ಮೈಸೂರು: ಬಹುಶಃ ರಾಜ್ಯ ಸರ್ಕಾರಕ್ಕೆ ಇಷ್ಟೊಂದು ಪರಿಣಾಮಕಾರಿ ರೀತೀಲಿ ತಮ್ಮ ಯೋಜನೆ ತಲುಪಿಸಲು ಸಾಧ್ಯವಾಗಿದೆಯೋ ಇಲ್ವೋ ಗೊತ್ತಿಲ್ಲ
ಆದ್ರೆ ಮೈಸೂರು ದಸರಾ ನಿಮಿತ್ತ ನಡೆಯುತ್ತಿರೋ ಫಲಪುಷ್ಪ ಪ್ರದರ್ಶನದಲ್ಲಿ ಮಾತ್ರ ರಾಜ್ಯ ಸರಕಾರದ ಗ್ಯಾರಂಟಿಗಳನ್ನು ಕಣ್ಣಿಗೆ ಕಟ್ಟುವಂತೆ ರೂಪಿಸಲಾಗಿದೆ
ಒಂದೊಂದು ಯೋಜನೆಯನ್ನು ಅರ್ಥಪೂರ್ಣವಾಗಿ ಪುಷ್ಪಗಳಿಂದ ಮೂಡಿಬರುವಂತೆ ಮಾಡಲಾಗಿದೆ
ಹೌದು, ಕುಪ್ಪಣ್ಣ ಪಾರ್ಕಿನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ರಾಜ್ಯದ ನೂತನ ಸರ್ಕಾರದ ಶಕ್ತಿ ಯೋಜನೆ, ಅನ್ನ ಭಾಗ್ಯ , ಗೃಹಜ್ಯೋತಿ, ಗೃಹಲಕ್ಷ್ಮೀ ಯೋಜನೆಗಳನ್ನು ಹೂವಿನ ಮೂಲಕ ನಿರ್ಮಾಣ ಮಾಡಲಾಗಿದೆ
ವಿಶೇಷವಾಗಿ ಶಕ್ತಿ ಯೋಜನೆ ಪ್ರತೀಕವಾದ ಕೆಎಸ್ಆರ್ಟಿಸಿ ಬಸ್, ಬಸ್ಸನ್ನ ಏರಲು ಮುಂದಾದ ಮಹಿಳೆಯನ್ನು ಕಣ್ಣಿಗೆ ಕಟ್ಟುವಂತೆ ರಚಿಸಲಾಗಿದೆ
ಇನ್ನು ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರೂಪಾಯಿ ನೋಟಿನ ಚಿತ್ರದೊಂದಿಗೆ ಕಾಣಿಸಿಕೊಂಡ ಮಹಿಳೆ, ಅನ್ನಭಾಗ್ಯದ ಅಕ್ಕಿ ಪಡೆಯುತ್ತಿರುವ ಮಹಿಳೆ ಹಾಗೂ ಗೃಹ ಜ್ಯೋತಿಯ ಬಲ್ಬ್ಗಳು ಕೂಡಾ ಹೂಗಳಿಂದ ಭಾರೀ ಆಕರ್ಷಣೀಯವಾಗಿದೆ
ಒಟ್ಟಿನಲ್ಲಿ ಸರ್ಕಾರದ 4 ಗ್ಯಾರಂಟಿಗಳನ್ನು ಕಣ್ಣಿಗೆ ಕಟ್ಟುವಂತೆ ಪುಷ್ಪಗಳಿಂದ್ಲೇ ನಿರ್ಮಿಸಿರವುದು ವಿಶೇಷ