ಗಂಡ-ಹೆಂಡತಿ ಇಬ್ಬರೂ ಐಎಎಸ್, ಐಪಿಎಸ್ ಅಧಿಕಾರಿಗಳು ಎಂಬ ಸುದ್ದಿಯನ್ನು ನಾವು, ನೀವೆಲ್ಲಾ ಸಾಕಷ್ಟು ಕೇಳಿದ್ದೇವೆ
ಆದರೆ ಸೇನೆಯಲ್ಲಿ ಇದು ಅಪರೂಪದಲ್ಲಿಯೇ ಅಪರೂಪ. ಆದರೆ ನಾವಿಲ್ಲಿ ಹೇಳುತ್ತಿರುವ ಈ ದಂಪತಿ ಒಂದು ಅಪರೂಪದ ಸಾಧನೆ ಮಾಡುವ ಮೂಲಕ ವಾಯುಪಡೆಯಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ
ಇವರು ಏರ್ ಮಾರ್ಷಲ್ ಸಾಧನಾ ಸಕ್ಸೇನಾ ಮತ್ತು ಕೆಪಿ ನಾಯರ್
ಈ ದಂಪತಿ ಸೇನೆಯಲ್ಲಿ ಒಂದೇ ಹುದ್ದೆ ತೆಗೆದುಕೊಳ್ಳುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ
UPSC ಪರೀಕ್ಷೆಯಲ್ಲಿ ಪಾಸ್ ಆಗಿ ಮದುವೆಯಾದ ಜೋಡಿ; ಕಪಲ್ ಗೋಲ್ ಅಂದ್ರೆ ಹೀಗಿರ್ಬೇಕು
ವೈದ್ಯರಾಗಿರುವ ಸಾಧನಾ ಸಕ್ಸೇನಾ ನಾಯರ್ ಮೊನ್ನೆ ಅಷ್ಟೇ ಸೋಮವಾರ ಸಶಸ್ತ್ರ ಪಡೆಗಳ ಆಸ್ಪತ್ರೆ ಸೇವೆಯ ಮಹಾನಿರ್ದೇಶಕರಾಗಿ ಬಡ್ತಿ ಪಡೆದರು
ಇವರ ಪತಿ ಪಿ ನಾಯರ್, ನಿವೃತ್ತ ಫೈಟರ್ ಪೈಲಟ್ ಏರ್ ಮಾರ್ಷಲ್ ಆಗಿರುವ ಕೆ ಪಿ ನಾಯರ್ ಅವರು ಈ ಹಿಂದೆ ಐಎಎಫ್ ತಪಾಸಣೆ ಮತ್ತು ವಿಮಾನ ಸುರಕ್ಷತೆಯ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು
ಮತ್ತು 2015ರಲ್ಲಿ ಭಾರತೀಯ ವಾಯುಪಡೆಯ ಡೈರೆಕ್ಟರ್ ಜನರಲ್ ಹುದ್ದೆಯಿಂದ ನಿವೃತ್ತರಾದರು
ಈ ಮೂಲಕ ದೇಶದ ಮೊದಲ ಏರ್ ಮಾರ್ಷಲ್ ಜೋಡಿ ಎಂಬ ಹೆಗ್ಗಳಿಕೆಯನ್ನು ನಾಯರ್ ದಂಪತಿಗಳು ಪಡೆದಿದ್ದಾರೆ
ಕಠಿಣ ಪರಿಶ್ರಮದಿಂದ ಐಎಎಸ್ ಟಾಪರ್ ಆದ ಸೋನಲ್ ಗೋಯೆಲ್ ಅವರ ಸಾಧನೆ ಕಥೆ ಇದು!
ಏರ್ ಮಾರ್ಷಲ್ ಸಾಧನಾ ನಾಯರ್ ಅವರ ಕುಟುಂಬದ ಮೂರು ತಲೆಮಾರುಗಳು ಕಳೆದ ಏಳು ದಶಕಗಳಲ್ಲಿ ಐಎಎಫ್ನಲ್ಲಿ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ
ಸಾಧನಾ ನಾಯರ್ ಶಿಕ್ಷಣ ಪುಣೆಯ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನಿಂದ ಪದವಿ ಪಡೆದರು
ಏರ್ ಮಾರ್ಷಲ್ ಸಾಧನಾ ನಾಯರ್ ಅವರನ್ನು ಡಿಸೆಂಬರ್ 1985 ರಲ್ಲಿ ಭಾರತೀಯ ವಾಯುಪಡೆಗೆ ನಿಯೋಜಿಸಲಾಯಿತು
ಮನೆಯಲ್ಲಿ ಬಡತನ, ಅಪ್ಪ ಆಟೋ ಚಾಲಕ, ಆದ್ರೂ ಛಲ ಬಿಡದೆ ಇವರು ಕಿರಿಯ ಐಎಎಸ್ ಅಧಿಕಾರಿ ಆಗೇ ಬಿಟ್ರು