ಬಾಡಿಗೆ ಮನೆಯಲ್ಲಿದ್ರೇನಂತೆ ಸೋಲಾರ್‌ ರೂಫ್‌ಟಾಪ್‌ನ ಹೀಗೆ ಅಳವಡಿಸಿಕೊಳ್ಳಿ!

ಬಾಡಿಗೆ ಮನೆಯಲ್ಲಿರುವವರು ಕಡಿಮೆ ಖರ್ಚಿನಲ್ಲಿ ಸೋಲಾರ್‌ ರೂಫ್‌ಟಾಪ್‌ ಅಳವಡಿಸಿಕೊಳ್ಳಬಹುದು.

ಸೋಲಾರ್ ರೂಫ್ ಸಿಸ್ಟಮ್ ಅಳವಡಿಕೆ ಮಾಡಿದಾಗ ಆಯಾಯ ಎಸ್ಕಾಂ ಜೊತೆ 25 ವರ್ಷಗಳ ಅಗ್ರಿಮೆಂಟ್ ಆಗಿರುತ್ತದೆ.

ಇದನ್ನು ಬಾಡಿಗೆ ಮನೆಯವರು ಅಳವಡಿಸುವುದಕ್ಕೆ ಹಲವು ಸವಾಲುಗಳು ಇರುತ್ತವೆ.

ಅಷ್ಟೇ ಅಲ್ಲ, ಸೋಲಾರ್ ರೂಫ್‌ಟಾಪ್‌ ಹಾಕಿಸಿಕೊಳ್ಳುವುದಕ್ಕೆ 3 ರಿಂದ 4 ಲಕ್ಷ ರೂಪಾಯಿ ಹಣವೂ ಖರ್ಚಾಗುತ್ತದೆ.

ಬಾಡಿಗೆ ಮನೆಯವರು ಕೇವಲ ಸುಲಭವಾಗಿ 20 ರಿಂದ 30 ಸಾವಿರದ ಒಳಗೆ ಸೋಲಾರ್ ಪ್ಯಾನಲ್ ಅಳವಡಿಸಿಕೊಳ್ಳಬಹುದು.

ನಿಜ, ಸೋಲಾರ್‌ ರೂಫ್‌ಟಾಪ್‌ನ ಆಫ್‌ ಗ್ರಿಡ್‌ ಮಾದರಿ ಇದನ್ನು ಕಲ್ಪಿಸಿಕೊಡುತ್ತದೆ.

ಇದನ್ನ ನೇರವಾಗಿ ಮನೆಯಲ್ಲಿರುವ ಯುಪಿಎಸ್‌ ಬ್ಯಾಟರಿಗಳಿಗೆ ಸಂಪರ್ಕ ಕೊಡಬಹುದಾಗಿದೆ.

ಇಂತಹ ಸಮಯದಲ್ಲಿ ಎಸ್ಕಾಂನಿಂದ ಪಡೆಯುವ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಬಹುದಾಗಿದೆ.

ನೀವು ಇನ್ನೊಂದು ಮನೆಗೆ ಹೋಗುವುದಾದರೆ ಸುಲಭವಾಗಿ ಕೊಂಡೊಯ್ಯಬಹುದಾಗಿದೆ.