಅಂಕಿತ್ ಕಲ್ರಾ Instagram ನಲ್ಲಿ ಅತ್ಯಂತ ಜನಪ್ರಿಯ ದಂಪತಿಗಳಲ್ಲಿ ಒಬ್ಬರು.

ಅಂಕಿತ್ ಅವರ ಹಠಾತ್ ಸಾವು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಅಂಕಿತ್ ಹಠಾತ್ ಹೃದಯಾಘಾತದಿಂದ ನಿಧನರಾದರು ಎನ್ನಲಾಗುತ್ತದೆ.

ಫ್ಯಾಷನ್ ಪ್ರಭಾವಿ ಇನ್ಶಾ ಘಾಯ್ ಅವರ ಪತಿ ಅಂಕಿತ್ ಕಲ್ರಾ ಕೇವಲ 29ನೇ ವಯಸ್ಸಿನಲ್ಲಿ ನಿಧನರಾದರು.

ಅಂದಹಾಗೆ ಅಂಕಿತ್ ಹಾಗೂ ಇನ್ಶಾ ಅವರು ಕೇವಲ ಒಂದು ವರ್ಷದ ಹಿಂದೆ ಮದುವೆಯಾಗಿದ್ದರು.

ಇನ್ಶಾ ಘಾಯ್ ಇನ್‌ಸ್ಟಾ ಗ್ರಾಮ್‌ನಲ್ಲಿ 721,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.

ಅವರು ತಮ್ಮ ಪತಿ ಅಂಕಿತ್ ಅವರೊಂದಿಗೆ ಫ್ಯಾಷನ್ ಮತ್ತು ಕಾಮಿಡಿ ರೀಲ್‌ಗಳನ್ನು ಮಾಡ್ತಾ ಇದ್ದರು.

ಇನ್ಶಾ ಹಾಗೂ ಅಂಕಿತ್ ಅವರ ಡ್ಯುಯೆಟ್ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿತ್ತು.

ಅಂಕಿತ್ ಕಲ್ರಾ ನಿಧನರಾದರು ಅಂತ ಇನ್ಶಾ ಘಾಯ್ ತಮ್ಮ Instagram ನಲ್ಲಿ ಬರೆದುಕೊಂಡಿದ್ದಾರೆ.