ಪ್ರೀತಿಗಾಗಿ ಕೆಲ ಜನರು ಏನೇನೋ ಮಾಡುತ್ತಾರೆ, ಆದ್ರೆ ಇಂತಹ ಕೆಲಸವನ್ನು ಯಾರು ಮಾಡಲ್ಲ ಬಿಡಿ
ಹೌದು, ಈ ವ್ಯಕ್ತಿ ತನ್ನ ಪ್ರೀತಿಯ ಹೆಂಡತಿಗಾಗಿ ಮಾಡಿದ ತ್ಯಾಗಕ್ಕೆ ಮಾಂಝಿ 'ಮೌಂಟೇನ್ ಮ್ಯಾನ್' ಎಂದು ಫೇಮಸ್ ಆದ್ರು
ಬನ್ನಿ ಈ ಮೌಂಟೇನ್ ಮ್ಯಾನ್ ಜೀವನದಲ್ಲಿ ನಡೆದ ಒಂದು ಘಟನೆ ಬಗ್ಗೆ ತಿಳಿಯೋಣ
ಮಾಂಝಿ ಎನ್ನುವ ಈ ವ್ಯಕ್ತಿ ಒಬ್ಬ ಕೂಲಿ ಕಾರ್ಮಿಕನಾಗಿದ್ದರು
ಆತ ಒಬ್ಬರನ್ನು ಪ್ರೇಮಿಸಿ ಮದುವೆಯೂ ಆಗಿದ್ದ. ಆಕೆಯ ಹೆಸರು ಫಲ್ಗುಣಿ ದೇವಿ ಅಂತ
ತುಂಬಾ ಪ್ರೀತಿಯಿಂದ ಇದ್ದ ಈ ಜೋಡಿಯ ಮೇಲೆ ಯಾವ ಕೆಟ್ಟ ಕಣ್ಣು ಬಿತ್ತೋ ಗೊತ್ತಿಲ್ಲ
ಒಂದು ದಿನ ಫಲ್ಗುಣಿ ಮನೆಯ ಮುಂದಿದ್ದ ಭಯಂಕರವಾದ ಪರ್ವತ ಬಳಿ ಕೆಲಸ ಮಾಡುತ್ತಿರುವಾಗ ಆಯಾ ತಪ್ಪಿ ಬೀಳುತ್ತಾರೆ
ಇದರಿಂದ ಆದ ತೀವ್ರ ಗಾಯದಿಂದ ಅವರನ್ನು ಆಸ್ಪತ್ರೆಗೆ ಸಾಗಿಸಬೇಕಾದ ಪರಿಸ್ಥಿತಿ ಬರುತ್ತದೆ
ಆದ್ರೇನು ಮಾಡೋದು ಮನೆಯ ಮುಂದಿದ್ದ ಪವರ್ತ ದಾಟಿ ಪಟ್ಟಣ ತಲುಪ ಬೇಕಾದ್ರೆ 90ಕೀಮಿ ನಡೆಯಬೇಕು
ಅದನ್ನೂ ಲೆಕ್ಕಿಸದೆ ಮಾಂಝಿ ನಡೆಯಲು ಪ್ರಾರಂಭಿಸುತ್ತಾರೆ, ಆದ್ರೆ ದಾರಿ ಮಧ್ಯೆ ಫಲ್ಗುಣಿ ದೇವಿ ನಿಧನರಾಗುತ್ತಾರೆ
ಈ ಸಿಟ್ಟನ್ನು ಮಾಂಝಿ ಪರ್ವತದ ಮೇಲೆ ತೀರಿಸಿಕೊಳ್ಳಲು ಮುಂದಾಗುತ್ತಾರೆ
ಒಂದು ದಿನ ಹಾರೆ, ಪಿಕ್ಕಸು ಹಿಡಿದು ಬೆಟ್ಟವನ್ನು ಪುಡಿ ಮಾಡಲು ಶುರು ಮಾಡುತ್ತಾರೆ
ಊರಿನ ಜನ ಇವರನ್ನು ಹುಚ್ಚ ಎಂದು ಕರೆಯಲು ಪ್ರಾರಂಭಿಸುತ್ತಾರೆ
22 ವರ್ಷ ನಿರಂತರವಾಗಿ ಇದೇ ಕೆಲಸ ಮಾಡಿದ ಮಾಂಝಿಗೆ ಒಂದು ಆಚ್ಚರಿಯ ಸಂಗತಿ ತಿಳಿಯುತ್ತೆ
ಆದೇನು ಅಂದ್ರೆ ತಾನು 22 ವರ್ಷದಲ್ಲಿ ಪರ್ವತವನ್ನು ಪುಡಿ ಮಾಡಿ 55 ಕಿ.ಮೀ ದೂರದ ರಸ್ತೆಯನ್ನು ಕೇವಲ 15 ಕಿ.ಮೀ ಅಗಲದ ರಸ್ತೆಯನ್ನು ನಿರ್ಮಿಸಿದ್ದೇನೆ ಎಂದು
ಈ ಸುದ್ದಿ ಅಂದಿನ ವಾರ್ತೆ ಪತ್ರಿಕೆಯಲ್ಲಿ ಭಾರೀ ಟ್ರೆಂಡ್ ಆಗಿತ್ತು, ಈ ಕಾರಣಕ್ಕೆ ಮಾಂಝಿಯನ್ನು 'ಮೌಂಟೇನ್ ಮ್ಯಾನ್' ಎಂದು ಕರೆಯುತ್ತಾರೆ.
ಕಪ್ಪು ಇರುವೆಗಳಿಗಿಂತ, ಕೆಂಪು ಇರುವೆಗಳು ಹೆಚ್ಚು ಕಚ್ಚೋದು ಏಕೆ? ಇಲ್ಲಿದೆ ನೋಡಿ ಕಾರಣ