ನಿಮ್ಮ ಬಳಿ ಹಳೆಯ ಕಂಚಿ, ರೇಷ್ಮೆ ಸೀರೆಗಳು ಇದ್ದಾವ?
ಹಾಗಿದ್ರೆ ಈ ಅಂಗಡಿಗೆ ತಂದುಕೊಟ್ಟರೆ ನಿಮ್ಗೆ ದುಡ್ಡು ವಾಪಸ್ ಕೊಡ್ತಾರೆ
ಹಾಗಂತ ಇದೇನು ಸಾರಿ ಶಾಪ್ ಅಲ್ಲ ಬದಲಿಗೆ ಇದು ಮೈಸೂರಿನ ಚಾಮುಂಡೇಶ್ವರಿ ಮೆಟಲ್ ಶಾಪ್
ಈ ಕಂಚಿ, ರೇಷ್ಮೆ ಸೀರೆಗಳನ್ನ ಪಡೆದುಕೊಂಡು ಇವ್ರೇನು ಮಾಡ್ತಾರೆ ಅಂತೀರ?
ನಿಜ, ಸೀರೆಯ ಜರಿ ಹಾಗೂ ಅಂಚಿನಲ್ಲಿ ಗೋಲ್ಡ್ ಕಲರ್ ಇರೋದಷ್ಟನ್ನೇ ಇವರು ಪಡೆಯುತ್ತಾರೆ
ಇದನ್ನ ಬಳಪ ಕಲ್ಲು ಬಳಸಿ ಉಜ್ಜಿ ನೋಡುತ್ತಾರೆ
ಏನಾದರು ಸೀರೆ ಜರಿ ಉಜ್ಜಿದಾಗ ಬಳಪದ ಕಲ್ಲಿನಲ್ಲಿ ಬಿಳಿಯ ಬಣ್ಣ ಬಂದರೆ ಅದನ್ನು ಇವರು ಗ್ರಾಹಕರಿಗೆ ತಾವೇ ದುಡ್ಡು ನೀಡಿ ಖರೀದಿಸುತ್ತಾರೆ
ಹಳೆಯ ಕಾಲದ ಸೀರೆಗಳಿಗಂತೂ ಹೆಚ್ಚಿನ ಬೇಡಿಕೆಯೂ ಇರುತ್ತದೆ. ಒಂದೊಮ್ಮೆ ಸೀರೆಯಲ್ಲಿರುವ ಜರಿ ಮೇಲೆ 500 ರಿಂದ 20 ಸಾವಿರ ರೂಪಾಯಿವರೆಗೂ ದುಡ್ಡು ಪಡೆಯಬಹುದು ಅನ್ನೋದಾಗಿ ಚಾಮುಂಡೇಶ್ವರಿ ಮೆಟಲ್ ಶಾಪ್ ಮಾಲೀಕ ಶಾಮಣ್ಣ ರಾವ್ ವಾಕೋಡೆ ತಿಳಿಸುತ್ತಾರೆ
ಹೀಗೆ ಖರೀದಿಸಿದ ಸೀರೆಯ ಜರಿಗಳನ್ನು ಅಂಗಡಿ ಮಾಲೀಕರು ಉಜ್ಜಿ ಪೌಡರ್ ರೂಪಕ್ಕೆ ನಂತರ ಪರಿವರ್ತಿಸುತ್ತಾರೆ
ಇದನ್ನ ಒನ್ ಗ್ರಾಂ ಗೋಲ್ಡ್ ತಯಾರಿಸುವವ ಉತ್ಪಾದಕ ಕಂಪೆನಿಗಳಿಗೆ ನೀಡುತ್ತಾರೆ. ಇದ್ರಿಂದ ಮೆಟಲ್ ಶಾಪ್ ಮಾಲೀಕರು ಕೂಡಾ ಉತ್ತಮ ಲಾಭ ಪಡೆಯುತ್ತಿದ್ದಾರೆ
ಒಟ್ಟಿನಲ್ಲಿ ಸೀರೆ ಕೊಡಿ, ದುಡ್ಡು ಪಡೆಯಿರಿ ಅನ್ನೋ ಈ ಕಾನ್ಸೆಪ್ಟ್ ಈಗ ಮೈಸೂರಿನಲ್ಲಿ ಭಾರೀ ಸುದ್ದಿ ಮಾಡುತ್ತಿದೆ
ಉತ್ತರ ಕರ್ನಾಟಕದಿಂದ ಜೋಗ ಜಲಪಾತಕ್ಕೆ ಹೋಗಿ ಬರಲು ಇದೇ ಬೆಸ್ಟ್ ಪ್ಲಾನ್