7 ತಿಂಗಳಲ್ಲಿ ಮದ್ಯ ಮಾರಾಟದಿಂದ 22,500 ಕೋಟಿ ಆದಾಯ!
2023ರ ನವೆಂಬರ್ ತಿಂಗಳಲ್ಲಿ29.95 ಲಕ್ಷ ಬಿಯರ್ ಬಾಕ್ಸ್ ಮಾರಾಟವಾಗಿತ್ತು.
ಈ ವರ್ಷದ ನವೆಂಬರ್ ತಿಂಗಳಲ್ಲಿ35.05 ಲಕ್ಷ ಬಿಯರ್ ಬಾಕ್ಸ್‌ಗಳು ಮಾರಾಟವಾಗಿವೆ.
2023ರ ನವೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ ಬಿಯರ್ ಮಾರಾಟ ಶೇಕಡಾ17ರಷ್ಟು ಹೆಚ್ಚಳವಾಗಿದೆ.
ಈ ವರ್ಷದ ನವೆಂಬರ್ ತಿಂಗಳಲ್ಲಿ ಮಾರಾಟವಾದ ಬಿಯರ್ ಪ್ರಮಾಣ ಅಧಿಕವಾಗಿದೆ.
ಕಳೆದ 7 ತಿಂಗಳಲ್ಲಿ ರಾಜ್ಯ ಅಬಕಾರಿ ಇಲಾಖೆಗೆ ಮದ್ಯ ಮಾರಾಟದಿಂದ 22,500 ಕೋಟಿ ಆದಾಯ ಸಂಗ್ರಹವಾಗಿದೆ.
ಮದ್ಯ ಮಾರಾಟವೇ ಸರ್ಕಾರಗಳಿಗೆ ಪ್ರಮುಖ ಆದಾಯದ ಮೂಲವಾಗಿದೆ.
ಅಬಕಾರಿ ಇಲಾಖೆಗೆ ಮದ್ಯ ಮಾರಾಟದಿಂದ ಆದಾಯ ಸಂಗ್ರಹದ ಗುರಿಯನ್ನು ನೀಡಲಾಗುತ್ತದೆ.
ಒಟ್ಟಾರೆ ಚಳಿಗಾಲದ ಪ್ರಭಾವದಿಂದ ಮದ್ಯ ಮಾರಾಟ ಹೆಚ್ಚಳವಾಗಿದೆ.
ಅಬಕಾರಿ ಇಲಾಖೆಗೆ ಹಿಂದಿನ ವರ್ಷಕ್ಕಿಂತ ಹೆಚ್ಚು ಆದಾಯ ಸಂಗ್ರಹವಾಗಿದೆ.