ಮೊಸರನ್ನು ಈ ಆಹಾರಗಳೊಂದಿಗೆ ತಿನ್ನಬೇಡಿ!
ಕೆಲವು ಆಹಾರಗಳೊಂದಿಗೆ ಮೊಸರನ್ನು ಸೇವಿಸುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ತೊಂದರೆಯಾಗುತ್ತದೆ.
ಆರೋಗ್ಯವಾಗಿರಬೇಕೆಂದರೆ ಯಾವುದೇ ಕಾರಣಕ್ಕೂ ಮೊಸರಿನೊಂದಿಗೆ ಈ 5 ಆಹಾರಗಳನ್ನು ಮಾತ್ರ ಸೇವಿಸಬೇಡಿ.
ಮೊಸರಿನ ಜೊತೆ ಮೀನು ಒಟ್ಟಿಗೆ ಸೇವಿಸಿದಾಗ ಹೊಟ್ಟೆ ಕೆಡುತ್ತದೆ.
ಮಾವು ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸುತ್ತದೆ. ಆದರೆ ಮೊಸರು ದೇಹವನ್ನು ತಂಪಾಗಿಡುತ್ತದೆ.
ನೀವು ಈ ಎರಡನ್ನು ಒಟ್ಟಿಗೆ ಸೇವಿಸಿದಾಗ ಜೀರ್ಣಕ್ರಿಯೆಯು ಅಸಮತೋಲನಗೊಳ್ಳುತ್ತದೆ ಮತ್ತು ಚರ್ಮದ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಈರುಳ್ಳಿಯನ್ನು ಮೊಸರಿನ ಜೊತೆ ತಿಂದಾಗ ಕೆಲವರಿಗೆ ಗ್ಯಾಸ್ಟ್ರಿಕ್ ಮತ್ತು ಹೊಟ್ಟೆ ನೋವು ಉಂಟಾಗುತ್ತದೆ.
ಹಾಲು ಮತ್ತು ಮೊಸರನ್ನು ಒಟ್ಟಿಗೆ ಬೆರೆಸಿ ಕುಡಿದರೆ ಅಸಿಡಿಟಿ, ಎದೆಯುರಿ ಸಮಸ್ಯೆಗಳನ್ನು ಎದುರಿಸುತ್ತೀರಿ.
ಎಣ್ಣೆಯುಕ್ತ ಆಹಾರದ ಜೊತೆಗೆ ಮೊಸರು ಸೇವಿಸಿದರೆ ಜೀರ್ಣಕ್ರಿಯೆ ನಿಧಾನವಾಗುತ್ತದೆ.
ದಿನ ನಿತ್ಯ ಮೊಸರು ತಿನ್ನುವುದರಿಂದ ಹಲವು ಸಮಸ್ಯೆಯಿಂದ ದೂರವಿರಬಹುದು.