ಮೈಸೂರಿನ ಅರಮನೆ ಆವರಣದಲ್ಲಿರುವ ಶ್ರೀಶ್ವೇತ ವರಾಹ ಸ್ವಾಮಿ ದೇವಸ್ಥಾನವು ಶಕ್ತಿ ದೇಗುಲವಾಗಿ ಗುರುತಿಸಿಕೊಂಡಿದೆ
ಮೈಸೂರು: ಪ್ರತಿ ಗೋಡೆಯಲ್ಲೂ ಚಿತ್ರ ವಿಚಿತ್ರ ಎನಿಸಬಹುದಾದ ಚಿತ್ತಾರಗಳು. ಕಣ್ಮನ ಸೆಳೆಯೋ ವಿಶಿಷ್ಟ ಬಗೆಯ ಕೆತ್ತನೆ, ಶ್ವೇತ ವರ್ಣದಿಂದ ಕಂಗೊಳಿಸೋ ದೇವರ ಮೂರ್ತಿ
ಇದುವೇ ಮೈಸೂರಿನ ಅರಮನೆ ಆವರಣದಲ್ಲಿರುವ ಶ್ರೀಶ್ವೇತ ವರಾಹ ಸ್ವಾಮಿ ದೇವಾಲಯದ ಸೊಬಗು
ಹೊಯ್ಸಳರ ಕಾಲದ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣವಾಗಿರುವ ಈ ದೇವಸ್ಥಾನ ಶಕ್ತಿ ದೇಗುಲವಾಗಿ ಗುರುತಿಸಿಕೊಂಡಿದೆ
ಅಂಜನಾದ್ರಿ ಆಂಜನೇಯನ ದರ್ಶನ ಪಡೆದ ಲಕ್ಷಾಂತರ ಭಕ್ತರು!
ಇದನ್ನೂ ಓದಿ
ಈ ದೇವಾಲಯವು ಅರಮನೆ ಆವರಣದ ದಕ್ಷಿಣ ಭಾಗದಲ್ಲಿದ್ದು, ಹೆಸರೇ ಸೂಚಿಸುವಂತೆ ಶ್ವೇತ ವರಾಹ ಸ್ವಾಮಿಯ ಮೂರ್ತಿಯು ಬಿಳಿಯ ಶಿಲೆಯಿಂದ ನಿರ್ಮಿತವಾಗಿದೆ
ಈ ವರಾಹ ಸ್ವಾಮಿಯ ಶಿಲಾಮೂರ್ತಿಯನ್ನು ಚಿಕ್ಕ ದೇವರಾಜ ಒಡೆಯರ್ (1672-1704) ಶ್ರೀರಂಗಪಟ್ಟಣದ ದೇವಾಲಯದಲ್ಲಿ ಆರಂಭದಲ್ಲಿ ಪ್ರತಿಷ್ಠಾಪಿಸಿದ್ದರು
ನಂತರ, ಇದೇ ವಿಗ್ರಹವನ್ನು ಅಲ್ಲಿಂದ ಸ್ಥಳಾಂತರಿಸಲಾಯಿತು ಅನ್ನೋ ಐತಿಹ್ಯವಿದೆ
1829 ರಲ್ಲಿ ಇಲ್ಲಿ ಮೂರನೇ ಕೃಷ್ಣರಾಜ ಒಡೆಯರ್ ಈ ದೇಗುಲವನ್ನು ನಿರ್ಮಿಸಿದರು ಎನ್ನಲಾಗಿದೆ
ಈ ದೇಗುಲದ ವಿಶೇಷತೆ ಏನೆಂದರೆ ಮದುವೆಯಾಗದ ಪುರುಷ ಮತ್ತು ಮಹಿಳೆಯರಿದ್ದರೆ ಇಲ್ಲಿಗೆ ಬಂದು ರಾಹು, ಕೇತು ಶಾಂತಿ ಪೂಜೆ ನಡೆಸಿದರೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಎಂದು ನಂಬಲಾಗಿದೆ
ಈ ದೇಗುಲದ ವಿಶೇಷತೆ ಏನೆಂದರೆ ಮದುವೆಯಾಗದ ಪುರುಷ ಮತ್ತು ಮಹಿಳೆಯರಿದ್ದರೆ ಇಲ್ಲಿಗೆ ಬಂದು ರಾಹು, ಕೇತು ಶಾಂತಿ ಪೂಜೆ ನಡೆಸಿದರೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಎಂದು ನಂಬಲಾಗಿದೆ
ಇನ್ನು ದೇವಾಲಯದೊಳಗೆ ಸಂಪೂರ್ಣವಾಗಿ ವಿಭಿನ್ನ ಅವಧಿಗಳಿಗೆ ಸೇರಿದ ಅನೇಕ ಚಿತ್ರಗಳು ಈ ದೇವಾಲಯದಲ್ಲಿ ಇದೆ
ರಾಮಾಯಣ, ಮಹಾಭಾರತ, ರಾಮಾನುಜಾಚಾರ್ಯರು, ವೈಷ್ಣವರ ಚಿತ್ರಗಳಿವೆ
ವರಾಹ ಸ್ವಾಮಿ ದೇವಾಲಯದ ಹಿಂಭಾಗದಲ್ಲಿ ಶ್ರೀ ಲಕ್ಷ್ಮಿ ಅಮ್ಮನವರ ದೇವಾಲಯವೂ ಇದೆ
ಒಟ್ಟಿನಲ್ಲಿ ಶ್ರೀಶ್ವೇತ ವರಾಹ ಸ್ವಾಮಿ ದೇವಸ್ಥಾನವು ಇಂದಿಗೂ ಹಳೆಯ ಶೈಲಿಯ ನೋಟವನ್ನ ಹೊಂದಿದ್ದು, ಭಕ್ತರ ಪಾಲಿನ ನೆಚ್ಚಿನ ತಾಣವಾಗಿದೆ
ಅಪರೂಪದಲ್ಲಿ ಅಪರೂಪ! ಈ ಆನೆಯ ದಂತ ನೆಲಕ್ಕೆ ತಾಗುತ್ತೆ!
ಇದನ್ನೂ ಓದಿ