ಶ್ರೀ ಮಾರಿಕಾಂಬಾ ಜಾತ್ರೆಗೆ ಪೂರ್ವಭಾವಿಯಾಗಿ ಜರಗುವ ಕಾರ್ಯಕ್ರಮಗಳಲ್ಲಿ ಕಲ್ಯಾಣ ಪ್ರತಿಷ್ಠೆಗೆ ಅಗ್ರಸ್ಥಾನವಿದೆ
ಮಾರಿಕಾಂಬೆಯ ಅಷ್ಟಭುಜಗಳ ಮೂರ್ತಿಯನ್ನು ದೇವಸ್ಥಾನದಿಂದ ಹೊರಗಡೆ ಸಭಾಮಂಟಪಕ್ಕೆ ಕರೆತಂದು ಸಮಸ್ತ ಭಕ್ತರ ಸಮ್ಮುಖದಲ್ಲಿ ಮದುವೆಯನ್ನು ಮಾಡಲಾಗುತ್ತದೆ
ಸರಿಯಾಗಿ ಮಧ್ಯರಾತ್ರಿ ಜರಗುವ ವಿಶೇಷವಾದ ಮದುವೆಯಿದು
ಶ್ರೀ ದೇವಿಯ ಮದುವೆಯ ಸಮಾರಂಭದಲ್ಲಿ ವಿಶೇಷವಾಗಿ ನಾಡಿಗರು, ಬಾಬುದಾರರು ಊರ ಗಣ್ಯರು ಸಕಲ ಭಕ್ತಾದಿಗಳು ಪಾಲ್ಗೊಳ್ಳುತ್ತಾರೆ
ಶ್ರೀದೇವಿಯು ಸರ್ವಾಲಂಕಾರ ಭುಷಿತಳಾಗಿ ರಾರಜಿಸುತ್ತಿರುತ್ತಾಳೆ
ಶ್ರೀ ದೇವಿಯ ಮದುವೆಯ ಸಂಪ್ರದಾಯಂದತೆ ಶ್ರೀ ದೇವಿಗೆ ಮಂಗಳ ಸೂತ್ರ ಧಾರಣೆ,
ಗುಡಿಗಾರರ ದ್ರಷ್ಟಿ ಪೂಜೆ, ನಾಡಿಗರ ಪೂಜೆ, ಚಕ್ರಸಾಲಿ ಪೂಜೆ, ಕೇದಾರಿಮನೆತನದ ಪೂಜೆ ಹಾಗೂಪೂಜಾರರ ಪೂಜೆಗಳು ನೆರವೇರುತ್ತವೆ
ಈ ಕಲ್ಯಾಣೊತ್ಸವದಲ್ಲಿ ಬಯಲು ಸೀಮೆಯ ಲಂಬಾಣಿ ಜನಾಗಂದ ಜನರು ವಿಶೇಷವಾಗಿ ಮಹಿಳೆಯರು ತಮ್ಮ ಸಂಪ್ರದಾಯ ಉಡುಗೆ ಧರಿಸಿ ನೃತ್ಯ ಮಾಡುವುದುದು ಮತ್ತು ಸಂಗೀತ ವಾದ್ಯಗಳನ್ನು ನುಡಿಸುವುದು ಮದುವೆಯ ಸಂಭ್ರಮಕ್ಕೆ ಮತ್ತಷ್ಟು ಮೆರಗು ತಂದು ಕೊಡುತ್ತದೆ.
ಈ ಸಲದ ಮದುವೆಯಲ್ಲಿ ತಾಯಿಯು ಗುಲಾಬಿ ರಂಗಿನ ಸೀರೆ ತೊಟ್ಟು ಸರ್ವಾಭರಣ ಭೂಷಿತಳಾಗಿದ್ದಳು
ಎಂಟೂ ಕೈಗಳ ಆಯುಧಗಳೂ ಸ್ವರ್ಣ ಖಚಿತವಾಗಿದ್ದು ನೋಡುಗರ ಕಣ್ಣನ್ನು ಭಕ್ತಿಮಯಗೊಳಿಸಿತ್ತು
Bengaluru Water: ಬೆಂಗಳೂರಿನಲ್ಲಿ ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ ಕಡ್ಡಾಯ!