ಈ ದೇವಾಲಯವು ಪಶ್ಚಿಮ ಗಂಗ ರಾಜವಂಶ, ಪಲ್ಲವ ರಾಜವಂಶ ಮತ್ತು ವಿಜಯನಗರ ಸಾಮ್ರಾಜ್ಯದ ಕಟ್ಟಡಗಳ ವಾಸ್ತುಶಿಲ್ಪದ ಲಕ್ಷಣಗಳನ್ನು ಹೊಂದಿದೆ
ಶ್ರೀ ಧರ್ಮರಾಯ ದೇವಸ್ಥಾನವನ್ನು ಯಾವ ಕಾಲದಲ್ಲಿ ಕಟ್ಟಲಾಗಿದೆ? ದೇವಸ್ಥಾನದ ಮೂಲ ವಿಗ್ರಹಗಳನ್ನು ಯಾರು ಪ್ರತಿಷ್ಠಾಪಿಸಿದರು? ಎಂಬುದಕ್ಕೆ ಖಚಿತ ಮಾಹಿತಿ ಇಲ್ಲ
ಆದ್ರೆ ಈ ದೇವಾಲಯವನ್ನು ಗಂಗರ ಕಾಲದಲ್ಲಿ ಕತ್ತಲಾಗಿತ್ತೆಂದು ಹೇಳಲಾಗುತ್ತಿದೆ. ಶಕ್ತಿ ಪೀಠ ಸ್ಥಾಪಿಸಿ ಶಕ್ತಿ ಆರಾಧನೆ ನಡೆಯುತ್ತಿತ್ತು
ನಂತರ ಚೋಳರು ಮತ್ತು ಪಲ್ಲವರ ಕಾಲದಲ್ಲಿ ಹಂತ ಹಂತವಾಗಿ ದೇವಸ್ಥಾನವು ಜೀರ್ಣೋದ್ಧಾರಗೊಂಡಿತು
ಧರ್ಮರಾಯಸ್ವಾಮಿ ಮೂರ್ತಿಯನ್ನು ಸರ್ಜನಿ ಮುದ್ರೆಯ ಪೀಠಾಸನ ಸ್ಥಿತಿಯಲ್ಲಿ, ಶಂಖಚಕ್ರಗಳನ್ನು ಒಳಗೊಂಡಿರುವ ಅಭಯಾಸ್ತ ಸ್ಥಿತಿಯಲ್ಲಿ ಶ್ರೀ ಕೃಷ್ಣ ಮೂರ್ತಿಯನ್ನು ಸ್ಥಾಪಿಸಲಾಗಿದೆ
ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ, ಗೋಪುರ, ಅಲಂಕೃತ ಸ್ಮಾರಕ ಪ್ರವೇಶ ಗೋಪುರ ಹೊಂದಿದ್ದು, ಇದರ ಪಕ್ಕದಲ್ಲೇ ಗಣೇಶ ದೇವಸ್ಥಾನ ಕೂಡ ಇದ್ದು, ದೇವಾಲಯದ ಎದುರುಗಡೆ ಅರಳಿ ಮರದ ಕೆಳಗೆ ನಗರ ಕಟ್ಟೆ ಇದೆ
ದೇವಸ್ಥಾನದ ಒಳಪ್ರವೇಶಿಸುತ್ತಿದ್ದಂತೆಯೇ ದೀಪಕಂಬ ಕಾಣಬಹುದು. ಸ್ವಲ್ಪ ಮುಂದೆ ಹೋದರೆ ದೊಡ್ಡ ಹೋಮಕುಂಡವಿದೆ
ಗರ್ಭಗುಡಿಯಲ್ಲಿ ಧರ್ಮರಾಯ, ಕೃಷ್ಣ, ಅರ್ಜುನ, ದ್ರೌಪದಿ, ಭೀಮ, ನಕುಲ ಸಹದೇವ ಪೂಜಿಸುವ ದೇವತೆಗಳಲ್ಲಿ ಸೇರಿದ್ದಾರೆ
ಎಲ್ಲ ದೇವೆರಾ ವಿಗ್ರಹಗಳನ್ನು ಹೂವಿನಿಂದ ಅಲಂಕರಿಸಗಿದೆ. ಪ್ರತಿನಿತ್ಯ ಸಾವಿರಾರು ಜನರು ದರ್ಶನ ಪಡೆಯಲು ಬರುತ್ತಾರೆ
ಧರ್ಮರಾಯ ದೇವಸ್ಥಾನ ವಿಶ್ವ ಪ್ರಸಿದ್ಧ ಬೆಂಗಳೂರು ಕರಗ ಉತ್ಸವಕ್ಕೆ ಹೆಸರುವಾಸಿಯಾಗಿದೆ. ಕರಗ ಹಬ್ಬವನ್ನು ಪ್ರತಿ ವರ್ಷ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಆಚರಿಸಲಾಗುತ್ತದೆ
ರಾಜಧಾನಿಯಲ್ಲಿ ಕಂಬಳ ವಹಿಸಿಕೊಳ್ಳುವುದಿದ್ದರೆ ನಿಮಗೇ ಸಿಗುತ್ತೆ ಅದರ ನೇತೃತ್ವ!