ಸಾಕಿದವರನ್ನೇ ಸಾಯಿಸಿದ ಪ್ರಾಣಿಗಳಿವು! ನಿಮ್ಮ ಬಳಿ ಇದ್ದರೆ ಎಚ್ಚರ!

ಮೊದಲೆಲ್ಲ ಪ್ರಾಣಿಗಳನ್ನು ಸಾಕೋದು ಅವಶ್ಯಕವಾಗಿತ್ತು ಆದ್ರೀಗ ಅದು ಫ್ಯಾಷನ್‌ ಆಗಿದೆ

ಹೀಗಾಗಿ ಜನರು ಮನೆಯಲ್ಲಿ ದನ, ನಾಯಿ, ಬೆಕ್ಕು ಸಾಕೋ ಬದಲು ಹಾವು, ಮಂಗ, ಹುಲಿಗಳನ್ನು ಸಾಕುತ್ತಿದ್ದಾರೆ

ಅಂತವರಿಗೆ ಶಾಕ್‌ ಕೋಡೋ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ

ಅದು ಏನು ಅಂತ ನೋಡೋಣ ಬನ್ನಿ

2005 ರಲ್ಲಿ, ದಕ್ಷಿಣ ಆಫ್ರಿಕಾದ ಈ ವ್ಯಕ್ತಿಯ  ಹಿಪ್ಪೋ ಒಂದನ್ನು ನದಿಯಿಂದ ರಕ್ಷಿಸಿದ ನಂತರ ಮರಿ ಹಿಪ್ಪೋವನ್ನು ದತ್ತು ಪಡೆದರು. ನಂತರ ಜೊತೆಗೆ ಚೆನ್ನಾಗಿದ್ರು ಆದರೆ 6 ವರ್ಷಗಳ ನಂತರ, ಹಿಪ್ಪೋ ಮಾರಿಯಸ್‌ನನ್ನು ನದಿಗೆ ಎಳೆದೊಯ್ದು ಸಾಯಿಸಿತು

ಈತ ತನ್ನ ಮನೆಯ ಹಿತ್ತಲಿನಲ್ಲಿ ಸಿಂಹ ಮತ್ತು ಸಿಂಹಿಣಿಯನ್ನು ಸಾಕಿದ ಮಿಚಲ್ ಪ್ರಸೇಕ್, ಅಂತಿಮವಾಗಿ ಅವನನ್ನು ಆ ಸಿಂಹವು ಕೊಂದಿತು

ಫಿಲೆಮನ್ ಮುಲಾಲ ಅವರನ್ನು ತಮ್ಮ ಸಾಕು ನಾಯಿಗಳಾದ ಪಿಟ್‌ಬುಲ್‌ ಕಚ್ಚಿ ಕೊಂದಿತ್ತು

2009ರಲ್ಲಿ ಟ್ರಾವಿಸ್ ಚಿಂಪ್ 55-ವರ್ಷದ ತನ್ನ ಮಾಲಿಕ ಚಾರ್ಲಾ ನ್ಯಾಶ್ ಮೇಲೆ ದಾಳಿ ಮಾಡಿ ಕೊಂದಿತ್ತು

ಜುಲೈ 2009ರಲ್ಲಿ ತಮ್ಮ ಮುದ್ದಿನ ಹೆಬ್ಬಾವು ಜಿಪ್ಸಿ ಈ ದಂಪತಿಯ 2 ವರ್ಷದ ಮಗಳಾದ ಶಾನಿಯಾಳನ್ನು ಕತ್ತು ಹಿಸುಕಿ ಕೊಂದಿತ್ತು

ಸಿಂಥಿಯಾ ಲೀ ಗ್ಯಾಂಬಲ್, ವನ್ಯಜೀವಿ ಸಾಕ್ಷ್ಯಚಿತ್ರ ತಯಾರಕ, ಆಕಸ್ಮಿಕವಾಗಿ ಪಂಜರದ ಬಾಗಿಲು ತೆರೆದಾಗ ತನ್ನ ಮುದ್ದಿನ ಬಂಗಾಳ ಹುಲಿಯಿಂದ ಕೊಲ್ಲಲ್ಪಟ್ಟಳು

ಫ್ಲೋರಿಡಾದಲ್ಲಿ 75 ವರ್ಷ ವಯಸ್ಸಿನ ಕ್ಯಾಸೊವರಿ ತಳಿಗಾರನು 2019ರಲ್ಲಿ ಅವನ ಹಕ್ಕಿಯೊಂದರಿಂದ ಮಾರಣಾಂತಿಕವಾಗಿ ದಾಳಿಗೆ ಒಳಗಾಗಿ ಮಾರಣಾಂತಿಕ ತೀರಿಹೊಗಿದ್ದಾನೆ

ಟೆರ್ರಿ ವ್ಯಾನ್ಸ್ ಗಾರ್ನರ್ ಎಂಬ 69 ವರ್ಷ ವಯಸ್ಸಿನ ರೈತ ತನ್ನ ಸ್ವಂತ ಹಂದಿಗಳ ದಾಳಿಯಿಂದ ಸತ್ತುಹೋದ

2004ರಲ್ಲಿ, ಮಾರ್ಕ್ ವೋಗೆಲ್ ಎಂಬವರು ಮನೆಯಲ್ಲಿ ಸಾಕಿದ ಕಪ್ಪು ಜೇಡಗಳಿಂದ ಮರಣ ಹೊಂದಿದರು 

ಇಂಡೋನೇಷ್ಯಾದ ಆಂಡ್ರ್ಯೂ ಲುಂಬಾಗೊ ಎಂಬ ವ್ಯಕ್ತಿ 9 ನಾಯಿಗಳಿಗೆ ಎರಡು ವಾರಗಳ ಕಾಲ ಆಹಾರ ಮತ್ತು ನೀರು ನೀಡದೆ ರಜೆಯ ಮೇಲೆ ತೆರಳಿದ್ದಾನೆ. ಹಸಿವಿನಿಂದ ಬಳಲುತ್ತಿದ್ದ ನಾಯಿ ಅವನು ಹಿಂತಿರುಗಿದ ತಕ್ಷಣ ಅವನ ಮೇಲೆ ದಾಳಿ ಮಾಡಿ ಕೊಂದು ತಿಂದಿತ್ತು

ಈ ರೀತಿ ಮೇಕೆ, ಗೂಳಿ, ಒಂಟೆ, ಮಂಗ, ಕರಡಿ, ಆನೆಗಳು ಸಾಕಿದ ಮಾಲಿಕನ್ನು ಕೊಂದಿದೆ ಎಂದು ಕೆಲ ವರದಿಗಳು ತಿಳಿಸಿವೆ