ಕಳೆದ ಕೆಲವು ವರ್ಷಗಳಿಂದೀಚೆಗೆ ವೀರ್ಯ ದಾನಿಗಳ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ.
ಅನೇಕ ಜನರಿಗೆ ವಿಶೇಷವಾಗಿ ಭಾರತದಲ್ಲಿ ವೀರ್ಯದಾನದ ಬಗ್ಗೆ ಅನೇಕ ಮಂದಿಗೆ ಅರಿವು ಕಮ್ಮಿ ಇದೆ.
ಕೆಲವು ದೇಶಗಳಲ್ಲಿ ವೀರ್ಯ ದಾನ ಅನ್ನೋದು ವೃತ್ತಿಯಾಗಿ ಹೊರಹೊಮ್ಮಿದೆ.
ವೀರ್ಯದಾನದಿಂದ ಅನೇಕರು ದುಡ್ಡನ್ನೂ ಸಂಪಾದಿಸುತ್ತಾರೆ.
ವಿಶೇಷವಾಗಿ ಯುಕೆ ರಾಷ್ಟ್ರದ ವೀರ್ಯ ದಾನಿಗಳ ವೀರ್ಯಕ್ಕೆ ಭಾರೀ ಬೇಡಿಕೆ ಇದೆ,
ಬ್ರಿಟನ್‌ನಲ್ಲಿ ಸಂತಾನೋತ್ಪತ್ತಿ ಆರೋಗ್ಯ ಸಮಸ್ಯೆಗಳು ಒಂದು ಪ್ರಮುಖ ಕಾರಣವಾಗಿದೆ.
ಬ್ರಿಟನ್‌ನಲ್ಲಿ ಅನೇಕ ಮಹಿಳೆಯರು ಮತ್ತು ಸಲಿಂಗ ಪ್ರೇಮಿ ದಂಪತಿಗಳು ಗರ್ಭಧರಿಸುವಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಾರೆ.
ಫಲವತ್ತತೆ ಚಿಕಿತ್ಸೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯು ವೀರ್ಯ ದಾನದ ಅಗತ್ಯವನ್ನು ಹೆಚ್ಚಿಸಿದೆ.
ಬ್ರಿಟನ್‌ನಲ್ಲಿ ವೀರ್ಯ ಬ್ಯಾಂಕಿಂಗ್‌ನ ಅನುಕೂಲತೆ ಮತ್ತು ಪ್ರವೇಶದ ಹೆಚ್ಚಳವು ಬೇಡಿಕೆಯನ್ನು ಹೆಚ್ಚಿಸಿದೆ.
ವೀರ್ಯ ಬ್ಯಾಂಕುಗಳು ವೀರ್ಯದ ಫಲವತ್ತತೆಗೆ ಅನುಸಾರವಾಗಿ ವೀರ್ಯದಾನಿಗಳಿಗೆ ಹಣವನ್ನು ನೀಡಲಾಗುತ್ತಿದೆ.