ಬೆಳಗಾವಿ: ಗೋಕಾಕ್ ಹೆಸರು ಕೇಳಿದ ತಕ್ಷಣವೇ ನೆನಪಾಗೋದು ಜಲಪಾತ, ಇಲ್ಲವೇ ಕರದಂಟು. ಹೀಗೆ ಗೋಕಾಕ್ ಜೊತೆ ಅಂಟಿಕೊಂಡ ಕರದಂಟಿನ ರಹಸ್ಯ ನಿಮಗೆ ಗೊತ್ತಾ?
ಗೋಕಾಕಿನ ಅಜ್ಜ ಒಬ್ಬರು ಬೆಲ್ಲ, ಅಂಟು, ತುಪ್ಪ, ಒಣಹಣ್ಣು ಬೆರೆಸಿ ಚಕ್ಕೆ ರೀತಿಯ ಸಿಹಿ ಖಾದ್ಯ ತಯಾರಿಸಿದ್ರು. ಅದನ್ನು ಸುತ್ತ ಊರಿನ ಜಾತ್ರೆಗಳಲ್ಲಿ ಮಾರಾಟ ಮಾಡುತ್ತಾ ಇದ್ದರಂತೆ
ವೀಕೆಂಡ್ ಮಜಾಕ್ಕೆ ಬೀದರ್ ಕೋಟೆಗೆ ಬನ್ನಿ; ಇಲ್ಲಿನ ವೈಶಿಷ್ಟ್ಯತೆ ಕಂಡು ಬೆರಗಾಗ್ತೀರ!
ಅವರ ಕೈ ರುಚಿಯ ಸ್ವಾದಕ್ಕೆ ಜನ ಮರುಳಾದ್ರು. ಜನ ಗೋಕಾಕ್ ಅಜ್ಜನ ಕರದಂಟಿಗೆ ಬೇಡಿಕೆಯನ್ನೂ ಹೆಚ್ಚಿಸಿದರು
ಹೇಗೆ ತಯಾರಾಗುತ್ತೆ? ನಿಸರ್ಗದತ್ತವಾಗಿ ಸಿಗುವ ಅಂಟನ್ನು ಬಳಸಿಕೊಂಡು ಈ ಖಾದ್ಯವನ್ನು ತಯಾರಿಸುವುದು ಇದರ ವಿಶೇಷ. ಅಂಟನ್ನು ಕರೆದು ಮಾಡುವುದರಿಂದ ಇದಕ್ಕೆ ಕರದಂಟು ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