ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಉಮಚಗಿ ಗ್ರಾಮಸ್ಥರು ಕೆರೆ ನೀರು ಖಾಲಿ ಮಾಡಿಸಿದ್ದರು
ಆದರೆ ಈಗ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದ್ದು, ಟ್ಯಾಂಕರ್ ಮೂಲಕ ಪೂರೈಕೆ ಮಾಡೋ ಅನಿವಾರ್ಯತೆ ಎದುರಾಗಿದೆ
ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಅನ್ನೋ ಗಾದೆ ಮಾತಿದೆ
ಇದಕ್ಕೆ ನಿದರ್ಶನ ಅನ್ನೋ ರೀತಿಯಲ್ಲಿ ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮಸ್ಥರು ವರ್ತಿಸಿದ್ದು, ಈಗ ಪಶ್ಚತ್ತಾಪ ಪಡ್ತಿದಾರೆ
ದೇಶಿ ಹಸುಗಳ ಸಾಕಾಣಿಕೆಯಲ್ಲಿ ತೊಡಗಿರುವ ಬೆಳಗಾವಿ ಯುವಕ, ಖಿಲಾರಿ ಜಾತಿ ಗೋವಿನ ಬಗ್ಗೆ ತಿಳಿದುಕೊಳ್ಳಿ!
ಗ್ರಾಮದ ಕೆಲವರು ದುಡುಕಿನಲ್ಲಿ ಮಾಡಿದ ಸಣ್ಣ ತಪ್ಪು ಈಗ ಇಡೀ ಗ್ರಾಮಕ್ಕೆ ಕಂಟಕವಾಗಿ ಪರಿಣಮಿಸಿದೆ
ಗ್ರಾಮಸ್ಥರು ಮಾಡಿದ ತಪ್ಪೇನು, ಏನು ಕಂಟಕ ಎದುರಾಗಿದೆ ಅಂತೀರಾ.. ಈ ಸ್ಟೋರಿ ಓದಿ
ಬೇಡ ಬೇಡವೆಂದ್ರೂ ಕೆರೆ ಖಾಲಿ ಮಾಡಿಸಿದ್ದ ಗ್ರಾಮಸ್ಥರು. ಈಗ ಆ ಗ್ರಾಮದಲ್ಲಿ ಕುಡಿಯುವ ನೀರಿಗೂ ತತ್ವಾರ
ಕೆರೆ ನೀರು ಖಾಲಿ ಮಾಡಿಸಿದ್ದ ಜನತೆಯೇ ಈಗ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಗಂಟು ಬಿದ್ದಿದ್ದಾರೆ
ಬೆಳಗಾವಿ ಕಲಾಪದ ಹಿಂದೆ ಇದೆ ಹಲವರ ಶ್ರಮ, ಒಂದು ತಿಂಗಳ ಮುಂಚೆಯಿಂದ ಕೆಲಸ!
ಇದು ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮಸ್ಥರ ವ್ಯಥೆಯಾಗಿದೆ. ಗ್ರಾಮಸ್ಥರು ಪಟ್ಟು ಹಿಡಿದಿದ್ದರಿಂದ ಅಧಿಕಾರಿಗಳು ಎರಡು ತಿಂಗಳ ಹಿಂದೆ ಲಕ್ಷಾಂತರ ರೂಪಾಯಿ ವ್ಯಯಿಸಿ ಕೆರೆ ಖಾಲಿ ಮಾಡಿಸಿದ್ದರು
ಗ್ರಾಮದ ಕೆರೆಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದ. ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು
ಹೀಗಾಗಿ ಕೆರೆ ನೀರು ಖಾಲಿ ಮಾಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದರು. ನೀರು ಕಲುಷಿತಗೊಂಡಿಲ್ಲ ಅಂತ ಲ್ಯಾಬ್ ರಿಪೋರ್ಟ್ ಬಂದ್ರೂ ಗ್ರಾಮಸ್ಥರು ಪಟ್ಟು ಬಿಟ್ಟಿರಲಿಲ್ಲ
ಎರಡು ಬೋರ್ ವೆಲ್ ಕೊರೆದಿದ್ದರೂ ಪ್ರಯೋಜನವಾಗಿಲ್ಲ. ಉಪ್ಪು ನೀರು ಬಿದ್ದಿರೋದ್ರಿಂದ ಬಳಸೋಕೂ ಬರಲ್ಲ ಅಂತ ವರದಿ ಬಂದಿದೆ
ಇದ್ರಿಂದಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇಷ್ಟಾದ್ರೂ ಗ್ರಾಮದ ದಾಹ ತೀರೋದು ಡೌಟ್ ಅನ್ನುತ್ತಿರೋ ಜನತೆ. ತಾವೇ ಮಾಡಿದ ಎಡವಟ್ಟಿಗೆ ಉಮಚಗಿ ಜನತೆ ತಾವೇ ಶಿಕ್ಷೆ ಅನುಭವಿಸ್ತಿದಾರೆ
ದೋಸೆ, ಪೂರಿ ಯಾವ್ದೇ ಇರ್ಲಿ, ಸೈಡಲ್ಲಿ ಈ ಚಟ್ನಿ ಮಾಡಿ ತಿನ್ನಿ