Veerappan ವಿರುದ್ಧ ಹೋರಾಡಿದ ಅರಣ್ಯಾಧಿಕಾರಿಯ ದೇವಸ್ಥಾನ!

ಅರಣ್ಯ ಇಲಾಖೆಯ ಸಿಬ್ಬಂದಿಯೋರ್ವರಿಗೆ ದೇವಸ್ಥಾನ ಕಟ್ಟಲಾಗಿದೆ ಎಂದರೆ ನಂಬುತ್ತೀರಾ?

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ಅರಣ್ಯ ಇಲಾಖೆಯಲ್ಲಿ ಡಿಸಿಎಫ್ ಆಗಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಅವರಿಗೆ ಗ್ರಾಮದ ವತಿಯಿಂದ ದೇವಾಲಯ ನಿರ್ಮಿಸಿ ಪೂಜೆ ಮಾಡಲಾಗುತ್ತಿದೆ

ಅರಣ್ಯಗಳ್ಳ ವೀರಪ್ಪನ್ ಒಳಸಂಚಿನಿಂದ ಡಿಸಿಎಫ್ ಪಿ.ಶ್ರೀನಿವಾಸ್ ಅವರು 1991ರ ನವೆಂಬರ್ 11 ರಂದು ಗೋಪಿನಾಥಂನಿಂದ ಅನತಿ ದೂರದ ಯರ್ಕ್ಯಂ ಹಳ್ಳದ ಬಳಿ ಬರ್ಬರವಾಗಿ ಹತ್ಯೆಗೀಡಾಗಿದ್ದರು

ಮರಗಳ್ಳರು, ಆನೆ ದಂತಕಳ್ಳರ ವಿರುದ್ಧ ಕಾರ್ಯಾಚರಣೆ ನಡೆಸಿ ಕರ್ತವ್ಯದಲ್ಲಿ ಇರುವ ಸಂದರ್ಭದಲ್ಲಿಯೇ ಶ್ರೀನಿವಾಸ್ ಅವರು ಮೃತಪಟ್ಟಿದ್ದರು

ಆದ್ದರಿಂದ ಇವರನ್ನು ಅರಣ್ಯ ಇಲಾಖೆ ಹುತಾತ್ಮರು ಎಂದು ಘೋಷಣೆ ಮಾಡಿ ಸ್ಮಾರಕ ನಿರ್ಮಾಣ ಮಾಡಿದೆ

ಸಾಮಾಜಿಕ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದ ಶ್ರೀನಿವಾಸ್ ಅವರು ಗ್ರಾಮದ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದರು

ಶ್ರೀನಿವಾಸ್ ಅವರು ತಮ್ಮ ವ್ಯಾಪ್ತಿಗೆ ಬರುವ ಹಾಡಿ ಜನಾಂಗದ ಕುಟುಂಬಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ 40 ಕ್ಕೂ ಹೆಚ್ಚು ಮನೆಗಳನ್ನು ಜನರಿಗೆ ನಿರ್ಮಾಣ ಮಾಡಿ ಜನರಲ್ಲಿ ಮನಸಿನಲ್ಲಿ ಉಳಿದಿದ್ದರು

ಆದ್ದರಿಂದ ಗೋಪಿನಾಥಂ ಗ್ರಾಮದಲ್ಲಿ ಗ್ರಾಮಸ್ಥರು ಶ್ರೀನಿವಾಸ್ ಅವರ 2 ಅಡಿಯ ಕಂಚಿನ ಪ್ರತಿಮೆಯನ್ನು ನಿರ್ಮಾಣ ಮಾಡಿ ಪುಟ್ಟ ದೇವಾಲಯವನ್ನು ನಿರ್ಮಾಣ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ

ಅರಣ್ಯ ವಸ್ತು ಸಂಗ್ರಹಾಲಯದಲ್ಲಿ ಶ್ರೀನಿವಾಸ್ ಅವರು ಬಳಸುತ್ತಿದ್ದ ಜೀಪ್ ಹಾಗೂ ಅವರ ಪ್ರತಿಮೆಯನ್ನು ಸಹ ನಿರ್ಮಿಸಲಾಗಿದೆ