ರಾಜ್ಯ ವಿಶೇಷ ಘಟಕ ಯೋಜನೆಯಡಿ ರಾಜ್ಯ ಮಟ್ಟದ ಎರಡು ದಿನಗಳ ಜನಪರ ಉತ್ಸವ ಸೋಮವಾರ ನಗರದಲ್ಲಿ ಆರಂಭವಾಗಲಿದ್ದು, ವಿವಿಧ‌‌ ಜಿಲ್ಲೆಗಳಿಂದ 60 ಕಲಾ ತಂಡಗಳು, 1,500ಕ್ಕೂ ಅಧಿಕ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‌ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ‌ ಆಶ್ರಯದಲ್ಲಿ‌‌ ನಡೆಯುತ್ತಿದ್ದು ಸರ್ಕಾರದಿಂದ 93 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಉತ್ಸವದಲ್ಲಿ ಪಾಲ್ಗೊಳ್ಳುವ ಕಲಾವಿದರಿಗೆ ನೇರಪಾವತಿ ಮಾಡಲಾಗುವುದು‌ ಎಂದರು.

ಶೇ 50 ರಷ್ಟು ಸ್ಥಳೀಯ ಕಲಾವಿದರಿಗೆ ಉತ್ಸವದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಉಸ್ತುವಾರಿ ಸುರೇಶ್ ಉದ್ಘಾಟನೆ ‌ನೆರವೇರಿಸಲಿದ್ದು, ‌ಕನ್ನಡ ಮತ್ತು ಸಂಸ್ಕೃತಿ ಶಿವರಾಜ ತಂಗಡಗಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.

ಟಿ.ಚನ್ನಯ್ಯ ರಂಗಮಂದಿರ‌ ಹಾಗೂ ಜೂನಿಯರ್‌ ಕಾಲೇಜು ‌ಮೈದಾನದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಮೊದಲ‌ ದಿನ ರಂಗಮಂದಿರ‌‌ದಲ್ಲಿ ಮಧ್ಯಾಹ್ನ 3 ಗಂಟೆಗೆ ರಾಜ್ಯಮಟ್ಟದ ಕವಿಗೋಷ್ಠಿ,‌ ಸಂಜೆ ಜೂನಿಯರ್ ಕಾಲೇಜು‌ ಮೈದಾನದಲ್ಲಿ ಸಾಂಸ್ಕೃತಿಕ ‌ಕಾರ್ಯಕ್ರಮಗಳು ನಡೆಯಲಿವೆ.

ಈಗಾಗಲೇ ಜೂನಿಯರ್ ಕಾಲೇಜು ಮೈಧಾನ ಹಾಗು ರಂಗಮಂದಿರದಲ್ಲಿ ಎಲ್ಲಾ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ.

ಇಂದು ಮಧ್ಯಾಹ್ನ ನಡೆಯುವ ಕವಿಗೋಷ್ಠಿಗೆ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಚಾಲನೆ‌ ‌ನೀಡಲಿದ್ದಾರೆ. ಸಾಹಿತಿ ಸುಬ್ಬು ಹೊಲೆಯಾರ್ ಅಧ್ಯಕತೆ ವಹಿಸಲಿದ್ದಾರೆ. ನೇತ್ರಾವತಿ ‌ಆಶಯ ನುಡಿ‌ಯಲಿದ್ದಾರೆ.

20ಕ್ಕೂ ಅಧಿಕ ಕವಿಗಳು ಭಾಗಿಯಾಗಲಿದ್ದಾರೆ. ನಂತರ ಹಾಡು ಹುಟ್ಟಿದ ಘಳಿಗೆ,‌ ಗಾಯನ, ಮಕ್ಕಳ ರಂಗರೂಪಕ ಕಾರ್ಯಕ್ರಮಗಳು ನಡೆಯಲಿವೆ. ಜೂನಿಯರ್ ಕಾಲೇಜು ಮೈದಾನದಲ್ಲಿ ಸಂಜೆ ‌ಜನಪರ,‌ ಜನಪದ ಮತ್ತು ಗೀತ ಗಾಯನ ಸಂಭ್ರಮ ನಡೆಯಲಿದೆ.

