ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ತಮ್ಮ ಸಂಬಂಧದಿಂದಲೇ ಸಖತ್ ಸುದ್ದಿಯಾಗಿದ್ರು.
ಪವಿತ್ರಾ-ನರೇಶ್ ಜೊತೆ ಲಿವಿಂಗ್ ಟು ಗೆದರ್ ರಿಲೇಷನ್ ಶಿಪ್ ನಲ್ಲಿ ಇದ್ದಾರೆ ಎನ್ನಲಾಗ್ತಿದೆ.
ಇದೀಗ ನರೇಶ್ ನನ್ನ ಬೇಬಿ ಇಲ್ಲ ಬಿಟ್ಟು ಹೋದಳು ಎಂದು ಕಣ್ಣೀರು ಹಾಕ್ತಿದ್ದಾರೆ.
ನರೇಶ್-ಪವಿತ್ರಾ ಲೋಕೇಶ್ ಇಬ್ಬರೂ ತಮ್ಮ ಸಂಬಂಧದ ವಿಚಾರಕ್ಕೆ ಸುದ್ದಿ ಆಗಿದ್ರು.
ನರೇಶ್-ಪವಿತ್ರಾ ಲೋಕೇಶ್ ಇಬ್ಬರು ಮದುವೆ ಆಗ್ತಾರೆ ಎನ್ನುವ ಸುದ್ದಿ ಕೂಡ ಹಬ್ಬಿತ್ತು.
ಇದೀಗ ನರೇಶ್ ಕಣ್ಣೀರು ಹಾಕ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನರೇಶ್, ‘ನನ್ನ ಬೇಬಿ ಎಲ್ಲೋ ಕಾಣೆಯಾಗಿದೆ. ನಾನು ಎಲ್ಲರ ಬಳಿ ಕೇಳುತ್ತಲೇ ಇದ್ದೇನೆ.
ನನ್ನ ಬೇಬಿ ನಿಮ್ಮ ಕಣ್ಣಿಗೆ ಬಿದ್ದರೆ ಹುಡುಕಿಕೊಡಿ ಸಾಕು” ಎಂದು ನರೇಶ್ ಹೇಳಿದ್ದಾರೆ.
ನಟ ನರೇಶ್ ಮತ್ತೊಂದು ಸಿನಿಮಾ ಪ್ರಚಾರಕ್ಕೆ ಈ ರೀತಿ ಬೇಬಿ ಹುಡುಕಿಕೊಡಿ ಎಂದು ಗಿಮಿಕ್ ಮಾಡಿದ್ದಾರೆ.
‘ವೀರಾಂಜನೆಯಲು ವಿಹಾರಯಾತ್ರ’ ಎಂಬ ಹೊಸ ಸಿನಿಮಾದಲ್ಲಿ ನಟ ನರೇಶ್ ಕಾಣಿಸಿಕೊಳ್ಳಲಿದ್ದಾರೆ
ಈ ಸಿನಿಮಾದಲ್ಲಿ ನರೇಶ್ ಅವರಿಗೆ ಹಾಸ್ಯ ನಟ ಬ್ರಹ್ಮಾನಂದಂ ಸಹ ಜತೆಯಾಗಿದ್ದಾರೆ.