ಈ ಆಟಗಾರ ಅಂದ್ರೆ ಕೊಹ್ಲಿಗೆ ಪಂಚಪ್ರಾಣವಂತೆ!

ವಿರಾಟ್ ಕೊಹ್ಲಿ ತಮ್ಮ ನೆಚ್ಚಿನ ಕ್ರಿಕೆಟಿಗನ ಹೆಸರನ್ನು ಬಹಿರಂಗಪಡಿಸಿದ್ದಾರೆ.

ವಿಶ್ವಕಪ್ ಫೈನಲ್ ಪಂದ್ಯದ ನಂತರ ಕೊಹ್ಲಿ ಒಂದು ತಿಂಗಳ ಕಾಲ ಕ್ರಿಕೆಟ್‌ನಿಂದ ದೂರವುಳಿದಿದ್ದರು.

ಈ ಮೂಲಕ ವಿಶ್ವಕಪ್‌ ನಂತರ ಕೊಹ್ಲಿ ಕುಟುಂಬದ ಜೊತೆ ಕಳೆದಿದ್ದಾರೆ.

ನಂತರ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಮತ್ತೆ ಕ್ರಿಕೆಟ್‌ಗೆ ಮರಳಲಿದ್ದಾರೆ.

ವಿರಾಟ್ ಕೊಹ್ಲಿಯ ಅತ್ಯುತ್ತಮ ಕ್ರಿಕೆಟಿಗನ ಹೆಸರನ್ನು ತಿಳಿಯಲು ಅಭಿಮಾನಿಗಳು ಉತ್ಸುಕರಾಗಿದ್ದರು.

ಅನೇಕರು ಕೊಹ್ಲಿ ಮೆಚ್ಚಿನ ಆಟಗಾರ ಎಂದರೆ ಧೋನಿ ಅಥವಾ ಎಬಿಡಿ ಇರಬಹುದು ಎಂದು ಅಂದುಕೊಂಡಿದ್ದರು.

ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನಲ್ಲಿ ತಮ್ಮ ನೆಚ್ಚಿನ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಎಂದು ಹೇಳಿದ್ದಾರೆ.

ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ100 ಶತಕಗಳನ್ನು ಬಾರಿಸಿದ್ದಾರೆ.

ತಮ್ಮ ಆರಾಧ್ಯ ದೈವ ದಾಖಲೆಯನ್ನು ಮುರಿಯುವುದು ಕನಸಿಗೆ ಸಮಾನ ಎಂದು ಕೊಹ್ಲಿ ಹೇಳಿದ್ದಾರೆ.