ಕಿಂಗ್ ಕೋಬ್ರಾ ಸೇರಿದಂತೆ ಅನೇಕ ವಿಷಕಾರಿ ಹಾವುಗಳಿವೆ. ಒಂದು ಬಾರಿ ಕಚ್ಚಿದ್ರೆ ಸಾಕು ಮನುಷ್ಯ ಉಳಿಯುವುದೇ ಕಷ್ಟ. ಅವುಗಳ ಕಡಿತವು ಜೀವಿಗಳನ್ನು ಕೊಲ್ಲುತ್ತದೆ. ಅದರಲ್ಲಿಯೂ ತೈಪಾನ್ ಎಷ್ಟು ವಿಷಕಾರಿ ಎಂದರೆ ಅದರ ಒಂದು ಹನಿ ವಿಷ ಅನೇಕ ಮಂದಿಯ ಸಾವಿಗೆ ಕಾರಣವಾಗಿದೆ

ಆಸ್ಟ್ರೇಲಿಯನ್ ಹಾವು ಕರಾವಳಿ ತೈಪಾನ್ ಅತ್ಯಂತ ವಿಷಕಾರಿ ಹಾವುಗಳಲ್ಲಿ ಎರಡನೇ ಸ್ಥಾನದಲ್ಲಿದೆ

 ಆದರೆ ಜಗತ್ತಿನಲ್ಲಿರುವ ಕೆಲವು ಜೀವಿಗಳು ಹಾಲು ಕಚ್ಚದ್ರೂ ಕೂಡ ಸಾಯುವುದಿಲ್ಲ.  ಹಾಗಾದರೆ ಆ ಜೀವಿಗಳು ಯಾವುದು ಎಂದು ತಿಳಿಯೋಣ ಬನ್ನಿ

ಹಾವು ಕಚ್ಚಿದರೂ ಹನಿ ಬ್ಯಾಜರ್​ಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಯಾವುದೇ ರೀತಿಯ ಹಾವು ಕಚ್ಚಿದರೂ ಕೂಡ ವಿಷವು ಇವುಗಳ ದೇಹಕ್ಕೆ ಹರಡುವುದಿಲ್ಲ

ಹನಿ ಬ್ಯಾಜರ್ಗಳು ಹಾವುಗಳನ್ನು ಕೊಂದು ತಿನ್ನುತ್ತವೆ ಎಂಬುವುದು ಕೇಳಿದ್ರೆ ನಿಜಕ್ಕೂ ನಿಮಗೆ ಆಶ್ಚರ್ಯವಾಗಬಹುದು

ಮರದ ಇಲಿ ಇದು ಒಂದು ರೀತಿಯ ಇಲಿ, ಇದು ಹಾವಿನ ವಿಷದಿಂದ ಪ್ರಭಾವಿತವಾಗುವುದಿಲ್ಲ

ಆದರೆ, ದೊಡ್ಡ ಹಾವುಗಳು ಸಾಮಾನ್ಯವಾಗಿ ಅವುಗಳನ್ನು ಸಂಪೂರ್ಣವಾಗಿ ನುಂಗುತ್ತವೆ. ಹಾಗಾಗಿ ಅಂತಹ ಹಾವುಗಳಿಂದ ಅವು ದೂರವಿರಲು ಇಷ್ಟಪಡುತ್ತವೆ

ಕ್ಯಾಲಿಫೋರ್ನಿಯಾದ ಅಳಿಲು ಒಂದು ರೀತಿಯ ಅಳಿಲು

ಇದು ಸಾಮಾನ್ಯವಾಗಿ ಅಮೆರಿಕದಲ್ಲಿ ಸಣ್ಣ ಹುಲ್ಲುಗಾವಲುಗಳು, ಮರದಿಂದ ಆವೃತವಾದ ಬೆಟ್ಟಗಳು ಮತ್ತು ಗ್ರಾನೈಟ್ ಬಂಡೆಗಳಲ್ಲಿ ಕಂಡುಬರುತ್ತದೆ. ಇವು ಹಾವು ಕಚ್ಚಿದರೆ ಸಾಯುವುದಿಲ್ಲ

ಹಂದಿಗೆ ಹಾವು ಕಚ್ಚಿದರೆ ಸಾಯುವುದಿಲ್ಲ. ಏಕೆಂದರೆ ಅದರ ದೇಹದಲ್ಲಿ ವಿಶೇಷ ರೀತಿಯ ರಾಸಾಯನಿಕ ನ್ಯೂರೋಟಾಕ್ಸಿನ್ ಇದ್ದು, ಅದು ಹಾವಿನ ವಿಷವನ್ನು ನಾಶಪಡಿಸುತ್ತದೆ ಮತ್ತು ಅದನ್ನು ಮತ್ತಷ್ಟು ಹರಡಲು ಬಿಡುವುದಿಲ್ಲ

ಸಾಮಾನ್ಯವಾಗಿ ಹೆಚ್ಚಾಗಿ ಮುಳ್ಳುಹಂದಿಯು ಯುರೋಪ್ನಲ್ಲಿ ಕಂಡುಬರುತ್ತದೆ. ಆದರೆ ಇದನ್ನು ಭಾರತದಲ್ಲಿಯೂ ಸಾಕಬಹುದು. ನೋಡಲು ಚಿಕ್ಕದಾಗಿ ಕಾಣುವ ಈ ಪ್ರಾಣಿ ತುಂಬಾ ಧೈರ್ಯಶಾಲಿ. ಹಾವು ಕಚ್ಚಿದರೂ ಅದರ ವಿಷವು ಇದರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ

ಮುಂಗುಸಿಯ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಹಾವು ಎಲ್ಲೇ ಇದ್ದರೂ ಮುಂಗುಸಿಯನ್ನು ತಂದು ಬಿಟ್ಟರೆ ಹಾವು ಓಡಿ ಹೋಗುತ್ತದೆ ಎಂಬ ಮಾತಿದೆ. 

ಇದನ್ನು ಹಾವಿನ ದೊಡ್ಡ ಶತ್ರು ಎಂದು ಪರಿಗಣಿಸಲಾಗಿದೆ. ಮುಂಗಿಸಿಗೆ ಹಾವು ಕಚ್ಚಿದರೂ ಸಹ ಏನೂ ಆಗುವುದಿಲ್ಲ

ಹಲ್ಲಿ ಕಚ್ಚಿದ್ರೆ ಏನಾಗುತ್ತೆ? ಸಾಯೋವಷ್ಟು ವಿಷ ಇದ್ರಲ್ಲಿದ್ಯಾ?

ಒಂದೇ ಒಂದು ಬಲೂನ್‌ನಿಂದ ಇಲಿಗಳನ್ನು ಕೊಲ್ಲದೇ ಹೀಗೆ ಮನೆಯಿಂದ ಓಡಿಸಿ!