ಹಸಿರು ಈರುಳ್ಳಿ (ಸ್ಪ್ರಿಂಗ್ ಆನಿಯನ್) ಕೂಡ ತರಕಾರಿಗಳಲ್ಲಿ ಒಂದಾಗಿದ್ದು, ಇದನ್ನು ಯಾವುದೇ ಆಹಾರಕ್ಕೆ ಬಳಸಿದರೂ ಕೂಡ ಸಖತ್ ಟೇಸ್ಟಿ ಆಗಿರುತ್ತದೆ

ನಿಮಗಿಷ್ಟವಿದ್ದರೆ ಇದನ್ನು ಬಹುತೇಕ ತರಕಾರಿಗಳೊಂದಿಗೆ ಮಿಕ್ಸ್ ಮಾಡಿ ಸೇವಿಸಬಹುದು ಅಥವಾ ಹಾಗೆಯೂ ಸಹ ಸೇವಿಸಬಹುದು

ಫುಟ್​ಪಾತ್​ ಅಂಗಡಿಗಳಿಂದ ಹಿಡಿದು ಸ್ಟಾರ್ ಹೋಟೆಲ್ಗಳವರೆಗೂ ಅನೇಕ ಭಕ್ಷ್ಯಗಳನ್ನು ಅಲಂಕರಿಸಲು ಹಸಿರು ಈರುಳ್ಳಿಯನ್ನು ಬಳಸಲಾಗುತ್ತದೆ

ಕಾರಣ ಇದು ನೋಡಲು ಆಕರ್ಷಣೀಯವಾಗಿದ್ದು, ಆಹಾರವನ್ನು ಅಲಂಕರಿಸುವುದರಿಂದ ಜನರ ಗಮನವನ್ನು ತನ್ನತ್ತ ಸೆಳೆಯುತ್ತದೆ

Home Interior: ನಿಮ್ಮ ಮನೆಯ ಫ್ಯಾನ್​ ಸ್ಪೀಡಾಗಿ ತಿರುಗ್ತಿಲ್ವಾ? ಹೀಗೆ ಮಾಡಿ ವೇಗ ಹೆಚ್ಚಿಸಿ!

ಒಟ್ಟಾರೆ ಹಸಿರು ಈರುಳ್ಳಿ ಆರೋಗ್ಯಕ್ಕೆ ಹೇಗೆ ಉಪಯುಕ್ತವಾಗಿದೆ ಎಂದು ತಿಳಿಯೋಣ

ಜೀರ್ಣಕಾರಿ ಸಮಸ್ಯೆಗಳು: ಹಸಿರು ತರಕಾರಿಗಳು ಆರೋಗ್ಯಕ್ಕೆ ವರದಾನ ಎಂದೇ ಹೇಳಬಹುದು

ಚಳಿಗಾಲದಲ್ಲಿ ಹಸಿರು ಈರುಳ್ಳಿಗೆ ಬೇಡಿಕೆ ಹೆಚ್ಚು. ನೀವು ಹಸಿರು ಈರುಳ್ಳಿ ಎಲೆಗಳನ್ನು ಸೇವಿಸಿದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ

ಮೂಳೆಗಳನ್ನು ಬಲಪಡಿಸುತ್ತದೆ: ಮೂಳೆಗಳನ್ನು ಬಲಪಡಿಸಲು ನೀವು ಹಸಿರು ಈರುಳ್ಳಿ ಎಲೆಗಳನ್ನು ತಿನ್ನಬಹುದು

Masala Peanuts: ಬೇಕರಿಯಲ್ಲಿ ಸಿಗುವ ಮಸಾಲಾ ಶೇಂಗಾ ಮನೆಯಲ್ಲೇ ಮಾಡಿ; ಇಲ್ಲಿದೆ ರೆಸಿಪಿ

ಮೂಳೆಗಳನ್ನು ಆರೋಗ್ಯಕರವಾಗಿ ಮತ್ತು ಬಲವಾಗಿಡಲು ಇದು ಹೆಚ್ಚು ಉತ್ತಮವೆಂದು ಪರಿಗಣಿಸಲಾಗಿದೆ

ಮಧುಮೇಹ: ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಹಸಿರು ಈರುಳ್ಳಿ ತುಂಬಾ ಸಹಾಯಕವಾಗಿದೆ

ರೋಗನಿರೋಧಕ ಶಕ್ತಿ: ಚಳಿಗಾಲದ ವೇಳೆ ಮನುಷ್ಯರಲ್ಲಿ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ

ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು, ನಿಮ್ಮ ಆಹಾರದಲ್ಲಿ ನೀವು ಆರೋಗ್ಯಕರ ಪದಾರ್ಥಗಳನ್ನು ಮಾತ್ರ ಸೇವಿಸಬೇಕು

Fitness Tips: ಈ ತಪ್ಪುಗಳನ್ನು ಮಾಡುತ್ತಿದ್ದರೆ ಜಪ್ಪಯ್ಯ ಅಂದ್ರೂ ನಿಮ್ಮ ತೂಕ ಕಡಿಮೆ ಆಗಲ್ಲ ಎಚ್ಚರ!