ಬಾನಂದೂರು ಕೆಂಪಯ್ಯ, ಜನ್ನಿ, ಪಿಚ್ಚಳ್ಳಿ‌ ಶ್ರೀನಿವಾಸ್ ‌ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

ರಂಗಮಂದಿರದಲ್ಲಿ ಫೆ.25 ರಂದು ಸಮಕಾಲೀನ ಸಂದರ್ಭದಲ್ಲಿ ದಲಿತ‌ ಸಮುದಾಯ‌ದ ಮುಂದುವರಿದಿರುವ ಸಾಮಾಜಿಕ,‌ ಸಾಂಸ್ಕೃತಿಕ ಮತ್ತು ರಾಜಕೀಯ ತಲ್ಲಣ ಕುರಿತ ವಿಚಾರಗೋಷ್ಠಿ ನಡೆಯಲಿದ್ದು,‌ ದಲಿತ ಮುಖಂಡ ಎನ್.ವೆಂಕಟೇಶ್ ಉದ್ಘಾಟಿಸಲಿದ್ದಾರೆ. ಇಂದೂಧರ ಹೊನ್ನಾಪುರ‌‌ ಅಧ್ಯಕ್ಷತೆ ವಹಿಸಲಿದ್ದು, ಮಾವಳ್ಳಿ ಶಂಕರ್‌ ಭಾಗವಹಿಸಲಿದ್ದಾರೆ.‌ ಸಂವಾದದಲ್ಲಿ ನಮ್ಮೊಂದಿಗೆ ಕಾರ್ಯಕ್ರಮ ಇರಲಿದೆ.

ಸಂಜೆ ಜನಪರ‌ ಗಾಯನ, ಅಂಬೇಡ್ಕರ್ ಕುರಿತು ನೃತ್ಯ ರೂಪಕ‌ ಇರಲಿದೆ. 25ರ ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. ರಾತ್ರಿ ದೇವನಾಂಪ್ರಿಯ ನಾಟಕ‌ ಇರಲಿದೆ. ಜನಪರ‌‌ ನಾದಧ್ವನಿ-ಕಲಾ ವೈಭವ ನಡೆಯಲಿದೆ.

ವಸ್ತು ಪ್ರದರ್ಶನ ನಡೆಯಲಿದ್ದು, ಅಂಬೇಡ್ಕರ್ ‌ಸಾಧನೆ ನಡೆಯಲಿದೆ. ಕೆಜಿಎಫ್ ಭೇಟಿಯ ಕ್ಷಣ ಪ್ರದರ್ಶಿಸಲಾಗುವುದು‌. ಸಿರಿಧಾನ್ಯಗಳ ಪ್ರದರ್ಶನ ಇರಲಿದೆ‌. ರಂಗಮಂದಿರದಲ್ಲಿ ನೋಂದಣಿ ‌ನಡೆಯಲಿದೆ.

ನಚಿಕೇತ ನಿಲಯದಲ್ಲಿ ಊಟದ ವ್ಯವಸ್ಥೆ ಮಾಡಲಿದ್ದು, ಸ್ಥಳೀಯ ಖಾದ್ಯಗಳಿಗೆ ಒತ್ತು ‌ನೀಡಲಾಗಿದೆ. ವಾಸ್ತವ್ಯಕ್ಕೆ ಕೆಇಬಿ, ಒಳಾಂಗಣ ಕ್ರೀಡಾಂಗಣ, ನಾರಾಯಣಿ ಕಲ್ಯಾಣ ‌ಮಂಟಪದಲ್ಲಿ ವ್ಯವಸ್ಥೆ ಮಾಡಲಾಗಿದೆ‌.

ಇಂದಿನಿಂದ ಕೋಲಾರದಲ್ಲಿ ಎರಡು ದಿನಗಳ ಕಾಲ ಜನಪರ ಉತ್ಸವ ಕಾರ್ಯಕ್ರಮ ಹಿನ್ನಲೆ, ಕೋಲಾರ ನಗರದ ಪ್ರಮುಖ ವೃತ್ತದಲ್ಲಿ ವಿದ್ಯುತ್ ದೀಪಾಲಂಕಾರ ಹಾಗೂ ಎಲ್ಲಾ ರಸ್ತೆಗಳ ಮೇಲ್ಬಾಗದಲ್ಲಿ ಬಣ್ಣದ ಬಣ್ಣದ ಪೇಪರ್ ಗಳಿಂದ ಸಿಂಗಾರ ಮಾಡಲಾಗಿದೆ, ರಸ್ತೆ ವಿಭಜಕಕ್ಕೆ ಬಣ್ಣ‌ ಬಳಿಯಲಾಗಿದ್ದು, ಪ್ರಮುಖ ವೃತ್ತದಲ್ಲಿ ಬ್ಯಾನರ್ ಗಳಿಂದ ಶುಭಕೋರಲಾಗಿದೆ.

Koppala: ಒಂದು ಕೆಜಿ ದ್ರಾಕ್ಷಿಗೆ ಬರೋಬ್ಬರಿ ₹8 ಲಕ್ಷ ರೂ; ಕೊಪ್ಪಳದಲ್ಲಿ ಕಣ್ತುಂಬಿಕೊಳ್ಳಲು ಸುವರ್ಣಾವಕಾಶ!