ಪಾಲಕ್‌ ತಿನ್ನುವಾಗ ಈ ಎಡವಟ್ಟು ಮಾಡ್ಲೇಬೇಡಿ

ಇಷ್ಟೆಲ್ಲಾ ಪವರ್‌ಪ್ಯಾಕ್ಡ್‌ ಇರುವ ಈ ಸೊಪ್ಪು ಸೇವನೆಯಲ್ಲಿ ಕೆಲವು ಪ್ರಮಾದಗಳನ್ನು ಎಸಗದಂತೆ ತಜ್ಞರು ಎಚ್ಚರಿಸುತ್ತಾರೆ

ಕೆಲವು ಆಹಾರಗಳನ್ನು ಸೇವಿಸಲು ಕೆಲವು ವಿಧಾನಗಳಿರುತ್ತವೆ. ಅದರಲ್ಲೂ ಚಳಿಗಾಲದಲ್ಲಿ ಪಾಲಕ್‌ ಸೇವೆನೆಯಲ್ಲಿ ಈ ಮೂರು ತಪ್ಪುಗಳನ್ನು ಮಾಡಲೇಬಾರದಂತೆ

ಹಸಿ ಸೊಪ್ಪಿನ ಜ್ಯೂಸ್‌ ಪಾಲಕ್‌ ತಿನ್ನುವ ಮೊದಲ ತಪ್ಪು - ಅದನ್ನು ಹಸಿಯಾಗಿ ತಿನ್ನುವುದು. ಆಕ್ಸಲೇಟ್‌ ಹೆಚ್ಚಿನ ಪ್ರಮಾಣದಲ್ಲಿರುವ ಪಾಲಕ್‌ ಇದು ನಿಮ್ಮ ದೇಹದಲ್ಲಿ ಬೆರೆತು ಕಿಡ್ನಿ ಸ್ಟೋನ್‌ ಆಗಬಹುದು

ಹೊಟ್ಟೆಯ ಕೊಬ್ಬನ್ನು ತ್ವರಿತವಾಗಿ ಕಡಿಮೆ ಮಾಡಿಕೊಳ್ಳಬೇಕೆ? ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

ಪಾಲಕ್‌ ಸ್ಮೂಥಿ ಪಾಲಕ್‌ತಿನ್ನುವಾಗ ಮಾಡುವ ಎರಡನೇ ತಪ್ಪು ಎಂದರೆ ಅದನ್ನು ಸ್ಮೂಥಿ ಮಾಡಿ ಸೇವಿಸುವುದು

ಇದನ್ನು ಸ್ಮೂಥಿ ಮಾಡುವುದು ಇಲ್ಲಾ ಅದಕ್ಕೆ ಮೊಸರು, ಬೇರೆ ಹಣ್ಣು, ತರಕಾರಿ ಸೇರಿಸಿ ತಿನ್ನುವುದು ಅಷ್ಟು ಯೋಗ್ಯವಲ್ಲ ಅಂತಾರೆ ವೈದ್ಯರು

ಸಲಾಡ್‌ನಲ್ಲಿ ಹಸಿ ಸೊಪ್ಪು ಹಸಿಯಾಗಿ ಪಾಲಕ್‌ ಅಥವಾ ಇನ್ನಿತರೆ ಸೊಪ್ಪನ್ನು ತಿನ್ನುವುದು ಗ್ಯಾಸ್‌ನಂತಹ ಸಮಸ್ಯೆಗಳನ್ನು ಸೃಷ್ಟಿಸಬಹುದು. ಇದು ಅಜೀರ್ಣ, ಹೊಟ್ಟೆಯುಬ್ಬರ ಹೀಗೆ ಇನ್ನಿತರೆ ಸಮಸ್ಯೆಗಳಿಗೆ ಕಾರಣವಾಗುತ್ತದೆ

ಹಾಗಾದರೆ ಪಾಲಕ್‌ತಿನ್ನುವ ಸರಿಯಾದ ವಿಧಾನ ಏನು? ಪಾಲಕ್‌ ಅನ್ನು ಸರಿಯಾಗಿ ತಿನ್ನುವುದರಿಂದ ಅದರಲ್ಲಿನ ಎಲ್ಲಾ ಪೋಷಕಾಂಶಗಳು ನಮ್ಮ ಮೈಗೂಡುತ್ತವೆ 

ಪಾಲಕ್‌ ಅನ್ನು ಮೊದಲಿಗೆ ಬಿಸಿ ನೀರಿನಲ್ಲಿ ನೆನೆಸಿ ತೊಳೆಯುವುದು ಅದರಲ್ಲಿನ ಆಕ್ಸಲೇಟ್‌ಅನ್ನು ಕಡಿಮೆ ಮಾಡುತ್ತದೆ

ಪಾಲಕ್‌ ಪನ್ನೀರ್‌ ರುಚಿ ಜೊತೆಗೆ ಆರೋಗ್ಯದಾಯಕವಾಗಿದೆ

ಇದನ್ನು ಕೂಡ ಮೊದಲಿಗೆ ಬಿಸಿ ನೀರಿನಲ್ಲಿ ಒಂದು ನಿಮಿಷ ಬೇಯಿ ನಂತರ ತಣ್ಣಿರಿಗೆ ಹಾಕಿ ನುಣ್ಣಗೆ ರುಬ್ಬಿ ಜೀರಿಗೆ, ಕೊತ್ತಂಬರಿ, ಸೋಂಪು ಸೇರಿ ಇತರೆ ಮಸಾಲೆ ಜೊತೆ ಬೆರೆಸಿ ಬೇಯಿಸಬೇಕು

ಈ ಮಿಶ್ರಣಕ್ಕೆ ಅರಿಶಿಣ, ಉಪ್ಪು, ಪನ್ನೀರ್‌ ಸೇರಿಸಿ ಪಾಲಕ್‌ ಪನ್ನೀರ್‌ ಮಾಡಿ ಸೇವಿಸಬಹುದು

ವೀಕೆಂಡ್‌ ಮಜಾಕ್ಕೆ ಬೀದರ್‌ ಕೋಟೆಗೆ ಬನ್ನಿ; ಇಲ್ಲಿನ ವೈಶಿಷ್ಟ್ಯತೆ ಕಂಡು ಬೆರಗಾಗ್ತೀರ!