ಅಮ್ಮ ಜೊತೆ ವೆಂಕಟೇಶ್ವರನ ದರ್ಶನ ಪಡೆದ ಶ್ರೀಲೀಲಾ!

ಟಾಲಿವುಡ್ ಟಾಪ್ ನಟಿಯಾಗಿರುವ ಶ್ರೀಲೀಲಾ ತಿರುಮಲದಲ್ಲಿ ಶ್ರೀಗಳ ಆಶೀರ್ವಾದ ಪಡೆದರು.

ಶ್ರೀಲೀಲಾ ಕುಟುಂಬ ಸದಸ್ಯರೊಂದಿಗೆ ಸ್ವಾಮಿ ವೆಂಕಟೇಶ್ವರನ ದರ್ಶನ ಪಡೆದರು.

ಸೋಮವಾರ ಬೆಳಗ್ಗೆ ವಿಐಪಿ ವಿರಾಮದ ವೇಳೆ ಸ್ವಾಮಿಗೆ ಪೂಜೆ ಸಲ್ಲಿಸಿದರು.

ದರ್ಶನದ ನಂತರ ರಂಗನಾಯಕುಲ ಮಂಟಪದಲ್ಲಿ ವೇದ ವಿದ್ವಾಂಸರು ವೇದಾಶಿರ್ವಚನ ನೀಡಿರು

ಭಾನುವಾರ ರಾತ್ರಿ ತಿರುಮಲದಲ್ಲೇ ನಟಿ ಶ್ರೀಲೀಲಾ ತಂಗಿದ್ದರು.

ಸೋಮವಾರ ಬೆಳಗ್ಗೆ ದೇವಸ್ಥಾನಕ್ಕೆ ತೆರಳಿ ವೆಂಕಟೇಶ್ವರನ ದರ್ಶನ ಪಡೆದು ಪ್ರಸಾದ ಸೇವಿಸಿ ವಾಪಸ್ ತೆರಳಿದ್ದಾರೆ.

ದೇವಸ್ಥಾನದಲ್ಲಿ ಶ್ರೀಲೀಲಾ ಕಂಡು ಅಭಿಮಾನಿಗಳು ಕೂಡ ಫುಲ್ ಖುಷ್ ಆಗಿದ್ದಾರೆ.

ಶ್ರೀಲೀಲಾ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದರು.

ಕನ್ನಡದಲ್ಲಿ ಕಿಸ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶ್ರೀಲೀಲಾ.